This page has not been fully proofread.

iv
 
ಜಯಾದಿ ಹೋಮಗಳನ್ನು ಹಾಗೂ ಹೋಮಕಾಲದಲ್ಲಿ ಸಂಭವಿಸ
ಬಹುದಾದ ಅನೇಕ ಲೋಪದೋಷಗಳ ಪ್ರಾಯಶ್ಚಿತ್ತಾರ್ಥವಾಗಿ ಪ್ರಾಯಶ್ಚಿತ್ತ
ಹೋಮಗಳನ್ನು ಮಾಡಿ 'ಸಪ್ತತೇ ಅಗ್ನ' ಮಂತ್ರಗಳಿಂದ ಪೂರ್ಣಾಹುತಿಯನ್ನು
ಆಚರಿಸಿದರೆ ಉಪಾಕರ್ಮ ಸಮೃದ್ಧಕರ್ಮವಾಗುತ್ತದೆ.
 
ನಂತರ ಸಂವತ್ಸರ ದೋಷಪರಿಹಾರಾರ್ಥವಾಗಿ ತಿಲ, ಅಕ್ಕಿಹಿಟ್ಟು ಮತ್ತು
ತುಪ್ಪದಿಂದ ಮಿಶ್ರಿತ ಹವಿಸ್ಸಿನಿಂದ ಎರಡು ಕೈಗಳಿಂದ ವಿರಜಾಹೋಮವನ್ನು
ಆಚರಿಸಬೇಕು. ಆನಂತರ ಬ್ರಹ್ಮಯಜ್ಞವನ್ನು ಮಾಡಿ ಅಗ್ನಿ ಮತ್ತು ಋಷಿಗಳಿಗೆ
ನಮಸ್ಕಾರವನ್ನು ಮಾಡಬೇಕು. ಬ್ರಹ್ಮಚಾರಿಗಳು
ಯಶೋಬಲಾಭಿವೃದ್ಧರ್ಥಂ ಪ್ರಾತರಗ್ನಿಕಾರ್ಯವನ್ನು ಆಚರಿಸಬೇಕು.
 
ಆಯುರ್ವಚೆ್ರ
 
ಆಚಾರ್ಯರನ್ನು ದಕ್ಷಿಣೆ, ನೂತನ ವಸ್ತ್ರಾದಿಗಳಿಂದ ಸತ್ಕರಿಸಬೇಕು.
ಋಷಿಗಳನ್ನು ವಿಸರ್ಜಿಸಿ ಪರ್ಜನ್ಯಸೂಕ್ತದಿಂದ ನದಿಯ ನೀರಿನಲ್ಲಿ ಬಿಡಬೇಕು.
 
ಮಾರನೆಯ ದಿನ ಯಥಾಶಕ್ತಿ ಗಾಯತ್ರಿ ಜಪವನ್ನು ಮಾಡಿ ಹಳೆಯ
ಯಜ್ಯೋಪವೀತವನ್ನು ವಿಸರ್ಜಿಸಬೇಕು. ಎಲ್ಲಕ್ಕಿಂತ ಮೊದಲು ದೀಪಾರಾಧನೆ,
ಗಣಪತಿ ಪೂಜೆ, ಪುಣ್ಯಾಹದಿಂದಲೇ ಆರಂಭಿಸಬೇಕು. ನೂತನ ಬ್ರಹ್ಮಚಾರಿಗಳು
ನಾಂದಿ ಪೂಜೆಯನ್ನು ಆಚರಿಸಬೇಕು.
 
ಉಪಾಕರ್ಮದ ಘನತೆ ಜನತೆಗೆ ಅರಿವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸು
ವಂತಾಗಲಿ ಎಂಬ ಸದುದ್ದೇಶದಿಂದ ಈ ಪುಸ್ತಕವನ್ನು ಶ್ರೀ ವಿಷ್ಣುಸಹಸ್ರನಾಮ
ಸತ್ಸಂಗದವರು ಬಿಡುಗಡೆ ಮಾಡಿರುತ್ತೇವೆ.
 
ಈ ಪುಸ್ತಕವನ್ನು ಪ್ರಕಟಿಸಲು ಶ್ರಮಿಸಿದ ವೇ ॥ ಬ್ರ॥ ಶ್ರೀ ಅನಂತಕೃಷ್ಣ
ಶರ್ಮಾ, ವೇ ॥ ಬ್ರ ॥ ಶ್ರೀ ಐ. ಎನ್. ವೆಂಕಟೇಶ ಅವಧಾನಿ, ಶ್ರೀ ಪಾಂಡುರಂಗ
ಶರ್ಮಾ ಮತ್ತು ಶ್ರೀ ನಿತ್ಯಾನಂದ ಪ್ರಿಂಟರ್ ಇವರೆಲ್ಲರಿಗೂ ಹೃತೂರ್ವಕವಾದ
ವಂದನೆಗಳನ್ನು ಸಲ್ಲಿಸುತ್ತೇವೆ.
 
17-11-2007
 
ಬೆಂಗಳೂರು 560 070
 
ಶ್ರೀ ವಿಷ್ಣುಸಹಸ್ರನಾಮ ಸಂಗ