This page has not been fully proofread.

ವಿವೇಕಚೂಡಾಮಣಿ
 
ಯುಃ = ಯಾವನು
 
ಮುಂಜಾತ್ = ಮುಂಜವೆಂಬ ಹುಲ್ಲಿನಿಂದ ಇ-
ಕಾಮ್ ಇವ = ದಂಟನ್ನು ಬೇರ್ಪಡಿಸುವಂತೆ ದೃಶ್ಯವರ್ಗಾತ್- ದೃಶ್ಯ ಸಮೂಹದಿಂದ
ಅಸಂಗಂ ಸಂಗರಹಿತನೂ ಅಕ್ರಿಯಂ - ಕ್ರಿಯಾಶೂನ್ಯನೂ ಆದ ಪ್ರತ್ಯಂಚ
ಆತ್ಮಾನಂ - ಪ್ರತ್ಯಗಾತ್ಮನನ್ನು ವಿವಿಚ್ - ಬೇರ್ಪಡಿಸಿ ತತ್ರ - ಆ ಆತ್ಮನಲ್ಲಿ ಸರ್ವ೦-
ಅನಾತ್ಮವರ್ಗವೆಲ್ಲವನ್ನೂ ಪ್ರವಿಲಾಪ್ಯ - ಲಯಹೊಂದಿಸಿ
ತತ್- ಆತ್ಮನಾ = ಆ
ಆತ್ಮಸ್ವರೂಪದಿಂದಲೇ ತಿಷ್ಠತಿ - ನಿಲ್ಲುತ್ತಾನೆಯೊ ಸಃ = ಅವನೇ ಮುಕ್ತಃ -
ಮುಕ್ತನು
 
೧೫೪]
 
೮೩
 
೧೫೩. ಮುಂಜವೆಂಬ ಹುಲ್ಲಿನಿಂದ ಅದರ ದಂಟನ್ನು ಬೇರ್ಪಡಿಸುವಂತೆ
ಯಾವನು ದೃಶ್ಯಸಮೂಹದಿಂದ ಸಂಗರಹಿತನ ಕ್ರಿಯಾಶೂನ್ಯನೂ ಆದ
ಪ್ರತ್ಯಗಾತ್ಮನನ್ನು ಬೇರ್ಪಡಿಸಿ, ಆ ಆತ್ಮನಲ್ಲಿ ಅನಾತ್ಮವರ್ಗವೆಲ್ಲವನ್ನೂ
ಲಯಹೊಂದಿಸಿ ಆ ಆತ್ಮಸ್ವರೂಪದಿಂದಲೇ ನಿಲ್ಲುವನೋ ಅವನೇ ಮುಕ್ತನು.
 
(ಇಲ್ಲಿ ವಿವೇಚನಪ್ರಕಾರವನ್ನು ದೃಷ್ಟಾಂತದ ಮೂಲಕ ಹೇಳಿದೆ.
೧ ಮುಂಜಾದಿವ ಇಕಾಮ (ಕಠ ಉ. ೨. ೬. ೧೭).
೨ ದೇಹೇಂದ್ರಿಯಗಳ ಗುಂಪಿನಿಂದ.
 
ದೇಹೋsಯಮನ್ನಭವನೋನ್ನ ಮಯಸ್ತು ಕೋಶ-
ಶ್ವಾನನ ಜೀವತಿ ವಿನಶ್ಯತಿ ತದ್ವಿಹೀನಃ ।
ತ್ವಕರ್ಮ-ಮಾಂಸ-ರುಧಿರಾಸ್ಥಿ-ಪುರೀಷರಾಶಿ-
ರ್ನಾಯಂ ಸ್ವಯಂ ಭವಿತುಮರ್ಹತಿ ನಿತ್ಯ ಶುದ್ಧ
 
॥ ೧೫೪ ।
 
ಆಯಂ ದೇಹಃ ತು- ಈ ಶರೀರವು ಅನ್ನಭವನಃ = ಅನ್ನದಿಂದ ಉತ್ಪನ್ನ
ವಾದದ್ದು, ಅನ್ನಮಯಃ ಕೋಶಃ = ಅನ್ನಮಯ ಕೋಶವು; ಅನ್ನೇನ - ಅನ್ನದಿಂದ
ಜೀವತಿ - ಬದುಕಿರುವುದು, ತದ್ವಿಹೀನಃ - ಅದಿಲ್ಲದಿದ್ದರೆ ವಿನಶ್ಯತಿ - ನಾಶವಾಗು
ಇದೆ; ತ್ವಕ್.ಚರ್ಮ-ಮಾಂಸ ರುಧಿರ ಅಸ್ಥಿ- ಪುರೀಷ ರಾಶಿಃ = ತ್ವಕ್ಕು, ಚರ್ಮ,
ಮಾಂಸ, ರಕ್ತ, ಮೂಳೆ, ಮಲ ಇವುಗಳ ರಾಶಿಯಾದ ಅಯಂ - ಇದು ಸ್ವಯಂ
ತಾನೇ ನಿತ್ಯ ಶುದ್ಧಃ - ನಿತ್ಯಶುದ್ಧವು ಭವಿತುಂ - ಆಗಲು ನ ಅರ್ಹತಿ – ಅರ್ಹವಲ್ಲ.
 
T
 
೧೫೪. ಈ ಶರೀರವು ಅನ್ನದಿಂದ ಹುಟ್ಟಿದೆ, ಅನ್ನಮಯಕೋಶವಾಗಿದೆ.
ಇದು ಅನ್ನದಿಂದ ಬದುಕಿರುವುದು, ಅದಿಲ್ಲದಿದ್ದರೆ ನಾಶವಾಗುತ್ತದೆ. ತ್ವಕ್ಕು
ಚರ್ಮ ಮಾಂಸ ರಕ್ತ ಮಳೆ ಮಲ ಇವುಗಳ ರಾಶಿಯಾಗಿರುವ ಈ
ಶರೀರವು ನಿತ್ಯಶುದ್ಧವಾದ ಆತ್ಮವಸ್ತುವಾಗಲಾರದು.