This page has not been fully proofread.

೨೬
 
ವಿವೇಕಚೂಡಾಮಣಿ
 
[೪೯
 
ಕೋ ನಾಮ ಬಂಧಃ ಕಥಮೇಷ ಆಗತಃ
ಕಥಂ ಪ್ರತಿಷ್ಠಾಸ್ಯ ಕಥಂ ವಿಮೋಕ್ಷಃ ।
ಕೋಸಾವನಾತ್ಮಾ ಪರಮಃ ಕ ಆತ್ಮಾ
ತಯೋರ್ವಿವೇಕಃ ಕಥಮೇತದುಚ್ಯ ತಾಮ್ ॥ ೪೯ ॥
 

 
ಬಂಧಃ = ಬಂಧವೆಂಬುದು ನಾನು ಯಾವುದು? ಏಷಃ = ಇದು
ಕಥಂ . ಹೇಗೆ ಆಗತಃ = ಬಂದಿರುವುದು? ಅಸ್ಯ - ಇದರ ಪ್ರತಿಷ್ಠಾ = ನೆಲೆಯು
ಕಥಂ - ಹೇಗೆ? ವಿಮೋಕ್ಷ = ಬಿಡುಗಡೆಯು ಕಥಂ ಹೇಗೆ? ಅನಾತ್ಮಾ- ಅನಾತ್ಮವು
ಕ ಅಸ್- ಯಾವುದು? ಪರಮಃ ಆತ್ಮಾ - ಪರಮಾತ್ಮನು
ತಯೋಃ = = ಇವರಿಬ್ಬರ ವಿವೇಕಃ - ವಿವೇಚನೆಯು ಕಥಂ - ಹೇಗೆ? ಏತತ್ ಇದು
ಉಚ್ಯತಾಂ = ಹೇಳಲ್ಪಡಲಿ.
 
ಕಃ = ಯಾರು?
 
೪೯. ಬಂಧವೆಂಬುದು ಯಾವುದು? ಇದು ಹೇಗೆ ಬಂದಿರುತ್ತದೆ?
ಇದು ನೆಲೆಗೊಂಡಿರುವುದು ಹೇಗೆ? ಇದರಿಂದ ಬಿಡುಗಡೆಯಾಗುವುದು ಹೇಗೆ?
ಅನಾತ್ಮವಸ್ತುವು ಯಾವುದು? ಪರಮಾತ್ಮನು ಯಾರು? ಆತ್ಮಾನಾತ್ಮರನ್ನು
ವಿವೇಚಿಸುವುದು ಹೇಗೆ? ಈ ವಿಷಯವನ್ನು ಹೇಳಬೇಕು.
 
ಶ್ರೀಗುರುರುವಾಚ
 
ಧನ್ನೋsಸಿ ಕೃತಕೃತ್ಯೋsಸಿ ಪಾವಿತಂ ತೇ ಕುಲಂ ತ್ವಯಾ ।
ಯದವಿದ್ಯಾಬಂಧಮುಕ್ತಾ, ಬ್ರಹ್ಮಭವಿತುಮಿಚ್ಛಸಿ ॥ ೫೦ ॥
 
ಶ್ರೀಗುರುಃ ಉವಾಚ-ಗುರುವು ಹೇಳಿದನು-ಧನ್ಯಃ ಅಸಿ- ನೀನು ಧನ್ಯನಾಗಿ
ರುವೆ; ಕೃತಕೃತ್ಯಃ ಅಸಿ - ಕೃತಾರ್ಥನಾಗಿರುವೆ; ತ್ವಯಾ = ನಿನ್ನಿಂದ ತೇ - ನಿನ್ನ
ಕುಲಂ - ಕುಲವು ಪಾವಿತಂ = ಪವಿತ್ರ ಮಾಡಲ್ಪಟ್ಟಿತು, ಯತ್ = ಯಾವ ಕಾರಣ
ದಿಂದ ಅವಿದ್ಯಾಬಂಧಮುಕ್ತಾ ಅವಿಧ್ಯಾ ಬಂಧದ ಬಿಡುಗಡೆಯ ಮೂಲಕ ಬ್ರ
ಭವಿತುಂ - ಬ್ರಹ್ಮವಾಗಲು ಇಚ್ಛಿಸಿ = ಇಚ್ಛಿಸುತ್ತಿರುವೆಯೊ.
 
೫೦. ಗುರುವು ಹೇಳಿದನು: ನೀನು ಧನ್ಯನು, ಕೃತಕೃತ್ಯನು. ನಿನ್ನ
ಕುಲವು ನಿನ್ನಿಂದ ಪವಿತ್ರ ಮಾಡಲ್ಪಟ್ಟಿತು; ಏಕೆಂದರೆ ಅವಿದ್ಯಾಬಂಧದಿಂದ
ಬಿಡಿಸಿಕೊಂಡು ಬ್ರಹ್ಮಭಾವವನ್ನು ಪಡೆಯಲು ಬಯಸುತ್ತಿರುವೆ.
 
[೧ 'ಯಾರ ಮನಸ್ಸು ಅಪಾರವಾದ ಸಚ್ಚಿದಾನಂದ ಸಮುದ್ರವೆಂಬ ಪರಬ್ರಹ್ಮದಲ್ಲಿ
ಲೀನವಾಗಿದೆಯೋ ಅವನಿಂದ ಕುಲವು ಪವಿತ್ರವಾಯಿತು, ತಾಯಿಯು ಕೃತಾರ್ಥಳಾ
ದಳು, ಭೂಮಿಯು ಪುಣ್ಯವತಿಯಾದಳು' ಕುಲಂ ಪವಿತ್ರಂ ಜನನೀ
ವಿಶ್ವಂಭರಾ ಪುಣ್ಯವತೀ ಚ ತೇನ । ಅಪಾರ- ಸಚ್ಚಿತ್-ಸುಖ-ಸಾಗರೇಸ್ಮಿನ್
ಲೀನಂ ಪರೇ ಬ್ರಹ್ಮಣಿ ಯಸ್ಯ ಚೇತಃ । ]
 
ಕೃತಾರ್ಥಾ