This page has not been fully proofread.

೧೬೨]
 
ವಿವೇಕಚೂಡಾಮಣಿ
 
೮೭
 
೧೬೦. ಜಡನಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳು
ತಾನೆ. ಲೌಕಿಕ ಪಂಡಿತನಾದವನು ಸ್ಕೂಲಶರೀರದಲ್ಲಿಯೂ ಮತ್ತು ಜೀವ
ನಲ್ಲಿಯೂ 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾನೆ. ಆತ್ಮಾನಾತ್ಮ
ವಿವೇಚನದಲ್ಲಿ ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮಸ್ವರೂಪ
ದಲ್ಲಿಯೇ 'ನಾನು ಬ್ರಹ್ಮ' ಎಂಬ ಬುದ್ಧಿಯುಂಟಾಗುತ್ತದೆ.
 
ಇಲ್ಲಿ ಮೂಢ, ಕೇವಲ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವ ಪಂಡಿತ ಮತ್ತು
ನಿಜವಾದ ಆತ್ಮಜ್ಞಾನಿ-ಇವರು ಶರೀರಾದಿಗಳಲ್ಲಿ ಅಹಂಬುದ್ಧಿಯನ್ನು ಹೇಗೆ ಮಾಡು
ತಾರೆ ಎಂಬುದನ್ನು ಹೇಳಿದೆ.
 
೧ ಪ್ರಾಣವೇ ಮೊದಲಾದುವನ್ನು ಉಪಾಧಿಯಾಗಿ ಹೊಂದಿರುವ ಚೈತನ್ಯದಲ್ಲಿ.
 
ಅತ್ರಾತ್ಮಬುದ್ಧಿಂ ತ್ಯಜ ಮೂಢಬುದ್ದೇ
ತ್ವಾಂಸ-ಮೇದೋsಸ್ಥಿ-ಪುರೀಷರಾಶೆ ।
ಸರ್ವಾತ್ಮನಿ ಬ್ರಹ್ಮಣಿ ನಿರ್ವಿಕ
 
ಕುರುಷ್ಟ ಶಾಂತಿಂ ಪರಮಾಂ ಭಜಸ್ವ ॥ ೧೬೧
 
&
 
ಮೂಢ ಬುದ್ಧ - ಹೇ ಮೂಢಬುದ್ಧಿ, ತ್ವಕ್ - ಮಾಂಸ- ಮೇದಃ- ಅಸ್ಥಿ
ಪುರೀಷ ರಾಶ್ - ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ ಇವುಗಳ ರಾಶಿಯಾದ
ಅತ್ರ - ಈ ಶರೀರದಲ್ಲಿ ಆತ್ಮಬುದ್ದಿ೦- 'ನಾನು' ಎಂಬ ಬುದ್ಧಿಯನ್ನು ತ್ಯಜ= ತೊರೆ;
ಸರ್ವಾತ್ಮನಿ = ಸರ್ವಾತ್ಮವಾದ ನಿರ್ವಿಕ = ನಿರ್ವಿಕಲ್ಪವಾದ ಬ್ರಹ್ಮಣಿ = ಬ್ರಹ್ಮ
ದಲ್ಲಿ [ಆತ್ಮಬುದ್ಧಿಯನ್ನು ಕುರುಷ್ಯ - ಮಾಡು
ಶಾಂತಿಯನ್ನು ಭಜಸ್ವ - ಪಡೆ.
 
K
 
ಪರಮಾಂ ಶಾಂತಿ೦ # ಪರಮ
 
೧೬೧.
 
ಹೇ ಮೂಢಬುದ್ಧಿ! ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ
ಇವುಗಳ ರಾಶಿಯಾದ ಈ ಶರೀರದಲ್ಲಿ 'ನಾನು' ಎಂಬ ಬುದ್ಧಿಯನ್ನು ಬಿಡು.
ಸರ್ವಾತ್ಮವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ 'ನಾನು' ಎಂಬ ಬುದ್ಧಿಯನ್ನು
ಮಾಡು. ಪರಮಶಾಂತಿಯನ್ನು ಪಡೆ.
 
ದೇಹೇಂದ್ರಿಯಾದಾವಸತಿ ಭ್ರಮೋದಿತಾಂ
ವಿದ್ವಾನಹಂತಾಂ ನ ಜಹಾತಿ ಯಾವತ್ ।
ತಾವನ್ನ ತಸ್ಯಾಸ್ತಿ ವಿಮುಕ್ತಿ ವಾರ್ತಾ
 
ಷ ವೇದಾಂತ-ನಯಾಂತ-ದರ್ಶಿ ॥ ೧೬೨
ವಿದ್ವಾನ್- ವಿವೇಚನ ಕುಶಲನು ಅಸತಿ ಅಸತ್ಯವಾದ ದೇಹೇಂದ್ರಿಯಾದ್
ದೇಹೇಂದ್ರಿಯಗಳಲ್ಲಿ ಭ್ರಮ- ಉದಿತಾಂ-ಭ್ರಾಂತಿಯಿಂದುಂಟಾದ ಅಹಂತಾಂ =