This page has been fully proofread once and needs a second look.

೯೫. ಸುವರ್ಣ ನೀರು ಇವು ವಿಕಾರಭೇದದಿಂದ (ವಿವಿಧವಾದ ಹೆಸರು-
ಗಳನ್ನು ಪಡೆಯುವಂತೆ)[^೧] ಈ ಪ್ರಾಣವು ತಾನೊಂದೇ ಆಗಿದ್ದರೂ ಕ್ರಿಯಾ
ಭೇದದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬ ನಾಮಗಳನ್ನು
ಪಡೆಯುತ್ತದೆ.[^೨]
 
[^೧] ಸುವರ್ಣವು ಕಟಕ ಕೇಯೂರ ಕುಂಡಲ ಮೊದಲಾದ ಹೆಸರುಗಳನ್ನು ಪಡೆಯು-
ತ್ತದೆ; ನೀರು ತರಂಗ ನೊರೆ ಮೊದಲಾದ ಹೆಸರುಗಳನ್ನು ಪಡೆಯುತ್ತದೆ.
[^೨] ಉಚ್ಛ್ವಾ ಸಾದಿ ಕರ್ಮಗಳುಳ್ಳ ಮುಂದುವರಿಯುವ ವೃತ್ತಿಯು ಪ್ರಾಣವೆನಿಸಿದೆ;
ನಿಃಶ್ವಾಸಾದಿಕರ್ಮಗಳುಳ್ಳ ಹಿಂದಕ್ಕೆ ಹೋಗುವ ವೃತ್ತಿಯು ಅಪಾನ; ಪ್ರಾಣಾಪಾನ-
ಗಳ ಮಧ್ಯೆಯಿದ್ದು ವೀರ್ಯವತ್ಕರ್ಮವನ್ನು ಮಾಡಲು ಕಾರಣವಾಗಿರುವ ವೃತ್ತಿಯು
ವ್ಯಾನವು; ಉತ್ಕ್ರಾಂತ್ಯಾದಿ ಕರ್ಮಕ್ಕೆ ಕಾರಣವಾಗಿ ಮೇಲಕ್ಕೇರುವ ಪ್ರಾಣವು
ಉದಾನ; ಎಲ್ಲಾ ಅಂಗಗಳಿಗೂ ಸಮಾನವಾಗಿ ಅನ್ನರಸವನ್ನು ಒಯ್ಯುವ ವೃತ್ತಿಯು
ಸಮಾನ (ಸೂತ್ರಭಾಷ್ಯ ೨. ೪. ೧೨).]
 
ವಾಗಾದಿ ಪಂಚ ಶ್ರವಣಾದಿ ಪಂಚ
ಪ್ರಾಣಾದಿ ಪಂಚಾಭ್ರಮುಖಾನಿ ಪಂಚ ।
ಬುದ್ಧಾದ್ಯವಿದ್ಯಾಪಿ ಚ ಕಾಮ-ಕರ್ಮಣೀ
ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ ॥ ೯೬ ॥
 
ವಾಗಾದಿ ಪಂಚ = ವಾಗಾದಿ ಪಂಚಕ, ಶ್ರವಣಾದಿ ಪಂಚ = ಶ್ರವಣಾದಿ
ಪಂಚಕ, ಪ್ರಾಣಾದಿ ಪಂಚ=ಪ್ರಾಣಾದಿ ಪಂಚಕ, ಅಭ್ರಮುಖಾನಿ ಪಂಚ=ಆಕಾಶಾದಿ
ಭೂತಪಂಚಕ, ಬುದ್ಧ್ಯಾ ದಿ = ಬುದ್ಧಿಯ ಯೇ ಮೊದಲಾದುವು, ಅವಿದ್ಯಾ = ಅವಿದ್ಯೆ, ಅಪಿ
ಚ = ಮತ್ತು, ಕಾಮ-ಕರ್ಮಣೀ= ಕಾಮ ಮತ್ತು ಕರ್ಮ- ಪುರ್ಯಷ್ಟ ಕಂ = ಈ
ಎಂಟು ಪುರಗಳನ್ನು, ಸೂಕ್ಷ್ಮಶರೀರಂ=ಸೂಕ್ಷ್ಮಶರೀರವೆಂದು, ಆಹುಃ=ಹೇಳುತ್ತಾರೆ.
 
೯೬. ವಾಕ್ಕು ಮೊದಲಾದ ಐದು ಕರ್ಮೇಂದ್ರಿಯಗಳು, ಶ್ರವಣವೇ
ಮೊದಲಾದ ಐದು ಜ್ಞಾನೇಂದ್ರಿಯಗಳು, ಪ್ರಾಣವೇ ಮೊದಲಾದ ಪಂಚ
ಪ್ರಾಣಗಳು, ಆಕಾಶವೇ ಮೊದಲಾದ ಸೂಕ್ಷ್ಮಭೂತಗಳು, ಬುದ್ಧಿಯೇ
ಮೊದಲಾದ ನಾಲ್ಕು, ಅವಿದ್ಯೆ, ಕಾಮ, ಕರ್ಮ- ಈ ಎಂಟು 'ಪುರಗಳನ್ನು'
ಸೂಕ್ಷ್ಮಶರೀರವೆಂದು ಹೇಳುತ್ತಾರೆ.
 
[ಭಾಷ್ಯಕಾರರು ತಮ್ಮ ಸೂತ್ರಭಾಷ್ಯದಲ್ಲಿ (೨. ೪. ೭) ಈ ಸ್ಮೃತಿವಾಕ್ಯವನ್ನು
ಉದ್ಧರಿಸಿರುತ್ತಾರೆ: 'ಪುರ್ಯಷ್ಟ ಕರೂಪವಾದ ಪ್ರಾಣಾದಿ ಸೂಕ್ಷ್ಮಶರೀರದಿಂದ ಅವನು
ಕೂಡಿರುತ್ತಾನೆ; ಅದರಿಂದ ಬದ್ಧನಾಗಿರುವುದರಿಂದ ಅವನಿಗೆ ಬಂಧನ, ಅದರಿಂದ