This page has not been fully proofread.

ವಿವೇಕಚೂಡಾಮಣಿ
 
[೫೬೦
 
ರೂಪನೂ ಆನಂದಸ್ವರೂಪನೂ ಆತ್ಮನೂ ಆದ ತನಗೆ ಏನೂ ಆಗುವುದಿಲ್ಲ.
ಇವನು ಮರದ ಹಾಗೆ ಅವಿನಾಶಿಯಾಗಿರುತ್ತಾನೆ.
 
೨೭೮
 
ಪ್ರಜ್ಞಾನಘನ ಇತ್ಯಾತ್ಮಲಕ್ಷಣಂ ಸತ್ಯ ಸೂಚಕಮ್ ।
ಅನೂಪಾಧಿಕವ ಕಥಯಂತಿ ವಿನಾಶನಮ್
 
॥ ೫೬೦ ॥
 
ಪ್ರಜ್ಞಾನಘನಃ - ಪ್ರಜ್ಞಾನಘನನು ಇತಿ - ಎಂದು ಸತ್ಯ ಸೂಚಕಂ – ಸತ್ಯ
ವನ್ನು ಸೂಚಿಸುವ ಆತ್ಮಲಕ್ಷಣಂ = ಆತ್ಮಸ್ವರೂಪವನ್ನು ಅನೂದ್ಯ - ಅನುವಾದ
ಮಾಡಿಕೊಂಡು ಔಪಾಧಿಕಸ್ಯ ಏವ ಉಪಾಧಿಸಂಬಂಧವಾದ ರೂಪ ವಿನಾಶನಂ
ನಾಶವನ್ನು ಕಥಯಂತಿ - (ಶ್ರುತಿಗಳು] ತಿಳಿಸುತ್ತವೆ.
 
೫೬೦. 'ಪ್ರಜ್ಞಾನಘನನು'' ಎಂಬ ಸತ್ಯವನ್ನು ಸೂಚಿಸುವ ಆತ್ಮ
ಸ್ವರೂಪವನ್ನು ಅನುವಾದಮಾಡಿಕೊಂಡು ಉಪಾಧಿಸಂಬಂಧವಾದ ರೂಪವು
ನಾಶವಾಗುತ್ತದೆಂದು (ಶ್ರುತಿಗಳು) ಹೇಳುತ್ತವೆ.
 
[೧ ಹೇಗೆ ಉಪ್ಪಿನ ಗಟ್ಟಿಯು ಒಳಗಿಲ್ಲದೆ ಹೊರಗಿಲ್ಲದೆ ಪೂರ್ಣವಾಗಿ ಸಮರಸ
ವಾಗಿರುವುದೋ ಹಾಗೆಯೇ, ಎಲೆ ಮೈತ್ರೇಯಿ, ಈ ಆತ್ಮನು ಒಳಗಿಲ್ಲದೆ ಹೊರಗಿಲ್ಲದೆ
ಪೂರ್ಣವಾದ ಪ್ರಜ್ಞಾನಘನನಾಗಿರುವನು. (ಆತ್ಮನ ಭಿನ್ನತೆಯು) ಈ ಭೂತಗಳಿಂದ
ಉಂಟಾಗಿ ಭೂತವರ್ಗದ ಲಯದೊಂದಿಗೆ ತಾನೂ ಲಯವಾಗುತ್ತದೆ. ದೇಹೇಂದ್ರಿಯ
ಗಳಿಂದ ಮುಕ್ತಿ ಹೊಂದಿದ ಮೇಲೆ ವಿಶೇಷಜ್ಞಾನವಿರುವುದಿಲ್ಲ' (ಬೃಹದಾರಣ್ಯಕ ಉ.
೪. ೫. ೧೩); ಯಾಜ್ಞವಲ್ಯನ ಈ ವಾಕ್ಯವು ಮೈತ್ರೇಯಿಗೆ ಭ್ರಾಂತಿಯನ್ನುಂಟುಮಾಡಿ
ದಂತೆ ಕಂಡುಬರುತ್ತದೆ. ಆಗ ಯಾಜ್ಞವಲ್ಕನು ಉಪಾಧಿಗಳ ತುಂಟಾಗು
ಇದೆಯೇ ಹೊರತು ಅವಿಕ್ರಿಯನೂ ಅವಿನಾಶಿಯೂ ಆದ ಆತ್ಮನಿಗೆ ಯಾವ ಹಾನಿಯೂ
ಉಂಟಾಗುವುದಿಲ್ಲವೆ
ವೆಂದು ಹೇಳುತ್ತಾನೆ.
 
೨ ಸೂರ್ಯನು ಪ್ರತಿಬಿಂಬಿಸಿರುವ ನೀರು, ಜಪಾಕುಸುಮದ ರೂಪವನ್ನು ಪ್ರತಿ
ಬಿಂಬಿಸುವ ಸ್ಪಟಿಕ ಇವೇ ಮೊದಲಾದ ಉಪಾಧಿಗಳು ನಾಶವಾದರೆ ಸೂರ್ಯನ
ಸ್ವರೂಪವೂ ಸ್ಪಟಿಕದ ಸ್ವರೂಪವೂ ಹಾಗೆಯೇ ಉಳಿಯುತ್ತವೆ.]
 
ಅವಿನಾಶೀ ವಾ ಅರೇsಯಮಾತ್ಮತಿ ಶ್ರುತಿರಾತ್ಮನಃ ।
ಪ್ರಬ್ರವೀತ್ಯವಿನಾಶಿತ್ವಂ ವಿನಶ್ಯತ್ತು ವಿಕಾರಿಪು
 
॥ ೫೬೧ ॥
 
ಇತಿ
 
ಅರೇ ಎಲೆ, ಅಯಂ- ಈ ಆತ್ಮಾ-ಆತ್ಮನು ಅವಿನಾಶೀ ವೈ. ಅವಿನಾಶಿಯೇ
ಎಂದು ವಿಕಾರಿತು ವಿಕಾರವುಳ್ಳ [ಪದಾರ್ಥಗಳು ವಿನಶ್ಯತು - ನಾಶವಾಗು
ತಿರಲಾಗಿ ಆತ್ಮನಃ, ಆತ್ಮನಿಗೆ ಆವಿನಾಶಿತ್ವಂ ಅವಿನಾಶಿತ್ವವನ್ನು ಶ್ರುತಿಃ -ಶ್ರುತಿಯು
ಪ್ರಬ್ರ ನೀತಿ = ಹೇಳುತ್ತದೆ.