This page has been fully proofread once and needs a second look.

ಮೋಕ್ಷವಲ್ಲ, ದಂಡಸ್ಯ = ದಂಡದ, ಕಮಂಡಲೋಃ = ಕಮಂಡಲುವಿನ [ಬಿಡು-
ವಿಕೆಯು] ನ.
 
೫೫೭. ಅವಿದ್ಯೆ ಎಂಬ ಹೃದಯಗ್ರಂಥಿಯು ಕಳಚಿಹೋಗುವುದೇ
ಮೋಕ್ಷವೆನಿಸುವುದು; ಆದಕಾರಣ ದೇಹವನ್ನು ಬಿಡುವುದು ಮೋಕ್ಷವಲ್ಲ.
ದಂಡವನ್ನಾಗಲಿ ಕಮಂಡಲುವನ್ನಾಗಲಿ[^೧] ಬಿಡುವುದೂ ಮೋಕ್ಷವಲ್ಲ.
 
[^೧] ಇವೆರಡೂ ಸಂನ್ಯಾಸಿಯ ಬಾಹ್ಯ ಚಿಹ್ನೆಗಳು. ಕೇವಲ ಬಾಹ್ಯತ್ಯಾಗದಿಂದ
ಮೋಕ್ಷವು ಸಿದ್ಧಿಸುವುದಿಲ್ಲ. ಇವುಗಳು ಮನಸ್ಸಿನಲ್ಲಿಯೂ ಇರಕೂಡದು.]
 
ಕುಲ್ಯಾಯಾಮಥ ನದ್ಯಾಂ ವಾ ಶಿವಕ್ಷೇತ್ರೇಽಪಿ ಚತ್ವರೇ ।
ಪರ್ಣಂ ಪತತಿ ಚೇತ್ತೇನ ತರೋಃ ಕಿಂ ನು ಶುಭಾಶುಭಮ್ ॥ ೫೫೮ ॥
 
ಪರ್ಣಂ = ಎಲೆಯು, ಕುಲ್ಯಾಯಾಂ = ಕಾಲುವೆಯಲ್ಲಿ, ಅಥ ವಾ = ಅಥವಾ
ನದ್ಯಾಂ = ನದಿಯಲ್ಲಿ, ಶಿವಕ್ಷೇತ್ರೇ ಅಪಿ = ಶಿವಕ್ಷೇತ್ರದಲ್ಲಿ, ಚತ್ವರೇ = ಚೌಕದಲ್ಲಿ,
ಪತತಿ ಚೇತ್ = ಬಿದ್ದರೆ, ತೇನ = ಅದರಿಂದ, ತರೋಃ = ಮರಕ್ಕೆ, ಶುಭಾಶುಭಂ =
ಶುಭಾಶುಭವು, ಕಿಂ ನು = ಆಗುವುದೇನು?
 
೫೫೮. ಮರದ ಎಲೆಯು ಕಾಲುವೆಯಲ್ಲಾಗಲಿ ನದಿಯಲ್ಲಾಗಲಿ ಶಿವ
ಕ್ಷೇತ್ರದಲ್ಲಾಗಲಿ ಬೀದಿಗಳು ಸೇರುವ ಚೌಕದಲ್ಲಾಗಲಿ ಬಿದ್ದರೆ ಅದರಿಂದ
ಮರಕ್ಕೆ ಶುಭವಾಗಲಿ ಅಶುಭವಾಗಲಿ ಉಂಟಾದೀತೆ?
 
ಪತ್ರಸ್ಯ ಪುಷ್ಪಸ್ಯ ಫಲಸ್ಯ ನಾಶವದ್
ದೇಹೇಂದ್ರಿಯ-ಪ್ರಾಣ-ಧಿಯಾಂ ವಿನಾಶಃ ।
ನೈವಾತ್ಮನಃ ಸ್ವಸ್ಯ ಸದಾತ್ಮಕಸ್ಯಾ-
ನಂದಾಕೃತೇರ್ವೃಕ್ಷವದಸ್ತಿ ಚೈಷಃ ॥ ೫೫೯ ॥
 
ಪತ್ರಸ್ಯ = ಎಲೆಯ, ಪುಷ್ಪಸ್ಯ = ಹೂವಿನ, ಫಲಸ್ಯ = ಹಣ್ಣಿನ, ನಾಶವತ್ =
ನಾಶದ ಹಾಗೆ, ದೇಹ-ಇಂದ್ರಿಯ-ಪ್ರಾಣ-ಧಿಯಾಂ = ದೇಹೇಂದ್ರಿಯಪ್ರಾಣಬುದ್ಧಿ-
ಗಳ, ವಿನಾಶಃ = ನಾಶವು, ಸದಾತ್ಮಕಸ್ಯ = ಸತ್ಸ್ವರೂಪನಾಗಿರುವ, ಆನಂದಾಕೃತೇಃ =
ಆನಂದಸ್ವರೂಪನಾದ, ಸ್ವಸ್ಯ ಆತ್ಮನಃ = ಆತ್ಮನಾದ ತನಗೆ, ನ ಏವ = ಇಲ್ಲವು; ಏಷಃ=
ಇವನು, ವೃಕ್ಷವತ್ = ಮರದ ಹಾಗೆ, ಆಸ್ತಿ = ಇರುತ್ತಾನೆ.
 
೫೫೯. ಮರದ ಎಲೆ ಹೂವು ಅಥವಾ ಹಣ್ಣು ನಾಶವಾಗುವ ಹಾಗೆ
ದೇಹೇಂದ್ರಿಯ-ಪ್ರಾಣ-ಬುದ್ಧಿಗಳೂ ನಾಶವಾಗುವುವು. ಇದರಿಂದ ಸತ್ಸ್ವ-