2023-03-01 12:33:35 by Vidyadhar Bhat
This page has been fully proofread once and needs a second look.
ಧೀಮಾತ್ರಕೋಪಾಧಿರಶೇಷಸಾಕ್ಷೀ
ನ ಲಿಪ್ಯತೇ ತತ್ಕೃತ-ಕರ್ಮಲೇಶೈಃ ।
ಯಸ್ಮಾದಸಂಗಸ್ತತ ಏವ ಕರ್ಮಭಿ-
ರ್ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ ॥ ೯೯ ।|
ಅಸ್ಯ= ಇವನ, ವಿಭಕ್ತಿ ಆವಸ್ಥಾ=ಬೇರೆ ಸ್ಥಿತಿಯು, ಸ್ವಪ್ನಃ ಭವತಿ= ಸ್ವಪ್ನವೆನಿಸು-
ತ್ತದೆ- ಯತ್ರ = ಎಲ್ಲಿ, ಸ್ವಮಾತ್ರಶೇಷೇಣ = ತಾನೊಬ್ಬನೇ ಶೇಷವಾಗಿ, ವಿಭಾತಿ=
ಪ್ರಕಾಶಿಸುತ್ತಾನೆಯೊ; ಸ್ವಪ್ನೇ ತು= ಸ್ವಪ್ನದಲ್ಲಿ, ಬುದ್ಧಿಃ= ಅಂತಃಕರಣವು, ಸ್ವಯ-
ಮೇವ = ತಾನೊಂದೇ, ಜಾಗ್ರತ್ ಕಾಲೀನ- ನಾನಾವಿಧ-ವಾಸನಾಭಿಃ= ಈ ಜಾಗ್ರದ-
ವಸ್ಥೆಯ ನಾನಾ ವಿಧವಾದ [ಅನುಭವಗಳ) ವಾಸನೆಗಳಿಂದ, ಕರ್ತಾದಿಭಾವಂ =
ಕರ್ತೃವೇ ಮೊದಲಾದ ಭಾವವನ್ನು ಹೊಂದಿ, ರಾಜತೇ= ಪ್ರಕಾಶಿಸುತ್ತದೆ; ಯತ್ರ =ಎಲ್ಲಿ,
ಅಯಂ ಪರಾತ್ಮಾ = ಈ ಪರಮಾತ್ಮನು, ಸ್ವಯಂಜ್ಯೋತಿಃ= ಸ್ವಯಂಜ್ಯೋತಿಯು;
ಧೀಮಾತ್ರಕ -ಉಪಾಧಿಃ = ಕೇವಲ ಅಂತಃ ಕರಣವೆಂಬ ಉಪಾಧಿಯನ್ನು ಹೊಂದಿ-
ದವನಾದ, ಅಶೇಷಸಾಕ್ಷೀ= ಎಲ್ಲಕ್ಕೂ ಸಾಕ್ಷಿಯಾದ [ಈ ಆತ್ಮನು], ತತ್ಕೃತ-ಕರ್ಮ-
ಲೇಶೈಃ = ಅಂತಃಕರಣದಿಂದಾದ ಕರ್ಮಲೇಶದಿಂದಲೂ, ನ ಲಿಪ್ಯತೇ = ಲಿಪ್ತನಾಗುವು-
ದಿಲ್ಲ; ಯಸ್ಮಾತ್ =ಯಾವ ಕಾರಣದಿಂದ, ಅಸಂಗಃ= ಸಂಗರಹಿತನೋ, ತತಃ ಏವ= ಆ
ಕಾರಣದಿಂದಲೇ, ಉಪಾಧಿನಾ =ಉಪಾಧಿಯಿಂದ, ಕೃತೈಃ= ಮಾಡಲ್ಪಟ್ಟ, ಕರ್ಮಭಿಃ=
ಕರ್ಮಗಳಿಂದ, ಕಿಂಚಿತ್ = ಸ್ವಲ್ಪವಾದರೂ, ನ ಲಿಪ್ಯತೇ = ಲಿಪ್ತನಾಗುವುದಿಲ್ಲ.
೯೮-೯೯. ಈ (ಸೂಕ್ಷ್ಮಶರೀರಾಭಿಮಾನಿಯಾದ) ಜೀವನಿಗೆ ಸ್ವಪ್ನವು
ಜಾಗ್ರತಿಗಿಂತ ಭಿನ್ನವಾದ ಅವಸ್ಥೆ; ಅಲ್ಲಿ ಅವನು ತಾನೊಬ್ಬನೇ ಉಳಿದು-
ಕೊಂಡು[^೧] ಪ್ರಕಾಶಿಸುತ್ತಾನೆ. ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ
ಜಾಗೃದವಸ್ಥೆಯ ನಾನಾ ವಿಧವಾದ ಅನುಭವಗಳ ವಾಸನೆಗಳಿಂದ ಕರ್ತೃವೇ
ಮೊದಲಾದ ಭಾವವನ್ನು ಹೊಂದಿ ಪ್ರಕಾಶಿಸುತ್ತದೆ; ಆದರೆ ಅಲ್ಲಿ ಈ ಪರ-
ಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ.[^೨] ಕೇವಲ ಅಂತಃಕರಣವೆಂಬ
ಉಪಾಧಿಯನ್ನು ಹೊಂದಿದವನಾಗಿ ಅಶೇಷಸಾಕ್ಷಿಯಾಗಿರುವ ಆತ್ಮನು ಅಂತಃ-
ಕರಣದಿಂದಾದ ಕರ್ಮಲೇಶದಿಂದಲೂ ಲಿಪ್ತನಾಗುವುದಿಲ್ಲ. ಇವನು ಅಸಂಗ-
ನಾಗಿರುವುದರಿಂದಲೇ ಉಪಾಧಿಯಿಂದಾದ ಕರ್ಮಗಳಿಂದ ಸ್ವಲ್ಪವೂ ಲಿಪ್ತ-
ನಾಗುವುದಿಲ್ಲ.
[ಇಲ್ಲಿ ಸೂಕ್ಷ್ಮಶರೀರದ ವಿಶೇಷಾವಸ್ಥೆಯನ್ನು ಹೇಳಿದೆ.
[^೧] ಬಾಹ್ಯೇಂದ್ರಿಯಗಳ ಸಹಾಯವಿಲ್ಲದೆ.
[^೨] 'ಸ್ವಪ್ನದಲ್ಲಿ ಈ ಪುರುಷನು ಸ್ವಯಂಜ್ಯೋತಿಯಾಗಿರುತ್ತಾನೆ' ಅತ್ರಾಯಂ
ಪುರುಷಃ ಸ್ವಯಂಜ್ಯೋತಿರ್ಭವತಿ (ಬೃಹದಾರಣ್ಯಕ ಉ. ೪, ೩, ೧೪).]