This page has not been fully proofread.

೩೪
 
ವಿವೇಕಚೂಡಾಮಣಿ
 
[೬೬
 
ವನ್ನು ಅರಿಯದವರು ಪುನಃ ಪುನಃ ನೆಲದಲ್ಲಿ ಅಡಗಿರುವ ನಿಧಿಯ ಮೇಲೆಯೇ
ನಡೆಯುತ್ತಿದ್ದರೂ ಅದನ್ನು ಹೇಗೆ ಪಡೆಯುವುದಿಲ್ಲವೋ ... ' ಯಥಾಪಿ ಹಿರಣ್ಯ ನಿಧಿಂ
ನಿಹಿತಮತ್ರಜ್ಞಾ ಉಪರ್ಯುಪರಿ ಸಂಚರಂತೋ ನ ವಿಂದೇಯುಃ ಎಂದು
ಛಾಂದೋಗ್ಯಪನಿಷತ್ತು (೮, ೩, ೨) ಹೇಳುತ್ತದೆ.
 
೨ ಆತ್ಮನನ್ನು ನೋಡಬೇಕು, ಶ್ರವಣ ಮಾಡಬೇಕು, ಮನನಮಾಡಬೇಕು, ನಿದಿಧ್ಯಾ
ಸನಮಾಡಬೇಕು' ಆತ್ಮಾ ವಾ ಅರೇ ದ್ರಷ್ಟ ವ್ಯಃ ಶೋತ
ನಿದಿಧ್ಯಾಸಿತವ್ಯಃ (ಬೃಹದಾರಣ್ಯಕ ಉ. ೨. ೪. ೫).]
 
ಮಂತ
 
ತಸ್ಮಾತ್ ಸರ್ವ ಪ್ರಯತ್ನನ
ಸೈರೇವ ಯತ್ನಃ ಕರ್ತವ್ಯೂ
 
ಭವಬಂಧ-ವಿಮುಕ್ತಯೇ ।
ರೋಗಾದಾವಿವ ಪಂಡಿತೈಃ ॥ ೬೬ ॥
 
ತಸ್ಮಾತ್ - ಆದುದರಿಂದ, ಸರ್ವಪ್ರಯತ್ನನ - ಸರ್ವ ಪ್ರಯತ್ನದಿಂದಲೂ
ಭವಬಂಧ- ವಿಮುಕ್ತಯೇ - ಸಂಸಾರವೆಂಬ ಬಂಧದ ಬಿಡುಗಡೆಗಾಗಿ ರೋಗಾದ್
ಇವ ರೋಗ ಮೊದಲಾದುವುಗಳಲ್ಲಿ ಹೇಗೋ ಹಾಗೆ ಪಂಡಿತೈಃ ಸೈ 8 ಏ ನ .
ಪಂಡಿತರಾದ ತಮ್ಮಿಂದಲೇ ಯತ್ನ - ಯತ್ನವು ಕರ್ತವ್ಯಃ = ಮಾಡಲ್ಪಡತಕ್ಕದ್ದು.
 
೬೬. ಆದಕಾರಣ ಪಂಡಿತರಾದವರು ರೋಗಾದಿಗಳು ಬಂದೊದಗಿದಾಗ
ಹೇಗೆ ಬಿಡಿಸಿಕೊಳ್ಳಲು ಯತ್ನಿಸುವರೋ ಹಾಗೆಯೇ ಸರ್ವ ಪ್ರಯತ್ನದಿಂದಲೂ
ಸಂಸಾರಬಂಧದಿಂದ ಬಿಡಿಸಿಕೊಳ್ಳಲು ತಾವೇ ಯತ್ನವನ್ನು ಮಾಡಬೇಕು.
 
ಯಸ್ವರ್ಯಾ ಕೃತಃ ಪ್ರಶ್ನೆ ವರೀಯಾಂಛಾಸ್ತವಿನ್ಮತಃ
ಸೂತ್ರಪ್ರಾಯೋ ನಿಗೂಢಾರ್ಥ್ ಜ್ಞಾತವಶ್ಚ ಮುಮುಕ್ಷುಭಿಃ
 
॥ ೬೭ ೧
 
5
 
ಅದ್ಯ - ಇಂದು ತ್ವಯಾ = ನಿನ್ನಿಂದ ಯಃ = ಯಾವ ಪ್ರಶ್ನಃ - ಪ್ರಶ್ನೆಯು
ಕೃತಃ = ಮಾಡಲ್ಪಟ್ಟಿತೊ [ಅದು] ವರೀಯಾನ್ - ಶ್ರೇಷ್ಠವಾದುದು, ಶಾಸ್ತ್ರವಿತ್.
ಮತಃ-ಶಾಸ್ತ್ರಜ್ಞರಿಗೆ ಸಂಮತವಾದುದು, ಸೂತ್ರಪ್ರಾಯಃ-ಸೂತ್ರಸದೃಶವಾದುದು,
ನಿಗೂಢಾರ್ಥ – ಗಂಭೀರವಾದ ಅರ್ಥವುಳ್ಳದ್ದು, ಮುಮುಕ್ಷುಭಿಃ ಚ - ಮತ್ತು
ಮುಮುಕ್ಷುಗಳಿಂದ ಜ್ಞಾತವ್ಯಃ = ತಿಳಿಯಲ್ಪಡತಕ್ಕದ್ದು.
 
=
 
೬೭. ಎಲೈ ಶಿಷ್ಯನೆ, ಇಂದು ನೀನು ಮಾಡಿದ ಪ್ರಶ್ನೆಯು ಶ್ರೇಷ್ಠ
ವಾದುದು, ಶಾಸ್ತ್ರಜ್ಞರಿಗೆ ಸಮ್ಮತವಾದುದು, ಸೂತ್ರ ಸದೃಶವಾದುದು,
ಗಂಭೀರವಾದ ಅರ್ಥವುಳ್ಳದ್ದು ಮತ್ತು ಮುಮುಕ್ಷಗಳಿಂದ ತಿಳಿಯಲ್ಪಡ
ತಕ್ಕದ್ದು.