This page has been fully proofread once and needs a second look.

ತ್ವಕ್-ಮಾಂಸ-ರುಧಿರ-ಸ್ವಾಯು-ಮೇದಃ- ಮಜ್ಜಾ-ಅಸ್ಥಿ-ಸಂಕುಲಂ=
ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ-ಇವುಗಳಿಂದ ಕೂಡಿರುವ,
ಮೂತ್ರ- ಪುರೀಷಾಭ್ಯಾಂ=ಮಲಮೂತ್ರಗಳಿಂದ, ಪೂರ್ಣ೦=ತುಂಬಿರುವ ನಿಂದ್ಯಂ=
ನಿಂದ್ಯವಾದ, ಇದಂ ವಪುಃ = ಈ ಶರೀರವು, ಸ್ಥೂಲಂ=ಸ್ಥೂಲವು.
 
೮೭. ಚರ್ಮ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ -
ಇವುಗಳಿಂದ ಕೂಡಿರುವ, ಮಲಮೂತ್ರಗಳಿಂದ ತುಂಬಿರುವ, ನಿಂದ್ಯವಾದ
ಈ ದೇಹವೇ ಸ್ಥೂಲಶರೀರವು.
 
ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ ಪೂರ್ವಕರ್ಮಣಾ ।
ಸಮುತ್ಪನ್ನಮಿದಂ ಸ್ಥೂಲಂ ಭೋಗಾಯತನಮಾತ್ಮನಃ ॥
ಅವಸ್ಥಾ ಜಾಗರಸ್ತಸ್ಯ ಸ್ಥೂಲಾರ್ಥಾನುಭವೋ ಯತಃ ॥ ೮೮ ॥
 
ಪಂಚೀಕೃತೇಭ್ಯಃ = ಪಂಚೀಕೃತವಾದ, ಸ್ಥೂಲೇಭ್ಯಃ = ಸ್ಕೂಲವಾದ, ಭೂ-
ತೇಭ್ಯಃ = ಭೂತಗಳಿಂದಲೂ, ಪೂರ್ವಕರ್ಮಣಾ=ಪೂರ್ವ ಕರ್ಮದಿಂದಲೂ, ಸಮು-
ತನ್ನಂ= ಉತ್ಪನ್ನವಾದ, ಇದಂ ಸ್ಥೂಲಂ = ಈ ಸ್ಥೂಲಶರೀರವು, ಆತ್ಮನಃ = ಆತ್ಮನ,
ಭೋಗಾಯತನಂ = ಅನುಭವಕ್ಕೆ ಆಶ್ರಯವಾಗಿದೆ; ತಸ್ಯ = ಅದಕ್ಕೆ, ಜಾಗರಃ =
ಜಾಗ್ರತ್ತು, ಅವಸ್ಥಾ = ಅವಸ್ಥೆಯಾಗಿದೆ; ಯತಃ = ಏಕೆಂದರೆ ಸ್ಥೂಲ- ಅರ್ಥ-
ಅನುಭವಃ = ಸ್ಥೂಲ ವಸ್ತುಗಳ ಅನುಭವವು (ಉಂಟಾಗುತ್ತದೆ).
 
೮೮. ಪೂರ್ವಕರ್ಮದಿಂದಲೂ ಮತ್ತು ಪಂಚೀಕೃತವೂ[^೧] ಸ್ಥೂಲವೂ
ಆದ (ಪೃಥಿವ್ಯಾದಿ) ಭೂತಗಳ ಮೂಲಕವೂ ಉತ್ಪನ್ನವಾದ ಈ ಸ್ಥೂಲ
ಶರೀರವು ಆತ್ಮನ ಅನುಭವಕ್ಕೆ ಆಶ್ರಯವಾಗಿದೆ. ಈ ಶರೀರಕ್ಕೆ ಜಾಗ್ರತ್ತು
ಒಂದು ಅವಸ್ಥೆಯಾಗಿದೆ; ಏಕೆಂದರೆ (ಈ ಅವಸ್ಥೆಯಿಂದಲೇ) ಸ್ಥೂಲವಸ್ತು-
ಗಳ ಅನುಭವವುಂಟಾಗುತ್ತದೆ.
[^೧]೭೪ನೆಯ ಶ್ಲೋಕದ ೧ನೆಯ ಟಿಪ್ಪಣಿಯನ್ನು ನೋಡಿ.]
 
ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥ-ಸೇವಾಂ
ಸ್ರಕ್-ಚಂದನ-ಸ್ತ್ರ್ಯಾದಿ-ವಿಚಿತ್ರರೂಪಾಮ್ ।
ಕರೋತಿ ಜೀವಃ ಸ್ವಯಮೇತದಾತ್ಮನಾ
ತಸ್ಮಾತ್ ಪ್ರಶಸ್ತಿರ್ವಪುಷೋsಸ್ಯ ಜಾಗರೇ ॥ ೮ ॥
 
ಜೀವಃ = ಜೀವಾತ್ಮನು, ಬಾಹೇಂದ್ರಿಯೈಃ = ಹೊರಗಿನ ಇಂದ್ರಿಯಗಳಿಂದ,
ಸ್ರಕ್ -ಚಂದನ- ಸ್ತ್ರೀ ಆದಿ- ವಿಚಿತ್ರ ರೂಪಾಂ = ಹೂವಿನ ಮಾಲೆ ಚಂದನ ಮೊದಲಾದ