This page has been fully proofread once and needs a second look.

ಆವೃತೇಃ = = ಆವರಣದ, ಸತ್-ಅಸತ್ತ್ವಾಭ್ಯಾಂ = ಇರುವಿಕೆ ಮತ್ತು ಇಲ್ಲದಿರು-
ವಿಕೆ ಎಂಬಿವುಗಳ ದೆಸೆಯಿಂದ, ಬಂಧಮೋಕ್ಷಣೆಣೇ = ಬಂಧಮೋಕ್ಷಗಳು, ವಕ್ತವ್ಯೇ =
ಹೇಳಲ್ಪಡತಕ್ಕವು; ಬ್ರಹ್ಮಣಃ = ಬ್ರಹ್ಮಕ್ಕೆ, ಕಾಚಿತ್ = ಯಾವ, ಆವೃತಿಃ = ಆವರಣವೂ,
ನ = ಇಲ್ಲವು; ಅನ್ಯ-ಅಭಾವಾತ್ = ಬೇರೊಂದು ವಸ್ತುವು ಇಲ್ಲದಿರುವುದರಿಂದ, ಅನಾ-
ವೃತಂ = [ಅದಕ್ಕೆ] ಆವರಣವಿಲ್ಲ; ಯದಿ ಅಸ್ತಿ = [ಆವರಣವು] ಇದ್ದರೆ, ಅದೈದ್ವೈತ-
ಹಾನಿಃ ಸ್ಯಾತ್ = ಅದೈದ್ವೈತಹಾನಿಯುಂಟಾಗುತ್ತದೆ; ಶ್ರುತಿಃ = ಶ್ರುತಿಯು, ದ್ವೈತಂ=
ದ್ವೈತವನ್ನು, ನ ಉ ಸಹತೇ = ಸಹಿಸುವುದಿಲ್ಲ.
 
೫೬೯. ಮಾಯೆಯ ಆವರಣವಿದ್ದರೆ ಅಥವಾ ಇಲ್ಲದಿದ್ದರೆ ಬಂಧ-
ಮೋಕ್ಷಗಳನ್ನು ಹೇಳಬಹುದು. ಆದರೆ ಬ್ರಹ್ಮಕ್ಕೆ ಯಾವ ಆವರಣವೂ
ಇರುವುದಿಲ್ಲ; ಏಕೆಂದರೆ ಎರಡನೆಯ ವಸ್ತುವೇ ಇಲ್ಲದಿರುವುದರಿಂದ ಅದಕ್ಕೆ
ಯಾವ ಆವರಣವೂ ಇಲ್ಲ. ಆವರಣವಿದ್ದರೆ ಅದ್ವೈತಕ್ಕೆ ಹಾನಿಯುಂಟಾಗು-
ತ್ತದೆ, ಆದರೆ ಶ್ರುತಿಯು ದ್ವೈತವನ್ನು ಸಹಿಸುವುದಿಲ್ಲ.[^೧]
 
[^೧] 'ಯಾವನು ಇಲ್ಲಿ ಭೇದವಿರುವಂತೆ ನೋಡುವನೋ ಅವನು ಮೃತ್ಯುವಿನಿಂದ
ಮೃತ್ಯುವನ್ನು ಹೊಂದುತ್ತಾನೆ' ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ
ನಾನೇವ ಪಶ್ಯತಿ (ಕಠ ಉ, ೨. ೪. ೧೧).]
 
ಬಂಧಂ ಚ ಮೋಕ್ಷಂ ಚ ಮೃಷೈವ ಮೂಢಾ
ಬುದ್ದೇರ್ಗುಣಂ ವಸ್ತುನಿ ಕಲ್ಪಯಂತಿ ।
ದೃಗಾವೃತಿಂ ಮೇಘಕೃತಾಂ ಯಥಾ ರವೌ
ಯತೋಽದ್ವಯಾಽಸಂಗ-ಚಿದೇತದಕ್ಷರಮ್ ॥ ೫೭೦ ।
 
ಮೂಢಾಃ = ಮೂಢರು, ಬುದ್ಧೇಃ = ಬುದ್ಧಿಯ, ಗುಣಂ = ಗುಣವಾಗಿರುವ,
ಬಂಧಂ ಚ = ಬಂಧವನ್ನೂ, ಮೋಕ್ಷಂ ಚ = ಮೋಕ್ಷವನ್ನೂ, ವಸ್ತುನಿ = ವಸ್ತುವಿನಲ್ಲಿ,
ಮೃಷಾ ಏವ = ಸುಳ್ಳಾಗಿಯೇ, ಕಲ್ಪಯಂತಿ = ಕಲ್ಪಿಸುತ್ತಾರೆ, ಮೇಘಕೃತಾಂ =
ಮೇಘದಿಂದಾದ, ದೃಕ್-ಆವೃತಿಂ = ದೃಷ್ಟಿಯ ಮರೆಯನ್ನು, ರವೌ = ಸೂರ್ಯನಲ್ಲಿ,
ಯಥಾ = ಹೇಗೊ [ಹಾಗೆ]; ಯತಃ = ಏಕೆಂದರೆ, ಏತತ್ = ಇದು, ಅದ್ವಯ-
ಅಸಂಗ-ಚಿತ್ = ಅನ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ, ಅಕ್ಷರಂ =
ಅಕ್ಷರವೇ.
 
೫೭೦. ಮೇಘದಿಂದಾಗಿರುವ ದೃಷ್ಟಿಯ ಮರೆಯನ್ನು ಸೂರ್ಯನಲ್ಲಿ
ಕಲ್ಪಿಸುವಂತೆ ಮೂಢರು ಬುದ್ಧಿಯ ಗುಣವಾದ ಬಂಧವನ್ನೂ ಮೋಕ್ಷ-
ವನ್ನೂ ನಿತ್ಯವಸ್ತುವಿನಲ್ಲಿ ಸುಳ್ಳಾಗಿಯೇ ಆರೋಪಿಸುತ್ತಾರೆ; ಏಕೆಂದರೆ ಈ
ನಿತ್ಯವಸ್ತುವು ಅದ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ ಅಕ್ಷರವೇ.