This page has not been fully proofread.

೧೫೮]
 
ವಿವೇಕಚೂಡಾಮಣಿ
 
೮೫
 
೧೫೬. ಕೈ ಕಾಲು ಮೊದಲಾದ ಅವಯವಗಳುಳ್ಳ ದೇಹವು ಆತ್ಮನಲ್ಲ;
ಏಕೆಂದರೆ ಅವನು ಯಾವುದಾದರೂ ಒಂದು ಅಂಗವು ನಾಶವಾದರೂ
ಬದುಕಿರುತ್ತಾನೆ. ಮತ್ತು ಆಯಾ ಶಕ್ತಿಯೂ ನಾಶವಾಗುವುದಿಲ್ಲ. ಈ
ಆತ್ಮನು ನಿಯಮಿಸಲ್ಪಡತಕ್ಕವನಲ್ಲ, ಆದರೆ ನಿಯಾಮಕನು.
 
[೧ 'ಜೀವನು ಈ ಮರದ ಒಂದು ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗು
ಇದೆ . . . ಜೀವನು ಇಡೀ ಮರವನ್ನು ಬಿಟ್ಟರೆ ಮರವೆಲ್ಲ ಒಣಗುತ್ತದೆ' (ಛಾಂದೋಗ್ಯ
 
ಉ. ೬. ೧೧. ೨).
 
೨ ಯಾವುದಾದರೂ ಒಂದು ಅಂಗವು ನಾಶವಾದರೂ ಕೃತಕವಾದ ಅಂಗಗಳ
ಮೂಲಕ ಆ ಕಾರ್ಯವನ್ನು ನಿರ್ವಹಿಸಬಹುದು.]
 
ದೇಹ-ತದ್ಧರ್ಮ-ತತ್ಕರ್ಮ-ತದವಾದಿ-ಸಾಕ್ಷಿಣಃ ।
ಸ್ವತ ಏವ ಸ್ವತಃಸಿದ್ಧಂ ತಲಕ್ಷಣ್ಯ ಮಾತ್ಮನಃ
 
॥ ೧೫೭ C
 
ದೇಹ ತದ್ಧರ್ಮ-ತತ್ಕರ್ಮ-ತದವಸ್ಥಾದಿ ಸಾಕ್ಷಿಣಃ- ದೇಹ, ಅದರ ಧರ್ಮ
ಗಳು, ಅದರ ಕರ್ಮಗಳು, ಅದರ ಅವಸ್ಥೆಗಳು ಇವೇ ಮೊದಲಾದುವುಗಳಿಗೆ ಸಾಕ್ಷಿ
ಯಾಗಿರುವ ಆತ್ಮನಃ = ಆತ್ಮನಿಗೆ ಸ್ವತಃ ಏವ – ಸ್ವಭಾವದಿಂದಲೇ ತಲಕ್ಷಣ್ಯ-
ಅದಕ್ಕಿಂತ ವಿಲಕ್ಷಣತ್ವವು ಸ್ವತಃಸಿದ್ಧಂ – ಸ್ವತಃಸಿದ್ಧವಾಗಿದೆ.
 
೧೫೭, ದೇಹ, ಅದರ ಧರ್ಮಗಳು, ಅದರ ಕರ್ಮಗಳು, ಅದರ
ಅವಸ್ಥೆಗಳು- ಇವೇ
ಅವುಗಳಿಗಿಂತ ಸ್ವಭಾವದಿಂದಲೇ
 
ಮೊದಲಾದವುಗಳಿಗೆ ಸಾಕ್ಷಿಯಾಗಿರುವ ಆತ್ಮನು
ವಿಲಕ್ಷಣನೆಂಬುದು ಸ್ವತಃಸಿದ್ಧವಾಗಿದೆ.
 
[೧ ಸ್ಕೂಲತ್ವ ಕೃಶತ್ವ ಮೊದಲಾದುವು.
 
೨ ಗಮನಾಗಮನಗಳು.
 
ಬಾಲ್ಯ ಯೌವನ ಮೊದಲಾದುವು.
 
ಶಲ್ಯರಾಶಿರ್ಮಾಂಸಲಿಪೋ ಮಲಪೂರ್ಣೋsತಿಕಶಲಃ ।
 
ಕಥಂ ಭವೇದಯಂ ವೇತ್ತಾ ಸ್ವಯಮೇತದ್ವಿಲಕ್ಷಣಃ ॥ ೧೫೮ ೧
 
ಶಲ್ಯ ರಾಶಿಃ
ಮೂಳೆಗಳ ರಾಶಿಯಾದ ಮಾಂಸಲಿಃ = ಮಾಂಸದಿಂದ
ಮುಚ್ಚಲ್ಪಟ್ಟಿರುವ ಮಲಪೂರ್ಣಃ = ಮಲದಿಂದ ತುಂಬಿರುವ ಅತಿಕಸ್ಮಲಃ =
ಅತ್ಯಂತ ಕಲವಾದ ಅಯಂ - ಈ ಶರೀರವು ಏತತ್ ವಿಲಕ್ಷಣಃ - ಇದಕ್ಕಿಂತ ವಿಲ
ಕ್ಷಣವಾದ ವೇತ್ತಾ = ಅರಿಯುವವನಾದ ಸ್ವಯಂ = ಆತ್ಮನು ಕಥಂ ಭವೇತ್
 
ಹೇಗಾದೀತು?