This page has not been fully proofread.

ವಿವೇಕಚೂಡಾಮಣಿ
 
ಶೃಣುಷ್ಟಾವಹಿತೋ ವಿದ್ವನ್ ಯನ್ಮಯಾ ಸಮುದೀರ್ಯತೇ ।
ತದೇತಚ್ಛವಣಾತ್ ಸದ್ಯೋ
 
ಭವಬಂಧಾದ್ವಿಮೋಕ್ಷಸೇ ॥ ೬೮ ॥
 
20]
 
೩೫
 
ವಿದ್ವನ್, ಯತ್ = ಯಾವುದು ಮಯಾ - ನನ್ನಿಂದ ಸಮುದೀರ್ಯತೇ =
ಹೇಳಲ್ಪಡುತ್ತದೆಯೊ ತತ್, ಅದನ್ನು ಅವಹಿತಃ - ಸಾವಧಾನಮನಸ್ಕನಾಗಿ ಶೃಣು-
ಕೇಳು; ಏತತ್-ಶ್ರವಣಾತ್ . ಇದನ್ನು ಕೇಳುವುದರಿಂದ ಭವಬಂಧಾತ್ ಸಂಸಾರ
ಬಂಧದಿಂದ ಸದ್ಯಃ - ಕೂಡಲೇ ವಿಮೋಕ್ಷ್ಯಸೇ-ಬಿಡುಗಡೆಯನ್ನು ಹೊಂದುತ್ತೀಯೆ.
 
೬೮, ಎಲೈ ಶಿಷ್ಯನೆ, ನಾನು ಯಾವುದನ್ನು ಹೇಳುತ್ತೇನೆಯೊ ಅದನ್ನು
ಸಾವಧಾನಮನಸ್ಕನಾಗಿ ಕೇಳು. ಇದನ್ನು ಕೇಳಿದರೆ ಸಂಸಾರಬಂಧದಿಂದ
ಕೂಡಲೇ ಬಿಡುಗಡೆಯನ್ನು ಹೊಂದುತ್ತೀಯೆ.
 
ಮೋಕ್ಷಸ್ಯ ಹೇತುಃ ಪ್ರಥಮೋ ನಿಗದ್ಯತೇ
ವೈರಾಗ್ಯಮತ್ಯಂತಮನಿತ್ಯ-ವಸ್ತು ಷು ।
ತತಃ ಶಮಶ್ಚಾಪಿ ದಮಸ್ತಿತಿಕ್ಷಾ
 
ನ್ಯಾಸಃ ಪ್ರಸಕ್ತಾಖಿಲಕರ್ಮಣಾಂ ನೃಶಮ್ ॥ ೬೯ ॥
ಅನಿತ್ಯ. ವಸ್ತು ಷ್ಟು = ಅಶಾಶ್ವತ ವಸ್ತುಗಳಲ್ಲಿ ಅತ್ಯಂತಂ ವೈರಾಗ್ಯಂ- ಅತ್ಯಂತ
ವೈರಾಗ್ಯವೇ ಮೋಕ್ಷಸ್ಯ = ಮೋಕ್ಷಕ್ಕೆ ಪ್ರಥಮಃ ಹೇತುಃ - ಮೊದಲನೆಯ ಹೆಜ್ಜೆ
ಯೆಂದು ನಿಗದ್ಯತೇ = ಹೇಳಲ್ಪಡುತ್ತದೆ; ತತಃ – ಅನಂತರ ಶಮಃ = ಶಮವು ಅಪಿ
ಚ ದಮಃ ಮತ್ತು ದಮವು ತಿತಿಕ್ಷಾ ತಿತಿಕ್ಷೆಯು ಪ್ರಸಕ್ತ ಅಖಿಲ ಕರ್ಮಣಾಂ
ಪ್ರಾಪ್ತವಾದ ಸಮಸ್ತ ಕರ್ಮಗಳನ್ನು "ಶ ಅತ್ಯಂತವಾಗಿ ನ್ಯಾಸಃ = ಬಿಡುವುದು.
 

 
೬೯. ಅಶಾಶ್ವತವಾದ ವಸ್ತುಗಳಲ್ಲಿ ಅತ್ಯಂತ ವೈರಾಗ್ಯವೇ ಮೋಕ್ಷಕ್ಕೆ
ಮೊದಲನೆಯ ಹೆಜ್ಜೆ. ಶಮ, ದನ, ತಿತಿಕ್ಷೆ ಮತ್ತು ಪ್ರಾಪ್ತವಾಗಿರುವ
ಸಮಸ್ತ ಕರ್ಮಗಳ ಸಂಪೂರ್ಣತ್ಯಾಗ ಇವು ಅನಂತರದ ಸಾಧನಗಳಾ
ಗಿರುತ್ತವೆ.
 
[೧ ಈ ನಾಲ್ಕು ಸಾಧನಗಳ ಲಕ್ಷಣಗಳನ್ನು ೨೦-೨೪ ಶ್ಲೋಕಗಳಲ್ಲಿ ಹೇಳಿದೆ.
೨ ಶಾಸ್ತ್ರವಿಹಿತವಾದ ಶುಭಕರ್ಮಗಳ ಮತ್ತು ಸ್ವಭಾವತಃ ಪ್ರಾಪ್ತವಾದ
ಅಶುಭ ಕರ್ಮಗಳ.]
 
ತತಃ ಶ್ರುತಿಸ್ತನನನಂ ಸತತ್ತ್ವ-
ಧ್ಯಾನಂ ಚಿರಂ ನಿತ್ಯನಿರಂತರಂ ಮುನೇಃ ।
ತತೋವಿಕಲ್ಪಂ ಪರಮೇತ್ಯ ವಿದ್ವಾನ್
ಇವ ನಿರ್ವಾಣಸುಖಂ ಸಮೃಚ್ಛತಿ
 
11 20 11