This page has not been fully proofread.

ವಿವೇಕಚೂಡಾಮಣಿ
 
[೫೭೯
 
ವಿ
ರಕ್ತರಾದ, ಪ್ರಶಾಂತಚಿತ್ತಾಃ -= ಪ್ರಶಾಂತಚಿತ್ತರಾದ, ಶ್ರುತಿರಸಿ ಕಾಃ = ಶ್ರುತಿಯಲ್ಲಿ

ರಸಿಕರಾದ, ಮುಮುಕ್ಷವಃ = ಮುಮುಕ್ಷುಗಳಾದ, ಯತಯಃ -= ಪ್ರಯತ್ನಶೀಲರು

ಯೇ -= ಯಾರೊ, [ತೇ = ಅವರು] ಹಿತಂ = ಹಿತವಾದ, ಇಮಮ್ ಉಪದೇಶಂ
=
ಈ ಉಪದೇಶವನ್ನು, ಆದ್ರಿಯಂತಾಂ = ಆದರಿಸಲಿ.
 
೨೮೬
 

 
೫೭೮,. ಸಾಧನದ ಅನುಷ್ಠಾನದಿಂದ[^೧] ಚಿತ್ರದ ಸಮಸ್ತ ದೋಷಗಳನ್ನೂ

ಕಳೆದುಕೊಂಡ, ಸಂಸಾರಸುಖದಲ್ಲಿ ವಿರಕ್ತರಾದ, ಪ್ರಶಾಂತಚಿತ್ತರಾದ,

ಶ್ರುತಿಯಲ್ಲಿ ರಸಿಕರಾದ, ಮುಮುಕ್ಷುಗಳಾದ ಪ್ರಯತ್ನಶೀಲರು ಹಿತವಾದ

ಉಪದೇಶವನ್ನು ಆದರಿಸಲಿ.
 

 
[ ^೧]ಯಜ್ಞಾದಿ ಬಾಹ್ಯ ಸಾಧನಗಳಿಂದಲೂ ಶವಾದಿ ಅಂತರಂಗಸಾಧನದಿಂದಲೂ.
]
 
ಸಂಸಾರಾಧ್ವನಿ ತಾಪಭಾನು-ಕಿರಣ-ಪ್ರೋದ್ಭೂತ-ದಾಹವ್ಯಥಾ-

ಖಿನ್ನಾನಾಂ ಜಲಕಾಂಕ್ಷೆಯಾ ಮರುಭುವಿ ಭ್ರಾಂತ್ಯಾ
 
ಪರಿಭ್ರಾಮ್ಯತಾಮ್ ।

ಅತ್ಯಾಸನ್ನ-ಸುಧಾಂಬುಧಿಂ ಸುಖಕರಂ ಬ್ರಹ್ಮಾದ್ವಯಂ ದರ್ಶಯಂ-
ತೇ

ತ್ಯೇ
ಷಾ ಶಂಕರಭಾರತೀ ವಿಜಯತೇ ನಿರ್ವಾಣ-ಸಂದಾಯಿನೀ
 
॥ ೫೭೯
 

 
ಸಂಸಾರ- ಅಧ್ವನಿ- = ಸಂಸಾರಮಾರ್ಗದಲ್ಲಿ, ತಾಪಭಾನು- ಕಿರಣ -ಪ್ರೋತ.
ದ್ಭೂತ-
ದಾಹವ್ಯಥಾ -ಖಿನ್ನಾನಾಂ = ತಾಪತ್ರಯವೆಂಬ ಸೂರ್ಯಕಿರಣದಿಂದ ಉಂಟಾದ

ಬಾಯಾರಿಕೆಯ ವ್ಯಥೆಯಿಂದ ಬಳಲುತ್ತಿರುವ, ಮರುಭುವಿ = ಮರುಭೂಮಿಯಲ್ಲಿ
,
ಜಲ, -ಕಾಂಕ್ಷೆಯಾ -= ನೀರಿಗಾಗಿ, ಭ್ರಾಂತ್ಯಾ -= ಭ್ರಾಂತಿಯಿಂದ, ಪರಿಭ್ರಾಮ್ಯತಾಂ =

ಅಲೆಯುತ್ತಿರುವ, [ಚೇತನರಿಗೆ] ಅತ್ಯಾಸನ್ನ ಸುಧಾಂಬುಧಿಂ = ಅತ್ಯಂತ ಸಮೀಪ
-
ದಲ್ಲಿರುವ ಅಮೃತಸಮುದ್ರದಂತಿರುವ, ಸುಖಕರಂ- = ಸುಖಕರವಾದ, ಅದ್ವಯಂ

ಬ್ರಹ್ಮ-= ಅದ್ವಿತೀಯ ಬ್ರಹ್ಮವನ್ನು, ದರ್ಶಯಂತೀ = ತೋರಿಸುತ್ತಿರುವ, ನಿರ್ಮಾಣ
-
ಸಂದಾಯಿನೀ -= ಮೋಕ್ಷದಾಯಕವಾದ, ಏಷಾ = ಈ, ಶಂಕರಭಾರತೀ = ಶಂಕರ

ವಾಣಿಯು, ವಿಜಯತೇ -= ಸರ್ವೋತ್ಕೃಷ್ಟವಾಗಿರುತ್ತದೆ.
 

 
೫೭೯. ಸಂಸಾರಮಾರ್ಗದಲ್ಲಿ ತಾಪತ್ರಯವೆಂಬ ಸೂರ್ಯ ಕಿರಣದಿಂದ

ಉಂಟಾದ ಬಾಯಾರಿಕೆಯಿಂದ ಬಳಲುತ್ತಿರುವ, ಮರುಭೂಮಿಯಲ್ಲಿ ನೀರಿ

ಗಾಗಿ ಭ್ರಾಂತಿಯಿಂದ ಅಲೆಯುತ್ತಿರುವ (ಚೇತನರಿಗೆ) ಅತ್ಯಂತ ಸಮೀಪದಲ್ಲಿ

ರುವ ಅಮೃತಸಮುದ್ರದಂತಿರುವ ಸುಖಕರವಾದ ಅದ್ವಿತೀಯಬ್ರಹ್ಮವನ್ನು

ತೋರಿಸಿಕೊಡುತ್ತಿರುವ, ಮೋಕ್ಷದಾಯಕವಾದ ಈ ಶಂಕರವಾಣಿಯು

ಸರ್ವೋತ್ಕೃಷ್ಟವಾಗಿರುತ್ತದೆ.