This page has been fully proofread once and needs a second look.

೧೬೦. ಜಡನಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳು-
ತಾನೆ. ಲೌಕಿಕ ಪಂಡಿತನಾದವನು ಸ್ಥೂಲಶರೀರದಲ್ಲಿಯೂ ಮತ್ತು ಜೀವ-
ನಲ್ಲಿಯೂ[^೧] 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾನೆ. ಆತ್ಮಾನಾತ್ಮ
ವಿವೇಚನದಲ್ಲಿ ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮಸ್ವರೂಪ-
ದಲ್ಲಿಯೇ 'ನಾನು ಬ್ರಹ್ಮ' ಎಂಬ ಬುದ್ಧಿಯುಂಟಾಗುತ್ತದೆ.
 
[ಇಲ್ಲಿ ಮೂಢ, ಕೇವಲ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವ ಪಂಡಿತ ಮತ್ತು
ನಿಜವಾದ ಆತ್ಮಜ್ಞಾನಿ-ಇವರು ಶರೀರಾದಿಗಳಲ್ಲಿ ಅಹಂಬುದ್ಧಿಯನ್ನು ಹೇಗೆ ಮಾಡು-
ತಾರೆ ಎಂಬುದನ್ನು ಹೇಳಿದೆ.
[^೧] ಪ್ರಾಣವೇ ಮೊದಲಾದುವನ್ನು ಉಪಾಧಿಯಾಗಿ ಹೊಂದಿರುವ ಚೈತನ್ಯದಲ್ಲಿ.]
 
ಅತ್ರಾತ್ಮಬುದ್ಧಿಂ ತ್ಯಜ ಮೂಢಬುದ್ದೇ
ತ್ವಙ್ಮಾಂಸ-ಮೇದೋsಸ್ಥಿ-ಪುರೀಷರಾಶೌ ।
ಸರ್ವಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ
ಕುರುಷ್ವ ಶಾಂತಿಂ ಪರಮಾಂ ಭಜಸ್ವ ॥ ೧೬೧ ||
 
ಮೂಢಬುದ್ಧೇ = ಹೇ ಮೂಢಬುದ್ಧಿ, ತ್ವಕ್ - ಮಾಂಸ- ಮೇದಃ- ಅಸ್ಥಿ-
ಪುರೀಷ-ರಾಶೌ = ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ ಇವುಗಳ ರಾಶಿಯಾದ,
ಅತ್ರ = ಈ ಶರೀರದಲ್ಲಿ, ಆತ್ಮಬುದ್ದಿ೦='ನಾನು' ಎಂಬ ಬುದ್ಧಿಯನ್ನು, ತ್ಯಜ= ತೊರೆ;
ಸರ್ವಾತ್ಮನಿ = ಸರ್ವಾತ್ಮವಾದ, ನಿರ್ವಿಕಲ್ಪೇ = ನಿರ್ವಿಕಲ್ಪವಾದ, ಬ್ರಹ್ಮಣಿ = ಬ್ರಹ್ಮ-
ದಲ್ಲಿ [ಆತ್ಮಬುದ್ಧಿಯನ್ನು] ಕುರುಷ್ವ = ಮಾಡು, ಪರಮಾಂ ಶಾಂತಿ೦=ಪರಮ
ಶಾಂತಿಯನ್ನು, ಭಜಸ್ವ = ಪಡೆ.
 
೧೬೧. ಹೇ ಮೂಢಬುದ್ಧಿ! ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ-
ಇವುಗಳ ರಾಶಿಯಾದ ಈ ಶರೀರದಲ್ಲಿ 'ನಾನು' ಎಂಬ ಬುದ್ಧಿಯನ್ನು ಬಿಡು-
ಸರ್ವಾತ್ಮವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ 'ನಾನು' ಎಂಬ ಬುದ್ಧಿಯನ್ನು
ಮಾಡು. ಪರಮಶಾಂತಿಯನ್ನು ಪಡೆ.
 
ದೇಹೇಂದ್ರಿಯಾದಾವಸತಿ ಭ್ರಮೋದಿತಾಂ
ವಿದ್ವಾನಹಂತಾಂ ನ ಜಹಾತಿ ಯಾವತ್ ।
ತಾವನ್ನ ತಸ್ಯಾಸ್ತಿ ವಿಮುಕ್ತಿ ವಾರ್ತಾ-
ಪ್ಯಸ್ತ್ವೇಷ ವೇದಾಂತ-ನಯಾಂತ-ದರ್ಶಿ || ೧೬೨ ||
 
ವಿದ್ವಾನ್=ವೇಚನಕುಶಲನು, ಅಸತಿ=ಅಸತ್ಯವಾದ, ದೇಹೇಂದ್ರಿಯಾದೌ=
ದೇಹೇಂದ್ರಿಯಗಳಲ್ಲಿ, ಭ್ರಮ-ಉದಿತಾಂ=ಭ್ರಾಂತಿಯಿಂದುಂಟಾದ, ಅಹಂತಾಂ =