This page has not been fully proofread.

ವಿವೇಕಚೂಡಾಮಣ
 
[೧೦೦
 
ಸರ್ವವ್ಯಾಪತಿ-ಕರಣಂ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ ।
ವಾಸ್ಯಾದಿಕಮಿವ
ತನೈವಾತ್ಮಾ ಭವತ್ಯ ಸಂಗೋsಯಮ್
 
॥ ೧೦೦ ॥
 
೫೨
 
ತಕ್ಷಃ - ಬಡಗಿಗೆ ವಾಸ್ಯಾದಿಕ ಇವ - ಉಳಿ ಮೊದಲಾದುವುಗಳಂತೆ
ಚಿದಾತ್ಮನಃ - ಚಿತ್ರರೂಪನಾದ ಪುಂಸಃ - ಮನುಷ್ಯನಿಗೆ ಇದಂ ಲಿಂಗಂ = ಈ
ಸೂಕ್ಷ್ಮಶರೀರವು ಸರ್ವವ್ಯಾ ಪ್ರತಿಕರಣಂ ಸ್ಯಾತ್ - ಸಮಸ್ತ ಪ್ರವೃತ್ತಿಗೆ ಕರಣ
ವಾಗಿರುತ್ತದೆ; ತೇನ ಏವ - ಆದುದರಿಂದಲೇ ಅಯಮ್ ಆತ್ಮಾ = ಈ ಆತ್ಮನು
ಅಸಂಗಃ ಭವತಿ - ನಿರ್ಲಿಪ್ತನಾಗಿರುತ್ತಾನೆ.
 
೧೦೦. ಚಿತ್ರರೂಪನಾದ ಮನುಷ್ಯನಿಗೆ ಈ ಸೂಕ್ಷ್ಮಶರೀರವು -
ಬಡಗಿಗೆ ಉಳಿಯೇ ಮೊದಲಾದ ಕರಣಗಳಂತೆ-ಸಮಸ್ತ ಪ್ರವೃತ್ತಿಗೂ
ಕರಣವಾಗಿರುತ್ತದೆ. ಆದುದರಿಂದಲೇ ಈ ಆತ್ಮನು ನಿರ್ಲಿಪ್ತನಾಗಿರುತ್ತಾನೆ.
 
ಸುಖವುಂಟಾಗುತ್ತದೆ.
 
(ಬಡಗಿಗೆ ಉಳಿ ಮೊದಲಾದ ಕರಣಗಳಿದ್ದರೆ ದುಃಖಾದಿ ಅನುಭವಗಳು ಉಂಟಾ
ಗುತ್ತವೆ. ಕರಣರಹಿತನಾದ ಬಡಗಿಗೆ ಯಾವ ಆಯಾಸವೂ ಇಲ್ಲದಿರುವುದರಿಂದ
ಹಾಗೆಯೇ ಆತ್ಮನು ಸ್ವಪ್ನ ಜಾಗ್ರತ್ತುಗಳಲ್ಲಿ ಕರ್ತವಾಗಿ
ದುಃಖಿಯಾಗಿರುತ್ತಾನೆ. ಅವನು ತನ್ನ ಶ್ರಮಪರಿಹಾರಕ್ಕಾಗಿ ಕಾರ್ಯಕರಣ ಸಂಘಾತ
ವನ್ನು ತ್ಯಜಿಸಿ ತನ್ನ ಆತ್ಮನಾದ ಪರಬ್ರಹ್ಮವನ್ನು ಪ್ರವೇಶಿಸಿ ಸುಷುಪ್ತವಸ್ಥೆಯಲ್ಲಿ
ಆಕರ್ತವೂ ಸುಖಿಯೂ ಆಗುತ್ತಾನೆ. ವೇದಾಂತಸೂತ್ರಗಳ ತಕ್ಷಾಧಿಕರಣವನ್ನು
ನೋಡಿ (೨, ೩, ೪೦).]
 
ಅಂಧತ್ವ-ಮಂದತ್ವ-ಪಟುತ್ವ-ಧರ್ಮಾ
ಸೌಗುಣ್ಯ-ವೈಗುಣ್ಯವಶಾದಿ ಚಕ್ಷುಷಃ ।
ಬಾಧಿರ್ಯ-ಮೂಕತ್ವ-ಮುಖಾಸ್ತಥೈವ
 
ಪ್ರೋತ್ರಾದಿಧರ್ಮಾ ನ ತು ವೇತ್ತು ರಾತ್ಮನಃ ॥೧೦೧
 
ಅಂಧತ್ವ, ಮಂದತ್ವ, ಪಟುತ್ವ,ಧರ್ಮಾಃ ಕುರುಡುತನ ಮಂದದೃಷ್ಟಿ ತೀಕ್ಷ್ಯ
ದೃಷ್ಟಿ - ಇವೇ ಮೊದಲಾದ ಧರ್ಮಗಳು ಚಕ್ಷುಷಃ - ಕಣ್ಣಿನ ಸೌಗುಣ್ಯ ಗುಣ್ಯ-
ವಶಾತ್ ಹಿ= ಸೌಗುಣ್ಯ ವೈಗುಣ್ಯ ಇವುಗಳಿಂದಲೇ [ಉಂಟಾಗುತ್ತವೆ]; ತಥಾ ಏವ
ಹಾಗೆಯೇ ಬಾಧಿರ್ಯಮೂಕತ್ವ. ಮುಖಾಃ = ಕಿವುಡುತನ ಮೂಕತನ ಮೊದ
ಲಾದುವು ಪ್ರೋತ್ರಾದಿಧರ್ಮಾಃ - ಕಿವಿಯೇ ಮೊದಲಾದುವುಗಳ ಧರ್ಮಗಳು,
ವೇತ್ತುಃ - ಜ್ಞಾತೃವಾದ ಆತ್ಮನಃ = ಆತ್ಮನ ನ ತು - ಧರ್ಮಗಳಲ್ಲ.
 
೧೦೧. ಕಣ್ಣಿನ ಸೌಗುಣ್ಯದಿಂದ
 
ತೀಕ್ಷ ಕತ್ವವೂ ವೈಗುಣ್ಯದಿಂದ
 
ಕುರುಡುತನವೂ ಮಂದತ್ವವೂ ಉಂಟಾಗುತ್ತವೆ. ಹೀಗೆಯೇ ಕಿವುಡುತನ