This page has not been fully proofread.

೨೨೮
 
ವಿವೇಕಚೂಡಾಮಣಿ
 
[
 
೪೪೮. ಆಕಾಶದಂತೆ ತನ್ನ ಆತ್ಮನು ಅಸಂಗನೆಂದೂ ಉದಾಸೀನ
ನೆಂದೂ ತಿಳಿದುಕೊಂಡ ಯತಿಯು ಆಗಾಮಿಕರ್ಮಗಳಿಂದ ಸ್ವಲ್ಪವೂ
ಎಂದಿಗೂ ಲಿಪ್ತನಾಗುವುದಿಲ್ಲ.
 
[೧ ಆತ್ಮಜ್ಞಾನವಾದಮೇಲೆ ಮುಂದೆ ಮಾಡತಕ್ಕ ಕರ್ಮಗಳಿಂದ.]
 
ನ ನಭೋ ಘಟಯೋಗೇನ ಸುರಾಗಂಧೇನ ಲಿಪ್ಯತೇ ।
ತಥಾಪಾಧಿಯೋಗೇನ ತದ್ಧರ್ಮೆನೆ್ರವ ಲಿಪ್ಯತೇ ॥ ೪೪೯ ॥
 
ನಭಃ = ಆಕಾಶವು ಘಟ ಯೋಗೇನ - ಗಡಿಗೆಯ ಸಂಬಂಧದ ಮೂಲಕ
ಸುರಾಗಂಧೇನ - [ಅದರಲ್ಲಿರುವ ಮದ್ಯದ ವಾಸನೆಯಿಂದ ನ ಲಿಪ್ಯತೇ = ಲಿಪ್ತ
ವಾಗುವುದಿಲ್ಲ, ತಥಾ ಹಾಗೆಯೇ ಆತ್ಮಾ-ಆತ್ಮನು ಉಪಾಧಿಯೋಗೇನ-ಉಪಾಧಿ
ಸಂಬಂಧದ ಮೂಲಕ ತತ್-ಧರ್ಮ – ಅದರ ಧರ್ಮಗಳಿಂದ ನ ಏವ ಲಿಪ್ಯತೇ
ಲಿಪ್ತನಾಗುವುದೇ ಇಲ್ಲ.
 
೪೪೯, ಹೇಗೆ ಆಕಾಶವು ಗಡಿಗೆಯ ಸಂಬಂಧದ ಮೂಲಕ (ಅದರಲ್ಲಿ
ರುವ) ಮದ್ಯದ ವಾಸನೆಯಿಂದ ಲಿಪ್ತವಾಗುವುದಿಲ್ಲವೋ ಹಾಗೆಯೇ ಆತ್ಮನು
ಉಪಾಧಿಯ ಸಂಬಂಧದ ಮೂಲಕ ಅದರ ಧರ್ಮಗಳಿಂದ ಲಿಪ್ತನಾಗುವುದಿಲ್ಲ.
 
[ಸ್ಫೂಲ- ಸೂಕ್ಷ್ಮ ಶರೀರಗಳ ಸಂಬಂಧವಿದ್ದರೂ ಅವುಗಳ ಧರ್ಮಗಳಿಂದ
ಆತ್ಮನು ಲಿಪ್ತನಾಗುವುದಿಲ್ಲ.]
 
ಜ್ಞಾನೋದಯಾತ್ ಪುರಾರಬ್ಧಂ ಕರ್ಮ ಜ್ಞಾನಾನ್ನ ನಶ್ಯತಿ ।
ಅದಾ ಸ್ವಫಲಂ ಲಕ್ಷ ಮುದ್ದಿ
 
ತ್ಕೃಷ್ಟ ಬಾಣವತ್ ॥ ೪೫೦ ॥
 
ಜ್ಞಾನೋದಯಾತ್-ಜ್ಞಾನವು ಉದಯವಾಗುವುದಕ್ಕಿಂತ ಪುರಾ ಮೊದಲೇ
ಆರಬ್ಧಂ - [ಫಲವನ್ನು ಕೊಡುವುದಕ್ಕೆ ಪ್ರಾರಂಭವಾಗಿರುವ ಕರ್ಮ- ಕರ್ಮವು
ಜ್ಞಾನಾತ್ - ಜ್ಞಾನದಿಂದ, ಸ್ವಫಲಂ – ತನ್ನ ಫಲವನ್ನು ಅದತ್ವಾ - ಕೊಡದೆ-
ಲಕ್ಷಂ - ಗುರಿಯನ್ನು ಉದ್ದಿಶ್ಯ - ಉದ್ದೇಶಿಸಿ ಉತ್ಕೃಷ್ಟ, ಬಾಣವತ್ ಬಿಡಲ್ಪಟ್ಟ
ಬಾಣದಂತೆ-ನ ನಶ್ಯತಿ - ನಾಶವಾಗುವುದಿಲ್ಲ.
 
೪೫೦. ಜ್ಞಾನೋದಯಕ್ಕೆ ಮೊದಲೇ ಫಲವನ್ನು ಕೊಡುವುದಕ್ಕೆ
ಆರಂಭವಾಗಿರುವ ಕರ್ಮವು-ಗುರಿಯನ್ನು ಉದ್ದೇಶಿಸಿ ಬಿಟ್ಟ ಬಾಣವು
(ಗುರಿಯನ್ನು ಹೊಡೆಯುವಂತೆ) ತನ್ನ ಫಲವನ್ನು ಕೊಡದೆ ಜ್ಞಾನದಿಂದ
ನಾಶವಾಗುವುದಿಲ್ಲ.