This page has not been fully proofread.

೮೬
 
ವಿವೇಕಚೂಡಾಮಣಿ
 
[೧೫೯
 
೧೫೮. ಮೂಳೆಗಳ ರಾಶಿಯಾದ ಮಾಂಸದಿಂದ ಮುಚ್ಚಲ್ಪಟ್ಟಿರುವ
ಮಲಪೂರ್ಣವಾಗಿ ಅತ್ಯಂತ ಕಶ್ಚಲವಾದ ಈ ಶರೀರವು ತನಗಿಂತ ವಿಲಕ್ಷಣ
ವಾದ, ಅರಿಯುವವನಾದ ಆತ್ಮನು ಹೇಗಾದೀತು?
 
ತ್ವಾಂಸ-ಮೇದೋsಸ್ಥಿ-ಪುರೀಷ-ರಾಶಾ-
ವಹಂಮತಿಂ ಮೂಢಜನಃ ಕರೋತಿ ।
ವಿಲಕ್ಷಣಂ ವೇತ್ತಿ ವಿಚಾರಶೀ
 
ನಿಜಸ್ವರೂಪಂ ಪರಮಾರ್ಥಭೂತಮ್ । ೧೫೯
 
ಮೂಢ ಜನಃ – ಮೂಢಜನವು ತ್ವಕ್ - ಮಾಂಸ- ಮೇದಃ ಅಸ್ಥಿ-ಪುರೀಷ.
ರಾಶ್- ಚರ್ಮ ಮಾಂಸ ಮೇದಸ್ಸು ಮೂಳೆ ಮಲ ಇವುಗಳ ರಾಶಿಯಲ್ಲಿ ಅಹಂ
ಮತಿಂ-'ನಾನು' ಎಂಬ ಬುದ್ಧಿಯನ್ನು ಕರೋತಿ - ಮಾಡುತ್ತದೆ; ವಿಚಾರಶೀಲಃ=
ವಿವೇಕಿಯು ನಿಜಸ್ವರೂಪಂಪ ತನ್ನ ಸ್ವರೂಪವನ್ನು ವಿಲಕ್ಷಣಂ - ವಿಲಕ್ಷಣವೆಂದೂ
ಪರಮಾರ್ಥಭೂತಂ – ಸತ್ಯವೆಂದೂ ವೇ - ಅರಿತುಕೊಳ್ಳುತ್ತಾನೆ.
 
೧೫೯. ಚರ್ಮ ಮಾಂಸ ಮೇದಸ್ಸು ಮೂಳೆ ಮಲ-ಇವುಗಳ ರಾಶಿ
ಯಾಗಿರುವ ಈ ಶರೀರದಲ್ಲಿ ಮೂಢಜನವು 'ನಾನು' ಎಂಬ ಬುದ್ಧಿಯನ್ನು
ಮಾಡುತ್ತದೆ. ವಿವೇಕಿಯಾದವನು (ಶರೀರಾದಿಗಳಿಗಿಂತ) ಭಿನ್ನವಾದ ಮತ್ತು
ಪರಮಾರ್ಥವಾದ ತನ್ನ ಸ್ವರೂಪವನ್ನು ಅರಿತುಕೊಳ್ಳುತ್ತಾನೆ.
 
[೧ ನಾನು ಸ್ಕೂಲನು, ನಾನು ಕೃಶನು ಇತ್ಯಾದಿ ಬುದ್ಧಿಯನ್ನು.)
 
ದೇಹೋಽಹಮಿತ್ಯೇವ ಜಡಸ್ಯ ಬುದ್ದಿ-
ರ್ದೆಹೇ ಚ ಜೀವೇ ವಿದುಷಹಂಧೀಃ ।
ವಿವೇಕ-ವಿಜ್ಞಾನವತೋ ಮಹಾತ್ಮನೋ
 
ಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ ॥ ೧೬೦ ॥
 
ಜಡಸ್ಯ - ಜಡನಿಗೆ ದೇಹಃ- ಶರೀರವು ಅಹಂ - ನಾನು ಇತಿ ಏವ ಎಂದೆ
ಬುದ್ಧಿಃ – ಬುದ್ಧಿಯುಂಟಾಗುತ್ತದೆ; ವಿದುಷಃ ತು - ಲೌಕಿಕ ಪಂಡಿತನಿಗೆ ದೇಹೇ.
ಜೀವೇ ಚ ಶರೀರದಲ್ಲಿ ಮತ್ತು ಜೀವನಲ್ಲಿ ಅಹಂಧೀಃ -'ನಾನು' ಎಂಬ ಬುದ್ಧಿಯು
ಉಂಟಾಗುತ್ತದೆ; ವಿವೇಕವಿಜ್ಞಾನವತಃ-ಆತ್ಮಾನಾತ್ಮ ವಿವೇಚನವನ್ನು ಮಾಡಿರುವ
ಮಹಾತ್ಮನಃ - ಮಹಾತ್ಮನಿಗೆ ಸತ್ ಆತ್ಮನಿ = ಅವಿನಾಶಿಯಾದ ಆತ್ಮಸ್ವರೂಪದಲ್ಲಿ
ಅಹಂ ಬ್ರಹ್ಮನಾನು ಬ್ರಹ್ಮವು ಇತಿ ಏವ-ಎಂಬ ಮತಿಃ ಬುದ್ಧಿಯು ಉಂಟಾಗು