This page has not been fully proofread.

22]
 
ವಿವೇಕಚೂಡಾಮಣಿ
 
೩೯
 
ಶಬ್ದಾದಿಭಿಃ ಪಂಚಭಿರೇವ ಪಂಚ
ಪಂಚತ್ವಮಾಪುಃ ಸ್ವಗುಣೇನ ಬದ್ಧಾ
ಕುರಂಗ-ಮಾತಂಗ-ಪತಂಗ-ಮೀನ-
ಶೃಂಗಾ ನರಃ ಪಂಚಭಿರಂಚಿತಃ ಕಿಮ್ 11 22 11
 
ಕುರಂಗ- ಮಾತಂಗ ಪತಂಗ ಮೀನ- ಶೃಂಗಾಃ ಪಂಚ - ಜಿಂಕೆ ಆನೆ ಮಿಡತೆ
ಮೀನು ದುಂಬಿ-ಈ ಐದು ಶಬ್ದಾದಿಭಿಃ ಪಂಚಭಿಃ – ಶಬ್ದವೇ ಮೊದಲಾದ ಐದು
ವಿಷಯಗಳಿಂದ ಸ್ವಗುಣೇನ - ತಮ್ಮ ವಿಷಯಾಭಿಲಾಷೆಯೆಂಬ ಪಾಶದಿಂದ ಬದ್ಧಾ-
ಬದ್ಧವಾಗಿ ಪಂಚತ್ವಂ = ಮೃತ್ಯುವನ್ನು ಆ ಪುಃ = ಹೊಂದಿದುವು;
ಅಂಚಿತಃ ನರಃ ಕಿಂ = ಪಂಚೇಂದ್ರಿಯಗಳಿಂದ ಕೂಡಿರುವ ನರನ ವಿಷಯದಲ್ಲಿ
ಹೇಳತಕ್ಕದ್ದೇನು?
 
ಪಂಚಭಿಃ
 
೭೬. ಜಿಂಕೆ ಆನೆ ಮಿಡತೆ ಮೀನು ದುಂಬಿ-ಈ ಐದು ಶಬ್ದವೇ ಮೊದ
ಲಾದ ವಂಚ ವಿಷಯಗಳಲ್ಲಿ ತಮ್ಮ ತಮ್ಮ ಅಭಿಲಾಷೆಗೆ ಗೋಚರವಾಗಿರುವ
ಯಾವುದೋ ಒಂದು ಗುಣಕ್ಕೆ ಬದ್ಧವಾಗಿ ಮೃತ್ಯುವನ್ನು ಹೊಂದುತ್ತವೆ.
ಈ ಪಂಚೇಂದ್ರಿಯಗಳಿಂದಲೂ ಕೂಡಿರುವ ಮನುಷ್ಯನ ವಿಷಯದಲ್ಲಿ ಹೇಳ
ತಕ್ಕದ್ದೇನು?
 
[೧ ಜಿಂಕೆಯು ಬೇಟೆಗಾರನು ಮಾಡುವ ಶಬ್ದದಿಂದಲೂ ಆನೆಯು ಹೆಣ್ಣಾನೆಯ
ಸ್ಪರ್ಶದಿಂದಲೂ ಮಿಡತೆಯು ದೀಪದ ರೂವದಿಂದಲೂ ಮೀನು ಗಾಳದ ಹುಳುವಿನ
ರುಚಿಯಿಂದಲೂ ದುಂಬಿಯು ಪುಷ್ಪದ ಪರಿಮಳದಿಂದಲೂ ನಾಶವಾಗುತ್ತವೆ. ಹೀಗೆ
ಒಂದೊಂದು ಇಂದ್ರಿಯದ ವಶಕ್ಕೆ ಒಳಪಟ್ಟ ಜಂತುವಿನ ಅವಸ್ಥೆಯೇ ಹೀಗಾದರೆ
ಪಂಚೇಂದ್ರಿಯಗಳ ಹೊಡೆತಕ್ಕೆ ಸಿಕ್ಕಿ ಬಿದ್ದಿರುವ ಮನುಷ್ಯನ ಗತಿಯೇನು?
 
ದೋಷೇಣ ತೀವೋ
 
ವಿಷಯಃ ಕೃಷ್ಣ ಸರ್ಪವಿಷಾದಪಿ ।
ವಿಷಂ ನಿಹಂತಿ ಭೋಕ್ತಾರಂ ದ್ರಷ್ಟಾರಂ ಚಕ್ಷು ಷಾಪ್ಯಯಮ್
 
11 22 11
 
ಕ್ಕಿಂತಲೂ
 
ವಿಷಯಃ - ವಿಷಯವು ಕೃಷ್ಣ ಸರ್ಪ ವಿಷಾತ್ ಅಪಿ= ಕಾಳಸರ್ಪದ ವಿಷ
ದೋಷೇಣ = ದೋಷದಿಂದ ತೀವ್ರ = ತೀಕ್ಷ್ಮವಾಗಿರುವುದು; ವಿಷಂ
ವಿಷವು ಭೋಕ್ತಾರಂ = ತಿನ್ನುವವನನ್ನು ನಿಹಂತಿ = ಕೊಲ್ಲುತ್ತದೆ, ಅಯಂ - ಇದು
ಚಕ್ಷುಷಾ = ಕಣ್ಣಿನಿಂದ ದ್ರಷ್ಟಾರ ಅಪಿ = ನೋಡುವವನನ್ನು ಕೂಡ
{ಕೊಲ್ಲುತ್ತದೆ],
 
P
 
೭೭. ಇಂದ್ರಿಯದ ವಿಷಯವು ದೋಷದಲ್ಲಿ ಕಾಳಸರ್ಪದ ವಿಷ
ಕ್ಕಿಂತಲೂ ತೀಕ್ಷ್ಮವಾಗಿರುವುದು. ವಿಷವಾದರೂ ತಿನ್ನುವವನನ್ನು ಮಾತ್ರ