This page has not been fully proofread.

[೫೫
 
೫೩. ಯಾವ ರೋಗಿಯು ಔಷಧಸೇವನೆ ಪಥ್ಯ ಇವುಗಳನ್ನು ಮಾಡು
ತಾನೆಯೊ ಅವನಿಗೆ ಆರೋಗ್ಯಲಾಭವು ಕಂಡುಬರುತ್ತದೆ, ಇತರರು
ಮಾಡಿದ ಕೆಲಸದಿಂದಲ್ಲ.
 
೨೮
 
ವಿವೇಕಚೂಡಾಮಣಿ
 
ವಸ್ತುಸ್ವರೂಪಂ ಸ್ಪುಟ ಬೋಧಚಕ್ಷು ಷಾ
ಸೈನೈವ ವೇದ್ಯಂ ನ ತು ಪಂಡಿತೇನ ।
ಚಂದ್ರಸ್ವರೂಪಂ ನಿಜಚಕ್ಷು ವ
ಜ್ಞಾತವ್ಯಮರವಗಮ್ಯತೇ ಕಿಮ್
 
ವಸ್ತುಸ್ವರೂಪಂ = ವಸ್ತುವಿನ ಯಾಥಾತ್ಮವು ಸ್ಪುಟ ಬೋಧಚಕ್ಷುಷಾ
ಸ್ಪಷ್ಟವಾದ ಜ್ಞಾನಚಕ್ಷುಸ್ಸಿನ ಮೂಲಕ ಸ್ಪೇನ ಏವ = ತನ್ನಿಂದಲೇ ವೇದ್ಯಂ =
ತಿಳಿಯಲ್ಪಡತಕ್ಕದ್ದು, ನ ತು ಪಂಡಿತೇನ - [ಮತ್ತೊಬ್ಬ ಪಂಡಿತನಿಂದ ತಿಳಿಯ
ಲಾಗುವುದಿಲ್ಲ; ಚಂದ್ರ ಸ್ವರೂಪಂ ಚಂದ್ರನ ಸ್ವರೂಪವು ನಿಜ- ಚಕ್ಷುಷಾ ಏವ -
ತನ್ನ ಕಣ್ಣಿನಿಂದಲೇ ಜ್ಞಾತವ್ಯಂ - ತಿಳಿಯಲ್ಪಡತಕ್ಕದ್ದು, ಅನೈ - ಇತರರಿಂದ
ಅವಗಮ್ಯತೇ ಕಿಮ್ - ತಿಳಿಯಲ್ಪಡುತ್ತದೆಯೇ?
 
೫೪. ವಸ್ತುವಿನ ನಿಜವಾದ ಸ್ಥಿತಿಯನ್ನು ತಾನೇ ತನ್ನ ಶುದ್ಧವಾದ
ಜ್ಞಾನಚಕ್ಷುಸ್ಸಿನಿಂದ ಅರಿತುಕೊಳ್ಳಬೇಕು, ಮತ್ತೊಬ್ಬ ಪಂಡಿತನ ಮೂಲಕ
ತಿಳಿಯಲಾಗುವುದಿಲ್ಲ. ಚಂದ್ರನ ಆಕಾರವನ್ನು ತನ್ನ ಕಣ್ಣಿನಿಂದಲೇ ತಿಳಿದು
ಕೊಳ್ಳಬೇಕು; ಇತರರ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವೆ?
 
[೧ .... ಯಾರು ಜ್ಞಾನಚಕ್ಷುಸ್ಸಿನಿಂದ ತಿಳಿದುಕೊಳ್ಳುತ್ತಾರೆಯೊ ಅವರು
ಬ್ರಹ್ಮವನ್ನು ಹೊಂದುತ್ತಾರೆ. ಕ್ಷೇತ್ರಕ್ಷೇತ್ರಜ್ಞ ರೇವಮಂತರಂ ಜ್ಞಾನ
ಚಕ್ಷುಷಾ । ಭೂತ ಪ್ರಕೃತಿ ಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ ॥
ಎಂದು ಗೀತೆಯಲ್ಲಿ (೧೩. ೩೪) ಹೇಳಿದೆ.
ಶಾಸ್ತ್ರಾಚಾರ್ಯರ ಉಪದೇಶದಿಂದ ತನ್ನ
ಅನುಭವಕ್ಕೆ ಬ೦ದಿರುವ ಜ್ಞಾನವೇ ಚಕ್ಷುಸ್ಸು.]
 
ಅವಿದ್ಯಾಕಾಮ-ಕರ್ಮಾದಿ-ಪಾಶಬಂಧಂ ವಿಮೋಚಿತುಮ್ ।
ಕಃ ಶಕುಯಾನಾತ್ಮಾನಂ ಕಲ್ಪ ಕೋಟಿಶತೆರಪಿ
 
। ೫೫ ।
 
ಆತ್ಮಾನಂ ವಿನಾ - ತನ್ನನ್ನು ಬಿಟ್ಟರೆ ಅವಿದ್ಯಾ-ಕಾಮ-ಕರ್ಮಾದಿ-ಪಾಶ.
ಬಂಧಂ - ಅವಿದ್ಯಾ- ಕಾಮ ಕರ್ಮಗಳೇ ಮೊದಲಾದ ಪಾಶಗಳ ಬಂಧವನ್ನು ವಿಮೋ
ಚಿತುಂ = ಬಿಡಿಸಿಕೊಳ್ಳುವುದಕ್ಕೆ ಕಲ್ಪ ಕೋಟಿಶತೈರಪಿ = ನೂರು ಕೋಟಿ ಕಲ್ಪ
ಗಳಿಂದಲೂ ಕಃ ಶಕ್ಷುಯಾತ್ = ಯಾವನು ಶಕ್ತನಾದಾನು?