This page has not been fully proofread.

ಪ್ರಸ್ತಾವನೆ
 
ಉಪಾಕರ್ಮವು ವೇದವನ್ನು ಅಧ್ಯಯನ ಮಾಡಲು ಮತ್ತು ಅದರಿಂದ
ಉತ್ತಮ ಫಲಗಳನ್ನು ಪಡೆಯುವಂತಾಗಲು ಮಾಡುವ ಕರ್ಮವು. ಋಗ್ವದಿಗಳು
ಶ್ರಾವಣಮಾಸದ ಶ್ರವಣ ನಕ್ಷತ್ರ ದಿನದಂದು, ಯಜುರ್ವೇದಿಗಳು ಶ್ರಾವಣಶುದ್ಧ
ಪೌರ್ಣಿಮಾ ದಿನದಂದು, ಸಾಮವೇದಿಗಳು ಭಾದ್ರಪದ ಮಾಸದ ಹಸ್ತಾನಕ್ಷತ್ರದ
ದಿನದಂದು ಆಚರಿಸುತ್ತಾರೆ.
 
ಉಪಾಕರ್ಮವನ್ನು ಎರಡು ವಿಧದಲ್ಲಿ ವೇದೋಕ್ತಕರ್ಮಗಳನ್ನು ಶ್ರಾವಣ
ಪೌರ್ಣಿಮೆಯಂದು, ಉತ್ಸರ್ಜನೆಯನ್ನು ಪುಷ್ಯ ಪೌರ್ಣಮಾಸೆಯಲ್ಲಿ ಆಚರಿಸು
ತಾರೆ. "ತೈಷಾಂ ಪೌರ್ಣಮಾಸ್ಕಾಂ ಉತ್ಸರ್ಜನಂ, ಶ್ರಾವಣ್ಯಾಂ ಪೌರ್ಣಮಾಸ್ಯಾಂ
ಉಪಾಕರಣಂ" ಎಂದು ಶಾಸ್ತ್ರಗಳಲ್ಲಿ ಹೇಳಿರುತ್ತಾರೆ. ಋಷಿಋಣವನ್ನು ತೀರಿಸಲು
ವಿಹಿತವಾದ ಕರ್ಮಗಳಲ್ಲಿ ಉಪಾಕರ್ಮೋತ್ಸರ್ಜನೆಯೂ ಒಂದು.
 
ಉತ್ಸರ್ಜನವನ್ನು ಪುಷ್ಯಮಾಸದಲ್ಲಿ ಮಾಡದಿರುವುದರಿಂದ ಆ ಕರ್ಮವನ್ನು
ಉಪಾಕರ್ಮದ ದಿನವೇ ಉಪಾಕರ್ಮದ ಮೊದಲೇ ಆಚರಿಸಬೇಕು. ಉತ್ಸರ್ಜನ
ಕರ್ಮಕ್ಕೆ ಕಾಲಾತೀತವಾದ್ದರಿಂದ, ಕಾಲಾತೀತ ದೋಷಪರಿಹಾರಕ್ಕಾಗಿ
ಪಾಹಿತ್ರಯೋದಶ ಹೋಮವನ್ನು ಚತುಷ್ಪಾತ್ರ ಪ್ರಯೋಗದಿಂದ ಆಚರಿಸಬೇಕು.
 
ಉತ್ಸರ್ಜನ ಕರ್ಮದಲ್ಲಿ ದರ್ಭೆಗಳಿಂದ ರಚಿಸಿದ ಕೂರ್ಚದಲ್ಲಿ ನವಕಾಂಡ
ಋಷಿಗಳ ಆವಾಹನೆಯನ್ನು ಮಾಡಿ ಷೋಡಶೋಪಚಾರ ಪೂಜೆಯನ್ನು ಆಚರಿಸಿ,
ನಂತರದಲ್ಲಿ ಋಷಿಗಳಿಗೆ ತರ್ಪಣವನ್ನು ಕೊಟ್ಟು ಪ್ರತಿಷ್ಠಿತ ಅಗ್ನಿಯಲ್ಲಿ ಷಕ್ಷಾತ್ರ
ಪ್ರಯೋಗದಿಂದ ನವಕಾಂಡ ಋಷಿಗಳ ಮತ್ತು ಚತುರ್ವೇದಗಳ ಹೋಮವನ್ನು
ಮಾಡುತ್ತಾರೆ.
 
ಉಪಾಕರ್ಮಾಂಗವಾಗಿ ಪ್ರತಿಷ್ಠಿತ ಋಷಿಗಳ ಆರಾಧನೆಯನ್ನು ಪುನಃ
ಮಾಡಿ, ಋಷಿಗಳಿಗೆ ತರ್ಪಣವನ್ನು ಕೊಟ್ಟು ಷಕ್ಷಾತ್ರ ಪ್ರಯೋಗದಿಂದ
ಹೋಮವನ್ನು ಮಾಡಿ ಬ್ರಹ್ಮಗಂಟನ್ನು ಬಿಚ್ಚಿ ಯಜ್ಯೋಪವೀತ ಹೋಮವನ್ನು
 
ಆಚರಿಸಬೇಕು.
 
ಹೊಸ ಯಜ್ಯೋಪವೀತದ ಪೂಜೆಯನ್ನು ಮಾಡಿ, ಯಜ್ಯೋಪವೀತವನ್ನು
ದಕ್ಷಿಣೆಸಹಿತ ದಾನಮಾಡಿ ಹಿರಿಯರಿಂದ ಆಶೀರ್ವಾದ ಪಡೆದು, "ಶೌತ ಸ್ಮಾರ್ತ
ಕರ್ಮಾನುಷ್ಠಾನ ಯೋಗ್ಯತಾ ಸಿದ್ಧರ್ಥಂ" ಎಂದು ಹೇಳಿಕೊಂಡು
ಯಜ್ಯೋಪವೀತವನ್ನು ಧಾರಣೆ ಮಾಡಿ ವೇದಾರಂಭವನ್ನು ಮಾಡಬೇಕು.