This page has been fully proofread once and needs a second look.

ವಿವೇಕಚೂಡಾಮಣಿ
 
ಸುಷುಪ್ತಿಯಲ್ಲಿ ಉಂಟಾಗುವ ಅನುಭವವು ಪ್ರತ್ಯಕ್ಷವು. ಜೀವನ್ಮುಕ್ತರಿಂದ

ಪರಂಪರೆಯಾಗಿ ಬಂದ ಮಾತು ಐತಿಹ್ಯ. 'ಆತ್ಮನು ಪರಮಾನಂದಸ್ವರೂಪನು,

ಏಕೆಂದರೆ ಅವನು ಪರಮಪ್ರೇಮಕ್ಕೆ ಆಸ್ಪದನಾಗಿರುವನು' ಎಂಬುದು ಅನುಮಾನ.

"ಇದು ಇವನ ಪರಮಗತಿ, ಇದು ಇವನ ಪರಮಸಂಪತ್ತು, ಇದು ಇವನ ಪರಮ

ಲೋಕ, ಇದು ಇವನ ಪರಮಾನಂದ' ಏರ್ಷಾಸ್ಯ ಪರಮಾ ಗತಿಃ, ಏರ್ಷಾsಸ್ಯ

ಪರಮಾ ಸಂಪತ್, ಏಷ್ಯೋsಸ್ಯ ಪರಮೋ ಲೋಕಃ, ಏಷೋsಸ್ಯ ಪರಮ

ಆನಂದಃ (ಬೃಹದಾರಣ್ಯಕ ಉ. ೪, ೩, ೨೨) ಎಂದು ಅನೇಕ ಶ್ರುತಿಗಳು ನಾವು

ಸುಷುಪ್ತಿಯಲ್ಲಿ ಅನುಭವಿಸುವ ಪರಮಾನಂದವನ್ನು ಹೇಳುತ್ತವೆ.]
 
೫೬
 
[

 
ಅವ್ಯಕ್ತನಾಮ್ನಿ ಪರಮೇಶಶಕ್ತಿ-
ರನಾದ್ಯವಿದ್ಯಾ ತ್ರಿಗುಣಾತ್ಮಿಕಾ ಪರಾ ।
ಕಾರ್ಯಾನುಮೇಯಾ ಸುಧಿಯೈವ ಮಾಯಾ
ಯಯಾ ಜಗತ್ಸರ್ವಮಿದಂ ಪ್ರಸೂಯತೇ ॥
೧೦೮
 
ಅವ್ಯಕ್ತನಾಲ್ಕಾ ಪರಮೇಶಶಕ್ತಿ-
ರನಾದ್ಯವಿದ್ಯಾ ತ್ರಿಗುಣಾತ್ಮಿಕಾ ಪರಾ

ಕಾರ್ಯಾನುಮೇಯಾ ಸುಧಿದೈವ ಮಾಯಾ
 
ಯಯಾ ಜಗತ್ಸರ್ವವಿದಂ ಪ್ರಸೂಯತೇ ॥ ೧೦೮ ।
 
ಯಯಾ
|
 
ಯಯಾ=
ಯಾವುದರಿಂದ, ಇದಂ ಸರ್ವಂ ಜಗತ್= ಈ ಜಗತ್ತೆಲ್ಲ, ಪ್ರಸೂ
-
ಯತೇ =ಉತ್ಪನ್ನವಾಗುತ್ತದೆಯೊ [ಆ] ಅವ್ಯಕ್ತನಾ -ಮ್ನಿ = ಅವ್ಯಕ್ತವೆಂಬ ಹೆಸರುಳ್ಳ
,
ಪರಮೇಶಶಕ್ತಿಃ -= ಈಶ್ವರಶಕ್ತಿಯಾದ, ಅನಾದ್ಯವಿದ್ಯಾ -= ಅನಾದಿಕಾಲದಿಂದ ಅವಿದ್ಯೆ
-
ಯಾಗಿರುವ, ತ್ರಿಗುಣಾತ್ಮಿಕಾ = ತ್ರಿಗುಣಸ್ವರೂಪವಾದ, ಪರಾ
=ಶ್ರೇಷ್ಠವಾದ
ಮಾಯಾ -
,
ಮಾಯಾ =
ಮಾಯೆಯು, ಸುಧಿಯಾ ಏವ= ಧೀಮಂತನಿಂದಲೇ, ಕಾರ್ಯಾನು-

ಮೇಯಾ -= ಕಾರ್ಯದಿಂದಲೇ ಅನುಮಾನಿಸಲು ಯೋಗ್ಯವಾಗಿದೆ.
 

 
೧೦೮. ಅವಿದ್ಯೆಗೆ ಅಥವಾ ಮಾಯೆಗೆ ಅವ್ಯಕ್ತವೆಂಬ ಹೆಸರಿದೆ.
[^೧]
ಇದು ಅನಾದಿ, ಪರಮೇಶ್ವರನ ಶಕ್ತಿ,[^೨]ತ್ತ್ವ-ರಜಸ್ತಮೋಗುಣಗಳನ್ನೊಳ
-
ಕೊಂಡಿದೆ. ತನ್ನ ಕಾರ್ಯವರ್ಗಕ್ಕಿಂತ ಶ್ರೇಷ್ಠವಾದದ್ದು. ಇದನ್ನು
[^೩] ಇದನ್ನು
ಧೀಮಂತನಾದವನು ಕಾರ್ಯದಿಂದ ಅನುಮಾನಿಸಬೇಕು.[^೪] ಇದರಿಂದ ಈ

ಜಗತ್ತೆಲ್ಲ ಉತ್ಪನ್ನವಾಗಿದೆ.
 

 
[^೫]
 
[ಇಲ್ಲಿ ಮಾಯೆಯ ಸ್ವರೂಪವನ್ನೂ ಕಾರ್ಯಗಳನ್ನೂ ಹೇಳಿದೆ.
 

[^
] 'ಮಹತ್ತಿಗಿಂತ ಅವ್ಯಕ್ತವು ಶ್ರೇಷ್ಠವಾದುದು' ಮಹತಃ ಪರಮವ್ಯಕ್ತ
ಮ್
(ಕಠ ಉ. ೧. ೩, ೧೧).
 

[^
]' ಪ್ರಕೃತಿಯನ್ನು ಮಾಯೆಯೆಂದು ಅರಿತುಕೊ; ಮಹೇಶ್ವರನು ಮಾಯೆಯ

ಈಶನು' ಮಾಯಾಂ ತು ಪ್ರಕೃತಿಂ ವಿದ್ಯಾನ್ಮಾಯಿನಂ ಚ ಮಹೇಶ್ವರಮ್

(ಶ್ವೇತಾಶ್ವತರ ಉ. ೪, ೧೦).
 

[^
] ಕಾರಣವು ಯಾವಾಗಲೂ ತನ್ನ ಕಾರ್ಯಕ್ಕಿಂತ ಶ್ರೇಷ್ಠವಾದದ್ದು.