2023-02-20 15:03:56 by ambuda-bot
This page has not been fully proofread.
೧೪೬]
ವಿವೇಕಚೂಡಾಮಣಿ
೧೪೫. ಸಂಸಾರವೆಂಬ ವೃಕ್ಷಕ್ಕೆ ಅಜ್ಞಾನವೇ ಬೀಜವು, ದೇಹ
ದಲ್ಲಿರುವ ಆತ್ಮಬುದ್ಧಿಯೇ ಮೊಳಕೆಯು, ಆಸಕ್ತಿಯೇ ಚಿಗುರು, ಕರ್ಮವೇ
ನೀರು, ಶರೀರವೇ ಮಧ್ಯಭಾಗವು, ಪ್ರಾಣಗಳೇ ಕೊಂಬೆಗಳು, ಇಂದ್ರಿಯ
ಸಮೂಹವೇ ಕೊಂಬೆಯ ತುದಿಗಳು, ವಿಷಯಗಳೇ ಪುಷ್ಪಗಳು, ಬಗೆಬಗೆಯ
ಕರ್ಮಗಳಿಂದ ಉತ್ಪನ್ನವಾದ ಬಹುವಿಧವಾದ ದುಃಖವೇ ಫಲವು; ಇಲ್ಲಿ
ಫಲವನ್ನು ಅನುಭವಿಸುವ ಜೀವನೇ ಪಕ್ಷಿಯು.
೭೯
[೧ ವೇದಾಂತದಲ್ಲಿ ಸಂಸಾರವನ್ನು ವೃಕ್ಷಕ್ಕೆ ಹೋಲಿಸುವುದು ಸಾಮಾನ್ಯವಾಗಿದೆ.
ಕರೋಪನಿಷತ್ತಿನ ೬. ೧ನ್ನೂ ಗೀತೆಯ ೧೫ನೆಯ ಅಧ್ಯಾಯವನ್ನು ನೋಡಿ.
೨ ಎರಡು ಪಕ್ಷಿಗಳು ಒಂದು ಮರವನ್ನು ಆಶ್ರಯಿಸಿಕೊಂಡಿವೆಯೆಂದು ಮುಂಡ
ಕೋವನಿಷತ್ತು (೩, ೧) ಹೇಳುತ್ತದೆ. ಇವೆರಡರಲ್ಲಿ ಒಂದು ಜೀವಾತ್ಮ, ಮತ್ತೊಂದು
ಪರಮಾತ್ಮ)
ಅಜ್ಞಾನಮೂಲೋಯವನಾತ್ಮಬಂಧ
ನೈಸರ್ಗಿಕೋನಾದಿರನಂತ ಈರಿತಃ ।
ಜನ್ಮಾಪ್ಯಯ-ವ್ಯಾಧಿ-ಜರಾದಿದುಃಖ-
ಪ್ರವಾಹವಾತಂ ಜನಯತ್ಯಮುಷ್ಕ
। ೧೪೬ ॥
ಆ ಯಂ. ಈ
ಅಜ್ಞಾನಮೂಲಃ - ಅಜ್ಞಾನವನ್ನೇ ಮೂಲವಾಗಿ ಉಳ್ಳ
ಅನಾತ್ಮಬಂಧಃ - ಅನಾತ್ಮವೆಂಬ ಬಂಧವು ನೈಸರ್ಗಿಕ = ನೈಸರ್ಗಿಕವಾಗಿಯೂ
ಅನಾದಿಃ = ಅನಾದಿಯಾಗಿಯೂ ಅನಂತಃ – ಅನಂತವಾಗಿಯೂ [ಇರುವುದೆಂದು)
ಈರಿತಃ = ಹೇಳಲ್ಪಟ್ಟಿದೆ; [ಇದು] ಅಮುಷ್ಯ - ಇವನಿಗೆ ಜನ್ಮ ಅವ್ಯಯ ವ್ಯಾಧಿ.
ಜರಾ. ಆದಿ-ದುಃಖ, ಪ್ರವಾಹ ಪಾತಂ = ಜನ್ಮ ನಾಶ ವ್ಯಾಧಿ ಮುಪ್ಪು ಮೊದಲಾದ
ದುಃಖಪ್ರವಾಹದಲ್ಲಿ ಪತನವನ್ನು ಜನಯತಿ = ಉಂಟುಮಾಡುತ್ತದೆ.
೧೪೬. ಈ ಅನಾತ್ಮಬಂಧವು ಅಜ್ಞಾನದಿಂದ ಉಂಟಾಗಿದೆ. ಇದು
ನೈಸರ್ಗಿಕವಾಗಿಯೂ ಅನಾದಿಯಾಗಿಯೂ ಅನಂತವಾಗಿಯೂ ಇದೆಯೆಂದು
ಹೇಳಲ್ಪಟ್ಟಿದೆ. ಇದು ಜೀವನನ್ನು ಜನ್ಮ ನಾಶ ವ್ಯಾಧಿ ಮುಪ್ಪು ಮೊದ
ಲಾದ ದುಃಖಪ್ರವಾಹದಲ್ಲಿ ಬೀಳುವಂತೆ ಮಾಡುತ್ತದೆ.
[೧ ಇದು ಬೇರೆ ಕಾರಣವನ್ನು ಅಪೇಕ್ಷಿಸದೆ ತಾನಾಗಿಯೇ ಹುಟ್ಟುತ್ತದೆ.
೨ ಇದರ ಆದಿಯಾಗಲಿ ಮಧ್ಯವಾಗಲಿ ಅಂತವಾಗಲಿ ಕಾಣುವುದಿಲ್ಲ' ನಾಂತೋ
ನ ಚಾದಿರ್ನ ಚ ಸಂಪ್ರತಿಷ್ಠಾ (ಗೀತಾ ೧೫. ೩). ]