This page has been fully proofread once and needs a second look.

ಮುಕ್ತನಾದಾಗ ಅವನಿಗೆ ಮೋಕ್ಷ' ಪುರ್ಯಷ್ಟ ಕೇನ ಲಿಂಗೇನ ಪ್ರಾಣಾದ್ಯೇನ ಸ
ಯುಜ್ಯತೇ । ತೇನ ಬದ್ಧಸ್ಯ ವೈ ಬಂಧೋ ಮೋಕ್ಷೋ ಮುಕ್ತಸ್ಯ ತೇನ ಚ॥]
 
ಇದಂ ಶರೀರಂ ಶೃಣು ಸೂಕ್ಷ್ಮಸಂಜ್ಞೆತಂ
ಲಿಂಗಂ ತ್ವಪಂಚೀಕೃತಭೂತ-ಸಂಭವಮ್ ।
ಸವಾಸನಂ ಕರ್ಮಫಲಾನುಭಾವಕಂ
ಸ್ವಾಜ್ಞಾನತೋsನಾದಿರುಪಾಧಿರಾತ್ಮನಃ || ೯೭ ||
 
ಸೂಕ್ಷ್ಮಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ, ಅಪಂಚೀಕೃತಭೂತ-ಸಂಭ-
ವಂ = ಪಂಚೀಕೃತವಾಗದ ಭೂತಗಳಿಂದ ಉತ್ಪನ್ನವಾದ, ಸವಾಸನಂ = ವಾಸನೆಯಿಂದ
ಕೂಡಿರುವ, ಕರ್ಮಫಲಾನುಭಾವಕಂ=ಕರ್ಮಫಲಗಳ ಅನುಭವವನ್ನುಂಟು-
ಮಾಡುವ, ಇದಂ ಲಿಂಗಂ ಶರೀರಂ ತು=ಈ ಲಿಂಗಶರೀರದ ವಿಷಯವನ್ನು ಶೃಣು=
ಕೇಳು: [ಅಯಂ = ಇದು] ಸ್ವ-ಅಜ್ಞಾನತಃ = ತನ್ನ ಸ್ವರೂಪವನ್ನು ತಿಳಿಯದಿರುವು-
ದರಿಂದ, ಆತ್ಮನಃ = ಆತ್ಮನಿಗೆ, ಅನಾದಿಃ = ಅನಾದಿಯಾದ, ಉಪಾಧಿಃ = ಉಪಾಧಿಯು.
 
೯೭ ಸೂಕ್ಷ್ಮಶರೀರವೆಂಬ ಹೆಸರುಳ್ಳ, ಪಂಚೀಕೃತವಾಗದ ಭೂತ-
ಗಳಿಂದ ಉತ್ಪನ್ನವಾದ, ವಾಸನೆಯಿಂದ[^೧] ಕೂಡಿರುವ ಮತ್ತು ಕರ್ಮಫಲಗಳ
ಅನುಭವವನ್ನುಂಟುಮಾಡುವ[^೨] ಈ ಲಿಂಗಶರೀರದ ವಿಷಯವನ್ನು ಕೇಳು:
ತನ್ನ ಸ್ವರೂಪವನ್ನು ತಿಳಿಯದೆ ಇರುವುದರಿಂದ ಇದು ಆತ್ಮನಿಗೆ ಅನಾದಿ-
ಯಾದ ಉಪಾಧಿಯಾಗಿದೆ.
 
[ಇಲ್ಲಿ ಸೂಕ್ಷ್ಮಶರೀರದ ಅಥವಾ ಲಿಂಗದೇಹದ ಸ್ವರೂಪವನ್ನು ಹೇಳಿದೆ.
[^೧] ಅನುಭವದಿಂದ ಉತ್ಪನ್ನವಾದ ಸಂಸ್ಕಾರಗಳಿಂದ,
[^೨] ಕರ್ಮವು ಅದೃಷ್ಟ ರೂಪದಿಂದ ಲಿಂಗದೇಹದಲ್ಲಿ ಲಯವಾಗಿ ಸುಖದುಃಖ
ರೂಪವಾದ ಫಲವನ್ನುಂಟುಮಾಡುತ್ತದೆ.]
 
ಸ್ವಪ್ನೋ ಭವತ್ಯಸ್ಯ ವಿಭಕ್ಷ್ಯವಸ್ಥಾ
ಸ್ವಮಾತ್ರ ಶೇಷೇಣ ವಿಭಾತಿ ಯತ್ರ ।
ಸ್ವಪ್ನೇ ತು ಬುದ್ಧಿಃ ಸ್ವಯಮೇವ ಜಾಗ್ರತ್-
ಕಾಲೀನ-ನಾನಾವಿಧ-ವಾಸನಾಭಿಃ || ೯೮ ||
 
ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ
ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ |