This page has not been fully proofread.

೪೮
 
ವಿವೇಕಚೂಡಾಮಣಿ
 
[೯೩
 
ನಿಗದ್ಯತೇsಂತಃಕರಣಂ ಮನೋಧೀ
ರಹಂಕೃತಿಶ್ಚಿತ್ತಮಿತಿ ಸ್ವವೃತ್ತಿಭಿಃ ।
ಮನಸ್ತು ಸಂಕಲ್ಪ-ವಿಕಲ್ಪನಾದಿಭಿ
 
ರ್ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ ॥ ೯೩ ।
ಅತ್ರಾಭಿಮಾನಾದಹಮಿತ್ಯ ಹಂಕೃತಿಃ ।
 
ಸ್ವಾರ್ಥಾನುಸಂಧಾನ-ಗುಣೇನ ಚಿತ್ತಮ್ ॥ ೯೪ 11
ಅಂತಃಕರಣಂ ಅಂತಃಕರಣವು ಸ್ವ-ವೃತ್ತಿ ಭಿಃ- ತನ್ನ ವೃತ್ತಿಗಳಿಗೆ ಅನುಸಾರ
ವಾಗಿ ಮನಃ - ಮನಸ್ಸು ಧೀಃ - ಬುದ್ಧಿ ಅಹಂಕೃತಿಃ – ಅಹಂಕಾರ ಚಿತ್ರಂ - ಚಿತ್ರ
ಇತಿ - ಎಂದು ನಿಗದ್ಯತೇ = ಹೇಳಲ್ಪಡುತ್ತದೆ; ಸಂಕಲ್ಪ ವಿಕಲ್ಪನಾದಿಭಿಃ ತು
ಸಂಕಲ್ಪ ವಿಕಲ್ಪ ಮೊದಲಾದುವುಗಳಿಂದ ಮನಃ = ಮನಸ್ಸೆಂದೂ ಪದಾರ್ಥ- ಅಧ್ಯ.
ವಸಾಯ-ಧರ್ಮತಃ- ವಸ್ತುಗಳನ್ನು ನಿಶ್ಚಯಿಸುವ ಧರ್ಮವುಳ್ಳದ್ದರಿಂದ ಬುದ್ಧಿ
ಬುದ್ದಿಯ ಯೆಂದೂ ಅತ್ರ ಈ ಶರೀರದಲ್ಲಿ ಅಹಂ - ನಾನು ಇತಿ = ಎಂದು ಅಭಿಮಾ
ನಾತ್ ಅಭಿಮಾನವಿರುವುದರಿಂದ ಅಹಂಕೃತಿಃ - ಅಹಂಕಾರವೆಂದೂ ಸ್ವಾರ್ಥಾನು.
ಸಂಧಾನ ಗುಣೇನ - ಸ್ವಸುಖಸಾಧನಗಳನ್ನು ಕುರಿತು ಚಿಂತಿಸುವುದರಿಂದ ಚಿತ್ತಂ
ಚಿತ್ತವೆಂದೂ [ಹೇಳಲ್ಪಡುತ್ತದೆ].
 
೯೩-೯೪, ಅಂತಃಕರಣವೇ ತನ್ನ ವೃತ್ತಿಗಳಿಗೆ ಅನುಸಾರವಾಗಿ ಮನಸ್ಸು
ಬುದ್ಧಿ ಅಹಂಕಾರ ಚಿತ್ರ ಎಂದು ಹೇಳಲ್ಪಡುತ್ತದೆ. ಸಂಕಲ್ಪ.ವಿಕಲ್ಪಾದಿ
ಗಳನ್ನು ಮಾಡುವುದರಿಂದ ಮನಸ್ಸೆಂದೂ, ವಸ್ತುವನ್ನು ನಿಶ್ಚಯಿಸುವ
ಧರ್ಮವುಳ್ಳದ್ದರಿಂದ ಬುದ್ಧಿಯೆಂದೂ, ಶರೀರದಲ್ಲಿ 'ನಾನು' ಎಂಬ ಅಭಿ
ಮಾನವನ್ನು ಮಾಡುವುದರಿಂದ ಅಹಂಕಾರವೆಂದೂ, ಸ್ವಸುಖಸಾಧನ
ಗಳನ್ನು ಕುರಿತು ಚಿಂತಿಸುವುದರಿಂದ ಚಿತ್ತವೆಂದೂ ಹೇಳಲ್ಪಡುತ್ತದೆ.
 
[ಹಿಂದೆ ಬಾಹ್ಯ ಕರಣಗಳನ್ನು ಹೇಳಿದಮೇಲೆ ಈಗ ಅಂತಃಕರಣವನ್ನು ವಿಭಾಗಶಃ
ನಿರೂಪಿಸಿದೆ.]
 
ಪ್ರಾಣಾಪಾನ-ವ್ಯಾನೋದಾನ-ಸಮಾನಾ ಭವತ್ಯಸೌ ಪ್ರಾಣಃ ।
ಸ್ವಯಮೇವ ವೃತ್ತಿಭೇದಾದ್ವಿ ಕೃತೇರ್ಭೇದಾತ್ ಸುವರ್ಣ-
ಸಲಿಲವತ್ ॥ ೯೫ ।
 
ವಿಕೃತೇಃ ಭೇದಾತ್ವಿಕಾರಭೇದದಿಂದ ಸುವರ್ಣ-ಸಲಿಲವತ್ ಸುವರ್ಣ
ನೀರು ಇವುಗಳಂತೆ ಅಸೌ ಪ್ರಾಣಃ = ಈ ಪ್ರಾಣವು ವೃತ್ತಿಭೇದಾತ್ = ವೃತ್ತಿಭೇದ
ದಿಂದ ಸ್ವಯಮ್ ಏವ ತಾನೇ ಪ್ರಾಣ ಅಪಾನ, ವ್ಯಾನ- ಉದಾನ- ಸಮಾನಾಃ
ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಎಂದು] ಭವತಿ ಆಗುತ್ತದೆ.