We're performing server updates until 1 November. Learn more.

This page has not been fully proofread.

೨೮೦
 
ವಿವೇಕಚೂಡಾಮಣಿ
 
[೫೬೪
 
ಘಟ್ ನಷ್ಟೇ ಯಥಾ ಮೈಮ ಪ್ರೋತ್ಸವ ಭವತಿ ಸ್ಪುಟಿಮ್ ।
ತಥೈವೋಪಾಧಿವಿಲಯೇ ಬ್ರಹ್ಮನ ಬ್ರಹ್ಮವಿತೃಯಮ್ ॥ ೫೬೪ ॥
 
ಘಟೇ ನಷ್ಟೇ [ಸತಿ) - ಗಡಿಗೆಯು ನಾಶವಾದಾಗ ಮೈಮ-[ಅದರಲ್ಲಿರುವ
ಆಕಾಶವು ಯಥಾ - ಹೇಗೆ ಮೈಮ ಏವ ಸ್ಪುಟಂ ಭವತಿ-ಸ್ಪುಟವಾಗಿ ಆಕಾಶವೇ
ಆಗುತ್ತದೆಯೊ ತಥಾ ಏವ ಹಾಗೆಯೇ ಉಪಾಧಿ ವಿಲಯ - ಉಪಾಧಿಯು ನಾಶ
 
ವಾದಾಗ ಬ್ರಹ್ಮವಿತ್ - ಬ್ರಹ್ಮಜ್ಞಾನಿಯು ಸ್ವಯಂ ತಾನೇ ಬ್ರಹ್ಮ ಏವ ಭವತಿ
ಬ್ರಹ್ಮವಾಗುತ್ತಾನೆ.
 
೫೬೪, ಗಡಿಗೆಯು ನಾಶವಾದಾಗ ಅದರಲ್ಲಿರುವ ಆಕಾಶವು ಹೇಗೆ
ಸ್ಪುಟವಾಗಿ ಮಹಾಕಾಶವೇ ಆಗುತ್ತದೆಯೋ ಹಾಗೆಯೇ ಉಪಾಧಿಯು ನಾಶ
ವಾದಾಗ ಬ್ರಹ್ಮಜ್ಞಾನಿಯು ತಾನೇ ಬ್ರಹ್ಮವಾಗುತ್ತಾನೆ.
 
ಕ್ಷೀರಂ ಕ್ಷೀರೇ ಯಥಾ ಕ್ಷಿಪ್ತಂ ತೈಲಂ ತೈಲೇ ಜಲಂ ಜಲೇ ।
ಸಂಯುಕ್ತಮೇಕತಾಂ ಯಾತಿ ತರ್ಥಾತ್ಮನಾತ್ಮವಿನ್ಮುನಿಃ ॥ ೫೬೫ ॥
 
F
 
ಕ್ಷೀರೇ - ಹಾಲಿನಲ್ಲಿ ಕ್ಷಿಪ್ತಂ = ಸುರಿದ ಕ್ಷೀರಂ - ಹಾಲು ಯಥಾ – ಹೇಗೊ,
ತೈಲೇ- ಎಣ್ಣೆಯಲ್ಲಿ [ಸುರಿದ) ತೈಲಂ = ಎಣ್ಣೆಯು [ಹೇಗೊ, ಜಲೇ - ನೀರಿನಲ್ಲಿ
ಸಂಯುಕ್ತಂ = ಸೇರಿಸಿದ ಜಲಂ... ನೀರು [ಹೇಗೊ, ತಥಾ ಏವ ಹಾಗೆಯೇ ಆತ್ಮ
ನಿತ್ = ಆತ್ಮಜ್ಞಾನಿಯಾದ ಮುನಿಃ = ಮುನಿಯು ಆತ್ಮನಿ - ಬ್ರಹ್ಮದಲ್ಲಿ ಏಕತಾಂ
ಯಾತಿ - ಐಕ್ಯವನ್ನು ಹೊಂದುತ್ತಾನೆ.
 
೫೬೫ ಹಾಲಿನಲ್ಲಿ ಸುರಿದ ಹಾಲು, ಎಣ್ಣೆಯಲ್ಲಿ ಸುರಿದ ಎಣ್ಣೆ, ನೀರಿ
ನಲ್ಲಿ ಸೇರಿಸಿದ ನೀರು-ಇವು ಹೇಗೆ ಒಂದಾಗುತ್ತವೆಯೋ ಹಾಗೆಯೇ ಆತ್ಮ
ಜ್ಞಾನಿಯಾದ ಮುನಿಯು ಬ್ರಹ್ಮದಲ್ಲಿ ಐಕ್ಯನಾಗುತ್ತಾನೆ.
 
[ಕಠ ಉ. ೪, ೧೫ ಮತ್ತು ಮುಂಡಕ ಉ. ೩. ೨. ೮ ಇವುಗಳೊಂದಿಗೆ ಹೋಲಿಸಿ.
 
ಏವಂ ವಿದೇಹವಲ್ಕಂ ಸನ್ಮಾತ್ರತ್ವಮಖಂಡಿತಮ್ ।
ಬ್ರಹ್ಮಭಾವಂ ಪ್ರಪದೈವ ಯತಿರ್ನಾವರ್ತತೇ ಪುನಃ ॥ ೫೬೬ ।
 
ಏವಂ = ಹೀಗೆ ವಿದೇಹ ವಲ್ಯಂ • ವಿದೇಹಮುಕ್ತಿಯನ್ನು (ಹೊಂದಿ]
ಅಖಂಡಿತಂ ಅಖಂಡವಾದ ಸನ್ಮಾತ್ರತ್ವ - ಸರೂಪತ್ವವೆಂಬ ಬ್ರಹ್ಮಭಾವಂ =
ಬ್ರಹ್ಮಭಾವವನ್ನು ಪ್ರಪದ್ಯ- ಪಡೆದು ಏಷಃ ಯತಿಃ – ಈ ಯತಿಯು ಪುನಃ ಮತ್ತೆ
ನ ಆವರ್ತತೇ ಹಿಂತಿರುಗುವುದಿಲ್ಲ.
 
=