This page has been fully proofread once and needs a second look.

೬೪. ಶತ್ರುಗಳನ್ನು ಸಂಹರಿಸದೆ, ಸಮಸ್ತ ರಾಜ್ಯಲಕ್ಷ್ಮಿಯನ್ನು ಪಡೆ
ಯದೆ 'ನಾನು ರಾಜನು' ಎಂದು ಹೇಳಿಕೊಳ್ಳುವುದರಿಂದಲೇ ಅವನು ರಾಜ
ನಾಗಲು ಅರ್ಹನಾಗುವುದಿಲ್ಲ.
 
[ವಿಷಯಗಳೆಂಬ ಶತ್ರುಗಳನ್ನು ಗೆಲ್ಲದೆ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯದೆ
ಅಹಂ ಬ್ರಹ್ಮಾಸ್ಮಿ ಎಂದು ಹೇಳಿ ಕೊಂಡಮಾತ್ರದಿಂದಲೇ ಬ್ರಹ್ಮಜ್ಞಾನಿಯಾಗ-
ಲಾರನು.]
 
ಆಪೋಕ್ತಿಂ ಖನನಂ ತಥೋಪರಿಶಿಲಾದ್ಯುತ್ಕರ್ಷಣಂ ಸ್ವೀಕೃತಿಮ್ ।
ನಿಕ್ಷೇಪಃ ಸಮಪೇಕ್ಷತೇ ನ ಹಿ ಬಹಿಃ ಶಬ್ದೈಸ್ತು ನಿರ್ಗಚ್ಛತಿ ॥
ತದ್ವದ್ಬ್ರಹ್ಮವಿದೋಪದೇಶ-ಮನನ-ಧ್ಯಾನಾದಿಭಿರ್ಲಭ್ಯತೇ !
ಮಾಯಾಕಾರ್ಯ-ತಿರೋಹಿತಂ ಸ್ವಮಮಲಂ ತತ್ತ್ವಂ ನ
ದುರ್ಯುಕ್ತಿಭಿಃ ॥ ೬೫ ॥
 
ನಿಕ್ಷೇಪಃ = ಭೂಮಿಯಲ್ಲಿ ಹೂತಿಟ್ಟಿರುವ ಧನವು, ಆಪ್ತೋಕ್ತಿಂ = ಆಪ್ತರ
ವಾಕ್ಯವನ್ನೂ, ಖನನಂ -=ಅಗೆಯುವುದನ್ನೂ, ತಥಾ = ಹಾಗೆಯೇ, ಉಪರಿ-ಶಿಲಾದಿ-
ಉತ್ಕರ್ಷಣಂ = ಮೇಲಿರುವ ಕಲ್ಲು ಮೊದಲಾದುವುಗಳ ತೆಗೆಯುವಿಕೆಯನ್ನೂ,
ಸ್ವೀಕೃತಿ೦ = ಕೈಯಲ್ಲಿ ತೆಗೆದುಕೊಳ್ಳುವುದನ್ನೂ, ಸಮಪೇಕ್ಷತೇ = ಅಪೇಕ್ಷಿಸುತ್ತದೆ;
ತು= ಆದರೆ,ಶಬ್ದೈಃ = ಶಬ್ದಗಳಿಂದಲೇ, ಬಹಿಃ ನ ಹಿ ನಿರ್ಗಚ್ಛತಿ = ಹೊರಗೆ
ಬರುವುದೇ ಇಲ್ಲ; ತದ್ವತ್ = ಹಾಗೆಯೇ ಬ್ರಹ್ಮವಿದೋಪದೇಶ-ಮನನ-ಧ್ಯಾನಾ-
ದಿಭಿಃ = ಬ್ರಹ್ಮಜ್ಞಾನಿಯ ಉಪದೇಶ, ಮನನ ಧ್ಯಾನ ಮೊದಲಾದುವುಗಳಿಂದ,
ಮಾಯಾಕಾರ್ಯ-ತಿರೋಹಿತಂ = ಮಾಯೆಯ ಕಾರ್ಯದಿಂದ ಮುಚ್ಚಲ್ಪಟ್ಟ
ಸ್ವಂ = ತನ್ನದಾದ, ಅಮಲಂ = ವಿಮಲವಾದ, ತತ್ತ್ವಂ – ತತ್ತ್ವವು ಲಭ್ಯತೇ =
ಹೊಂದಲ್ಪಡುತ್ತದೆ, ದುರ್ಯುಕ್ತಿಭಿಃ = ಕುತರ್ಕಗಳಿಂದ, ನ=ಅಲ್ಲ.
 
೬೫. ಆಪ್ತವಾಕ್ಯ, ಅಗೆಯುವುದು, ಮೇಲಿರುವ ಕಲ್ಲು ಮಣ್ಣು
ಮೊದಲಾದುವನ್ನು ತೆಗೆಯುವುದು, ಕೈಯಲ್ಲಿ ತೆಗೆದುಕೊಳ್ಳುವುದು-ಇವು
ಗಳಿಂದ ನಿಧಿಯನ್ನು ಹೊರಕ್ಕೆ ತರಬಹುದು, ಬರಿಯ ಮಾತುಗಳಿಂದ
ಹೊರಕ್ಕೆ ಬರುವುದಿಲ್ಲ[^೧]. ಹೀಗೆಯೇ ಬ್ರಹ್ಮಜ್ಞಾನಿಯು ಮಾಡಿದ ಉಪದೇಶ,
ಅದರ (ಶ್ರವಣ)-ಮನನ-ಧ್ಯಾನ ಮೊದಲಾದುವುಗಳಿಂದಲೇ[^೨] ಮಾಯೆಯ
ಕಾರ್ಯದಿಂದ ಮುಚ್ಚಲ್ಪಟ್ಟ ತನ್ನದೇ ಆಗಿರುವ ವಿಮಲವಾದ ತತ್ತ್ವವು
ಪ್ರಾಪ್ತವಾಗುವುದಲ್ಲದೆ ಕುತರ್ಕಗಳಿಂದ ಪ್ರಾಪ್ತವಾಗಲಾರದು.
 
[^೧] ಮನುಷ್ಯನು ನಿಧಿಯಮೇಲೆ ನಡೆಯುತ್ತಿದ್ದರೂ ಅದು ಒಳಗಿರುವುದನ್ನು ಅರಿಯ-
ದಿರುವುದರಿಂದ ಅದನ್ನು ಅಗೆದು ತೆಗೆದುಕೊಳ್ಳಲು ಪ್ರವೃತ್ತಿಯಿರುವುದಿಲ್ಲ. 'ನಿಧಿಕ್ಷೇತ್ರ