This page has not been fully proofread.

ವಿವೇಕಚೂಡಾಮಣಿ
 
೪ ಪ್ರತ್ಯಕ್ಷದಿಂದ ಅರಿತುಕೊಳ್ಳಲು ಆಗುವುದಿಲ್ಲ.
 
೫ - ಅವ್ಯಕ್ತದಿಂದ ಎಲ್ಲಾ ಚರಾಚರವಸ್ತುಗಳೂ ಹುಟ್ಟುತ್ತವೆ' ಅವ್ಯಕ್ತಾದ್,
ವ್ಯಕ್ತಯಃ ಸರ್ವಾಃ ಪ್ರಭವಂತಿ (ಗೀತಾ ೧೫. ೧೮). ]
 
೧೦೯]
 
೫೭
 
ಸನ್ನಾಪ್ಯ ಸನ್ನಾಪುಭಯಾತ್ಮಿಕಾ ನೋ
ಭಿನ್ನಾಭಿನ್ನಾಪ್ಯುಭಯಾತ್ಮಿಕಾ
ಸಾಂಗಾನಂಗಾಪ್ಯುಭಯಾತ್ಮಿಕಾ ನೋ
 
ಮಹಾದ್ಭುತಾನಿರ್ವಚನೀಯರೂಪಾ । ೧೦೯ ।
 
[ಈ ಮಾಯೆಯು] ಸತ್ ನ – ಸತ್ ಅಲ್ಲ, ಅಪಿ = ಮತ್ತು ಅಸತ್ ನ -
ಅಸತ್ ಅಲ್ಲ, ಅಪಿ ಮತ್ತು ಉಭಯಾತ್ಮಿಕಾ ನ ಉ.. ಈ ಎರಡೂ ಅಲ್ಲ; ಭಿನ್ನಾ
ಆಪಿ ಅಭಿನ್ನಾ ಅಪಿ ಉಭಯಾತ್ಮಿಕಾ ನಉ = ಭಿನ್ನವೂ ಅಲ್ಲ, ಅಭಿನ್ನವೂ ಅಲ್ಲ,
ಈ ಎರಡೂ ಅಲ್ಲ; ಸಾಂಗಾ ಅಪಿ ಆನಂಗಾ ಆಪಿ ಉಭಯಾತ್ಮಿಕಾ ನ ಉ
ಸಾವಯವವೂ ಅಲ್ಲ, ನಿರವಯವವೂ ಅಲ್ಲ, ಈ ಎರಡೂ ಅಲ್ಲ; ಮಹಾದ್ಭುತಾ
ಅತ್ಯಂತ ಅದ್ಭುತವಾದುದು. ಅನಿರ್ವಚನೀಯರೂಪಾ - ಸ್ವರೂಪವನ್ನು ಹೇಳಲು
ಅಶಕ್ಯವಾದುದು.
 
ನೋ ।
 
೧೦೯. (ಪರಮೇಶ್ವರನ ಶಕ್ತಿಯಾದ ಮಾಯೆಯು) ಸದ್ರೂಪವಲ್ಲ,
ಅಸದ್ರೂಪವಲ್ಲ, ಸತ್ ಅಸತ್ರೂವವೂ ಅಲ್ಲ; (ಪರಮೇಶ್ವರನಿಗಿಂತ)
ಭಿನ್ನವೂ ಅಲ್ಲ, ಅಭಿನ್ನವೂ ಅಲ್ಲ, ಭಿನ್ನ ಅಭಿನ್ನವೂ ಅಲ್ಲ; (ಅದು)
ಸಾವಯವವೂ ಅಲ್ಲ, ನಿರವಯವವೂ ಅಲ್ಲ, ಸಾವಯವ ನಿರವಯವವೂ
ಅಲ್ಲ; (ಅದು) ಅತ್ಯಂತ ಅದ್ಭುತವಾಗಿದೆ, ಅನಿರ್ವಚನೀಯರೂಪವಾಗಿದೆ.
 

 
(೧ ಸದ್ರೂಪವಾಗಿದ್ದರೆ ಜ್ಞಾನವು ಅದನ್ನು ನಾಶಮಾಡಲು ಶಕ್ತವಾಗುತ್ತಿರಲಿಲ್ಲ.
ಅಸದ್ರೂಪವಾಗಿದ್ದರೆ ಅದರಿಂದ ಯಾವ ಕಾರ್ಯವೂ ಉಂಟಾಗುತ್ತಿರಲಿಲ್ಲ.
4 ಒಂದೇ ವಸ್ತುವಿಗೆ ವಿರುದ್ಧ ಧರ್ಮಗಳಿರುವುದಿಲ್ಲ.
 
ಭಿನ್ನವಾಗಿದ್ದರೆ ಅದೈತಕ್ಕೆ ಹಾನಿಯಾಗುತ್ತಿತ್ತು.
 
* ಅಗ್ನಿ ಮತ್ತು ಅದರ ದಾಹಕಶಕ್ತಿ ಒಂದೇ ಆಗಿರಲಾರದು. ಹಾಗೆಯೇ
ಪರಮೇಶ್ವರನಿಗಿಂತ ಭಿನ್ನವಾಗಿದೆ.
 
೬ ಏಕೆಂದರೆ ಇದರಲ್ಲಿ ಯಾವ ಅವಯವವೂ ಕಂಡುಬರುತ್ತಿಲ್ಲ. ಮತ್ತು ಅವ
ಯವವುಳ್ಳದ್ದಕ್ಕೆ ಜನ್ಮವಿರುತ್ತದೆ.
 
೭ ತ್ರಿಗುಣಗಳಿರುವುದರಿಂದ. ನಿರವಯವವಾಗಿದ್ದರೆ ಪರಿಣಾಮವು ಸಂಭವಿಸು
ತಿರಲಿಲ್ಲ.
 
ಆ ಯಾವ ಲಕ್ಷಣವನ್ನು ಹೇಳಲೂ ಅಸಾಧ್ಯವಾದುದರಿಂದ ಅನಿರ್ವಚನೀಯವು.