This page has been fully proofread once and needs a second look.

ವಿವೇಕಚೂಡಾಮಣಿ
 
[೧೫೫
 
[ಇಲ್ಲಿಂದ ಅನ್ನಮಯಕೋಶದ ಲಕ್ಷಣವನ್ನು ಹೇಳಿದೆ. * 'ಆ ಈ ಪುರುಷನು

ಅನ್ನರಸಮಯನು' ಸ ವಾ ಏಷ ಪುರುಷೋsನ್ನರಸಮಯಃ (ತೈತ್ತಿರೀಯ ಉ.

೨. ೧). ಅನ್ನರಸಮಯನು ಎಂದರೆ ಅನ್ನರಸದ ವಿಕಾರ ಅಥವಾ ಕಾರ್ಯ.]
 
೮೪
 

 
ಪೂರ್ವ೦ ಜನೇರಸಿ ಮೃತೇರಥ ನಾಯಮಸ್ತಿ

ಜಾತಕ್ಷಣಃ ಕ್ಷಣಗುಹೋಣೋsನಿಯತಸ್ವಭಾವಃ

ನೈಕೋ ಜಡಶ್ಚ ಘಟವತ್ಪರಿದೃಶ್ಯಮಾನಃ

ಸ್ವಾತ್ಮಾ ಕಥಂ ಭವತಿ ಭಾವವಿಕಾರವೇತ್ತಾ ॥ ೧೫೫
 
||
 
ಆಯಂ= ಈ ಶರೀರವು, ಜನೇಃ ಪೂರ್ವಮ್ ಅಪಿ = ಜನಿಸುವುದಕ್ಕೆ

ಮೊದಲೂ, ಮೃತೇಃ ಅಥ -= ಸತ್ತ ಮೇಲೆಯೂ, ನ ಆಸ್ತಿ = ಇರುವುದಿಲ್ಲ; ಜಾತ.
-
ಕ್ಷಣಃ = ಕ್ಷಣಕಾಲ ಬದುಕಿರುತ್ತದೆ; ಕ್ಷಣಗುಣಃ = ಕ್ಷಣಿಕವಾದ ಗುಣವುಳ್ಳದ್ದು ;

ಅನಿಯತಸ್ವಭಾವಃ = ನಿಯತವಾದ ಸ್ವಭಾವವಿಲ್ಲದ್ದು ; ನ ಏಕಃ = ಅನೇಕ ರೂಪ
-
ವುಳ್ಳದ್ದು ; ಜಡಃ -= ಜಡವಾದದ್ದು ; ಘಟವತ್ = ಗಡಿಗೆಯಂತೆ, ಪರಿದೃಶ್ಯ-

ಮಾನಃ = ದೃಶ್ಯವಾಗಿದೆ; [ಇದು] ಭಾವ -ವಿಕಾರ -ವೇತ್ತಾ -= ದೇಹಾದಿಸಂಘಾತದ

ವಿಕಾರವನ್ನರಿಯುವ, ಸ್ವಾತ್ಮಾ, =ಆತ್ಮನು, ಕಥಂ ಭವತಿ = ಹೇಗಾದೀತು?
 

 
೧೫೫. ಈ ಶರೀರವು ಹುಟ್ಟುವುದಕ್ಕಿಂತ ಮೊದಲೂ ಸತ್ತಮೇಲೆಯೂ

ಇರುವುದಿಲ್ಲ.
ನಡುವೆ ಕೆಲವು ಕಾಲವಿರುತ್ತದೆ. ಇದು ಕ್ಷಣಿಕವಾದ

ಗುಣಗಳುಳ್ಳದ್ದು, ನಿಯತವಾದ ಸ್ವಭಾವವಿಲ್ಲದ್ದು, ಅನೇಕರೂಪಗಳುಳ್ಳದ್ದು;
[^೧]
ಇದ ಜಡವಾಗಿ ಗಡಿಗೆಯಂತೆ ದೃಶ್ಯವಾಗಿರುತ್ತದೆ. ದೇಹವೇ ಮೊದಲಾದ

ಸಂಘಾತದ ವಿಕಾರಗಳನ್ನು ಅರಿಯುವ ಆತ್ಮನು ಹೇಗಾದೀತು?
 

 
[^ ]ಅವಯವಗಳ ಉಪಚಯ -ಅಪಚಯಗಳಿಂದ ಭಿನ್ನ ಭಿನ್ನವಾದ ರೂಪವನ್ನು

ಹೊಂದುವುದು.]
 

 
ಪಾಣಿ-ಪಾದಾದಿಮಾನ್ ದೇಹೋ ನಾತ್ಮಾ ವ್ಯಂಗೇsಪಿ ಜೀವನಾತ್ ।

ತತ್ತಚ್ಛಕ್ತೇರನಾಶಾಚ್ಛ ನ ನಿಯಮೋಮ್ಯೋ ನಿಯಾಮಕ ।ಕಃ || ೧೫೬
 
||
 
ಪಾಣಿ. -ಪಾದ. -ಆದಿಮಾನ್ = ಕೈ ಕಾಲು ಮೊದಲಾದುವುಗಳನ್ನುಳ್ಳ, ದೇಹಃ
=
ಶರೀರವು, ನ ಆತ್ಮಾ- =ಆತ್ಮನಲ್ಲ; ವ್ಯಂಗೇ ಆಪಿ -= ಯಾವುದಾದರೂ ಒಂದು ಅಂಗವು

ನಾಶವಾದರೂ, ಜೀವನಾತ್ = ಬದುಕಿರುವುದರಿಂದಲೂ, ತತ್-ತತ್.ಶಃ =
-ಶಕ್ತೇಃ=
ಆಯಾ ಶಕ್ತಿಯ, ಅನಾಶಾತ್ ಚ -= ನಾಶವಾಗದೆ ಇರುವುದರಿಂದಲೂ [ಆತ್ಮನಲ್ಲ];

ನ ನಿಯಯ್ಯಃ = ನಿಯಮಿಸಲ್ಪಡತಕ್ಕವನಲ್ಲ, ನಿಯಾಮಕಃ =ನಿಯಾಮಕನು.