This page has not been fully proofread.

ವಿವೇಕಚೂಡಾಮಣಿ
 
೫೭೮]
 
ಅವನಿಂದ ಸಮನುಜ್ಞಾತಃ-
- ಅನುಜ್ಞೆಯನ್ನು ಪಡೆದವನಾಗಿ ನಿರ್ಮುಕ್ತ ಬಂಧನಃ-
ಬಂಧದಿಂದ ಬಿಡುಗಡೆ ಹೊಂದಿದ ಸಃ = ಅವನು ಯ = ಹೊರಟುಹೋದನು.
 
೫೭೫, ಹೀಗೆ ಗುರುವಿನ ವಾಕ್ಯವನ್ನು ಕೇಳಿ ಬಂಧದಿಂದ ಮುಕ್ತನಾದ ಆ
ಶಿಷ್ಯನು ನಮ್ರಭಾವದಿಂದ ನಮಸ್ಕರಿಸಿ ಗುರುವಿಂದ ಅನುಜ್ಞೆಯನ್ನು ಪಡೆದು
ಹೊರಟುಹೋದನು.
 
ಗುರುರೇವಂ ಸದಾನಂದ-ಸಿಂಧೂ ನಿರ್ಮಗ್ನಮಾನಸಃ ।
ಪಾವಯನ್ ವಸುಧಾಂ ಸರ್ವಾ೦ ವಿಚಚಾರ ನಿರಂತರಮ್ ೧೫೭೬॥
 
ಏವಂ = ಹೀಗೆ ಗುರುಃ - ಗುರುವು ಸದಾನಂದಸಿಂದ್, ಸದಾನಂದ ಸಾಗರ
ದಲ್ಲಿ ನಿರ್ಮಗ್ನ, ಮಾನಸಃ – ಮುಳುಗಿದ ಮನಸ್ಸುಳ್ಳವನಾಗಿ ಸರ್ವಾ೦ ವಸುಧಾಂ-
ಸಮಸ್ತ ಭೂಮಿಯನ್ನು ಪಾವಯನ್ = ಪವಿತ್ರಗೊಳಿಸುತ್ತ ನಿರಂತರಂ- ನಿರಂತರ
ವಾಗಿ ವಿಚಚಾರ = ಸಂಚರಿಸುತ್ತಿದ್ದನು.
 
అలుగ
 
೫೭೬. ಹೀಗೆ ಗುರುವು ಸದಾನಂದಸಾಗರದಲ್ಲಿ ಮುಳುಗಿದ ಮನಸ್ಸುಳ್ಳವ
ನಾಗಿ ಸಮಸ್ತ ಭೂಮಿಯನ್ನೂ ಪವಿತ್ರಗೊಳಿಸುತ್ತ ನಿರಂತರವೂ ಸಂಚರಿ
ಸುತ್ತಿದ್ದನು.
 
ಇತ್ಯಾಚಾರ್ಯಸ್ಯ ಶಿಷ್ಯಸ್ಯ ಸಂವಾದೇನಾತ್ಮ-ಲಕ್ಷಣಮ್ ।
ನಿರೂಪಿತಂ ಮುಮುಕ್ಷಣಾಂ ಸುಖಬೋಧೋಪಪತ್ರಯೇ ॥೫೭೭॥
 
ಇತಿ - ಹೀಗೆ ಆಚಾರ್ಯಸ್ಯ ಆಚಾರ್ಯನ ಶಿಷ್ಯ ಸ್ಯ = [ ಮತ್ತು ಶಿಷ್ಯನ
ಸಂವಾದೇನ - ಸಂವಾದದಿಂದ ಆತ್ಮಲಕ್ಷಣಂ = ಆತ್ಮಸ್ವರೂಪವು ಮುಮುಕ್ಷ
ಣಾಂ - ಮುಮುಕ್ಷುಗಳಿಗೆ ಸುಖ ಬೋಧ ಉಪಪತ್ತಯೇ - ಸುಗಮವಾಗಿ ಜ್ಞಾನ
ವನ್ನು ಹೊಂದಲು ನಿರೂಪಿತಂ ನಿರೂಪಿಸಲ್ಪಟ್ಟಿತು.
 

 

 
೫೭೭. ಹೀಗೆ ಆಚಾರ್ಯನ ಮತ್ತು ಶಿಷ್ಯನ ಸಂವಾದದಿಂದ ಮುಮುಕ್ಷು
ಗಳಿಗೆ ಸುಗಮವಾಗಿ ಜ್ಞಾನವನ್ನು ಹೊಂದಲು ಆತ್ಮಸ್ವರೂಪವು ನಿರೂಪಿಸ
ಲ್ಪಟ್ಟಿತು.
 
ಹಿತಮಿದಮುಪದೇಶಮಾದ್ರಿಯಂತಾ೦
ವಿಹಿತ-ನಿರಸ-ಸಮಸ್ತ-ಚಿತ್ತದೋಷಾಃ ।
ಭವಸುಖ-ವಿರತಾಃ ಪ್ರಶಾಂತಚಿತ್ತಾ
ಶ್ರುತಿರಸಿಕಾ ಯತಯೋ
 
ಮುಮುಕ್ಷವೋ ಯೇ ೧೫೭೮॥
 
ವಿಹಿತ ನಿರಸ್ತ ಸಮಸ್ತ.ಚಿತ್ತ ದೋಷಾಃ ಸಾಧನದ ಅನುಷ್ಠಾನದಿಂದ ಚಿತ್ರದ
ಸಮಸ್ತ-ದೋಷಗಳನ್ನೂ ಕಳೆದುಕೊಂಡ ಭವಸುಖವಿರತಾಃ - ಸಂಸಾರಸುಖದಲ್ಲಿ