This page has been fully proofread once and needs a second look.

ಮನಃ- ಅಹಂಕೃತಿ-ವಿಕ್ರಿಯಾಣಾಂ=ಮನಸ್ಸು ಅಹಂಕಾರ ಇವುಗಳ ವಿಕಾರ-
ಗಳ, ದೇಹ-ಇಂದ್ರಿಯ-ಪ್ರಾಣ-ಕೃತಕ್ರಿಯಾಣಾಂ=ದೇಹೇಂದ್ರಿಯಪ್ರಾಣಗಳಿಂದ
ಮಾಡಲ್ಪಟ್ಟ ಕ್ರಿಯೆಗಳ, ಜ್ಞಾತಾ = ಜ್ಞಾತೃವು, ಅಯಃ-ಅಗ್ನಿ ವತ್= ಕಬ್ಬಿಣದಲ್ಲಿರುವ
ಅಗ್ನಿಯಂತೆ, ತಾನ್ = ಅವುಗಳನ್ನು, ಅನುವರ್ತಮಾನಃ=ಅನುಸರಿಸುತ್ತಿರುವವನಾಗಿ,
ಕಿಂಚನ ನ ಚೇಷ್ಟತೇ = ಏನನ್ನೂ ಮಾಡುವುದಿಲ್ಲ, ನ ಉ ವಿಕರೋತಿ = ವಿಕಾರ-
ವನ್ನೂ ಹೊಂದುವುದಿಲ್ಲ.
 
೧೩೩, ಮನಸ್ಸು ಅಹಂಕಾರ ಇವುಗಳ ವಿಕಾರಗಳನ್ನೂ, ದೇಹೇಂದ್ರಿಯ
ಪ್ರಾಣಗಳಿಂದಾಗುವ ಕ್ರಿಯೆಗಳನ್ನೂ ಅರಿಯತಕ್ಕವನು-ಕಾದ ಕಬ್ಬಿಣದಲ್ಲಿ-
ರುವ ಅಗ್ನಿಯಂತೆ[^೧]-ಅವುಗಳನ್ನು ಅನುಸರಿಸುತ್ತಿದ್ದರೂ ಯಾವ ಕ್ರಿಯೆ-
ಯನ್ನೂ ಮಾಡುವುದಿಲ್ಲ, ಯಾವ ವಿಕಾರವನ್ನೂ ಹೊಂದುವುದಿಲ್ಲ.
 
[^೧] ಅಗ್ನಿಗೆ ಯಾವುದೊಂದು ಆಕಾರವಿಲ್ಲದಿದ್ದರೂ ತಾನು ಪ್ರವೇಶಿಸಿ ಉರಿಯು-
ತಿರುವ ಅಯಃಪಿಂಡದ ಆಕಾರವನ್ನು ಹೊಂದುವಂತೆ ನಿರಾಕಾರನಾದ ಆತ್ಮನು ಆಯಾ
ಉಪಾಧಿಗಳ ಆಕಾರದಿಂದ ಕಾಣುತ್ತಿದ್ದರೂ ಕ್ರಿಯೆಯನ್ನಾಗಲಿ ವಿಕಾರವನ್ನಾಗಲಿ
ಹೊಂದುವುದಿಲ್ಲ. 'ಹೇಗೆ ಒಂದೇ ಅಗ್ನಿಯು ಈ ಲೋಕವನ್ನು ಪ್ರವೇಶಿಸಿ ಎಲ್ಲ
ರೂಪಗಳಿಗೂ ಪ್ರತಿರೂಪವಾಗಿರುವುದೊ ಹಾಗೆಯೇ ಒಬ್ಬನೇ ಸರ್ವಭೂತಾಂತ-
ರಾತ್ಮನು ಎಲ್ಲ ರೂಪಗಳಿಗೂ ಪ್ರತಿರೂಪನಾಗಿರುವನು' ಅಗ್ನಿರ್ಯಥೈಕೋ
ಭುವನಂ ಪ್ರತಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ | ಏಕಸ್ತಥಾ
ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ || (ಕಠ ಉ.
೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
 
ನ ಜಾಯತೇ ನೋ ಮ್ರಿಯತೇ ನ ವರ್ಧತೇ
ನ ಕ್ಷೀಯತೇ ನೋ ವಿಕರೋತಿ ನಿತ್ಯಃ ।
ವಿಲೀಯಮಾನೇsಪಿ ವಪುಷ್ಯ ಮುಷ್ಮಿನ್
ನ ಲೀಯತೇ ಕುಂಭ ಇವಾಂಬರಃ ಸ್ವಯಮ್ ॥೧೩೪॥
 
[ಈ ಆತ್ಮನು] ನ ಜಾಯತೇ = ಹುಟ್ಟುವುದಿಲ್ಲ, ನೋ ಮ್ರಿಯತೇ =
ಸಾಯುವುದಿಲ್ಲ, ನ ವರ್ಧತೇ= ಬೆಳೆಯುವುದಿಲ್ಲ, ನ ಕ್ಷೀಯತೇ = ಕ್ಷಯಿಸುವು-
ದಿಲ್ಲ, ನೋ ವಿಕರೋತಿ = ಪರಿಣಮಿಸುವುದಿಲ್ಲ; ನಿತ್ಯಃ - ಶಾಶ್ವತನಾಗಿರುತ್ತಾನೆ;
ಅಮುಷ್ಮಿನ್ ವಪುಷಿ = ಈ ಶರೀರವು, ವಿಲೀಯಮಾನೇ ಅಪಿ = ನಾಶವಾದರೂ,
ಕುಂಭೇ ಅಂಬರಃ ಇವ = ಗಡಿಗೆಯಲ್ಲಿರುವ ಆಕಾಶದಂತೆ, ಸ್ವಯಂ=ತಾನು ಮಾತ್ರ,
ನ ಲೀಯತೇ = ನಾಶವಾಗುವುದಿಲ್ಲ.
 
೧೩೪. ಈ ಆತ್ಮನು ಹುಟ್ಟುವುದಿಲ್ಲ, ಸಾಯುವುದಿಲ್ಲ, ಬೆಳೆಯುವು-
ದಿಲ್ಲ, ಕ್ಷಯಿಸುವುದಿಲ್ಲ, ಪರಿಣಮಿಸುವುದಿಲ್ಲ; (ಏಕೆಂದರೆ) ಶಾಶ್ವತನಾಗಿರು