This page has not been fully proofread.

ವಿವೇಕಚೂಡಾಮಣಿ
 
[೮೫
 
[ಶರೀರಪೋಷಣವನ್ನು ಮಾಡಿದರೆ ಶರೀರದಲ್ಲಿರುವ ಆತ್ಮನೂ ಕೂಡ ಪೋಷಿತ
ನಾಗುವನು ಎಂಬ ಬುದ್ಧಿಯುಳ್ಳವರು ಸ್ವಸ್ವರೂಪವನ್ನು ಅನುಸಂಧಾನ ಮಾಡಲು
ಶಕ್ತರಾಗುವುದಿಲ್ಲ; ಏಕೆಂದರೆ ದೇಹಪೋಷಣದಿಂದ ಆತ್ಮನು ಪೋಷಿತನಾಗುವುದಿಲ್ಲ.
 
ಮೋಹ ಏವ ಮಹಾಮೃತ್ಯುರ್ಮುಮುರ್ವಪುರಾದಿಷ್ಟು ।
ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿ ಪದಮರ್ಹತಿ ॥ ೮೫ ॥
 
ಮುಮುಃ – ಮುಮುಕ್ಷುವಿಗೆ ವಪುರಾದಿಷು = ಶರೀರವೇ ಮೊದಲಾ
ದುವುಗಳಲ್ಲಿ ಮೋಹಃ ಏವ - ಮೋಹವೇ ಮಹಾಮೃತ್ಯುಃ = ಮಹಾಮೃತ್ಯುವು;
ಯೇನ - ಯಾವನಿಂದ ಮೋಹಃ - ಮೋಹವು ವಿನಿರ್ಜಿತಃ = ಜಯಿಸಲ್ಪಟ್ಟಿದೆಯೊ
ಸಃ, ಅವನು ಮುಕ್ತಿಪದಂ ಮೋಕ್ಷ ಸ್ವರೂಪವನ್ನು ಅರ್ಹತಿ ಹೊಂದಲು ಯೋಗ್ಯ
ನಾಗುತ್ತಾನೆ.
 
೮೫ ಮುಮುಕ್ಷುವಿಗೆ ಶರೀರವೇ ಮೊದಲಾದುವುಗಳಲ್ಲಿರುವ ಮೋಹವೇ
ಮಹಾಮೃತ್ಯುವು. ಯಾವನು ಮೋಹವನ್ನು ಜಯಿಸಿರುತ್ತಾನೆ. ಅವನು
ಮೋಕ್ಷಸ್ವರೂಪವನ್ನು ಹೊಂದಲು ಯೋಗ್ಯನಾಗುತ್ತಾನೆ.
 
ಮೋಹಂ ಜಹಿ ಮಹಾಮೃತ್ಯುಂ ದೇಹ-ದಾರ-ಸುತಾದಿಷು ।
ಯಂ ಜಿತ್ವಾ ಮುನಯೋ ಯಾಂತಿ ತದ್ವಿಃ ಪರಮಂ ಪದಮ್
 
1 ೮೬ ॥
 
ದೇಹ. ದಾರ. ಸುತಾದಿಷ್ಟು ಶರೀರ ಹೆಂಡತಿ ಮಕ್ಕಳು ಮೊದಲಾದುವು
ಗಳಲ್ಲಿ ಮೋಹಂ ಮಹಾಮೃತ್ಯುಂ = ಮೋಹವೆಂಬ ಮಹಾಮೃತ್ಯುವನ್ನು ಜಹಿ =
ನಾಶಮಾಡು, ಯಂ = ಯಾವುದನ್ನು ಜಿತ್ವಾ – ಜಯಿಸಿ ಮುನಯಃ ಮುನಿಗಳು
ತತ್ - ಶ್ರುತಿ ಪ್ರಸಿದ್ಧವ
ವಾದ ವಿಷಃ - ವಿಷ್ಣುವಿನ ಪರಮಂ ಪದಂ - ಪರಮ
ಪದವನ್ನು ಯಾಂತಿ - ಹೊಂದುತ್ತಾರೆ.
 
-
 
೮೬, ಶರೀರ ಹೆಂಡತಿ ಮಕ್ಕಳು ಮೊದಲಾದುವುಗಳಲ್ಲಿರುವ ಮೋಹ
ವೆಂಬ ಮಹಾಮೃತ್ಯುವನ್ನು ನಾಶಮಾಡು, ಮೋಹವನ್ನು ಜಯಿಸಿದ ಮುನಿ
ಗಳು ಶ್ರುತಿಪ್ರಸಿದ್ಧವಾದ ವಿಷ್ಣುವಿನ ಪರಮಪದವನ್ನು ಹೊಂದುತ್ತಾರೆ.
 
[ಕಠೋಪನಿಷತ್ ೧, ೩, ೯ ನೋಡಿ.
 
ತ್ವಾಂಸ-ರುಧಿರ-ಸ್ನಾಯು-ಮೇದೋ-ಮಜ್ಞಾ-
ಸಿ-ಸಂಕುಲಮ
ಪೂರ್ಣ೦ ಮೂತ್ರ ಪುರೀಷಾಭ್ಯಾಂ ಸ್ಕೂಲಂ ನಿಂದ್ಯಮಿದಂ ವಪುಃ
 
II ೮೭ II