This page has not been fully proofread.

ವಿವೇಕಚೂಡಾಮಣಿ
 
[೫೫೧
 
ಕೆಳಗಿರುವ ಅಚ್ಚಿನಂತೆ ಸಿದ್ಧನು ಸಂಕಲ್ಪ ವಿಕಲ್ಪಗಳಿಲ್ಲದೆ ಸಾಕ್ಷಿಯ ಹಾಗೆ
ಸಂಸಾರದಲ್ಲಿ ಸುಮ್ಮನಿರುತ್ತಾನೆ.
 
೨೭೪
 
[೧ ಗಡಿಗೆಯನ್ನು ಮಾಡುವ ಚಕ್ರವು ತಿರುಗುತ್ತಿದ್ದರೂ ಅದರ ಕೆಳಗಿರುವ ಆಧಾರ
ವಾದ ಅಚ್ಚು ಅಚಲವಾಗಿರುತ್ತದೆ.
 
ನೈವೇಂದ್ರಿಯಾಣಿ ವಿಷಯೇಷು ನಿಯುಂಕ್ತ ಏಷ
ನೈವಾಪಯುಂಕ್ತ ಉಪದರ್ಶನ-ಲಕ್ಷಣಸ್ಥಃ ।
ನೈವಕ್ರಿಯಾಫಲಮಪೀಷದವೇಕತೇ ಸ
 
ಸ್ವಾನಂದ-ಸಾಂದ್ರರಸಪಾನ.ಸುಮತ್ತ-ಚಿತ್ರಃ ॥ ೫೫೧ ॥
 
ಉಪದರ್ಶನ ಲಕ್ಷಣಸ್ಥಃ - ಸಾಕ್ಷಿರೂಪನಾದ ಏಷಃ = ಇವನು ಇಂದ್ರಿ,
ಯಾಣಿ-ಇಂದ್ರಿಯಗಳನ್ನು ವಿಷಯೇಷು-ವಿಷಯಗಳಲ್ಲಿ ನ ಏವ ನಿಯುಂ
ನಿಯೋಜಿಸುವುದೇ ಇಲ್ಲ,
ನ ಏವ ಅಪಯುಂಕೇ - ಹಿಂತೆಗೆಯುವುದೂ ಇಲ್ಲ,
ಕ್ರಿಯಾ ಫಲ೦=ಕರ್ಮಫಲವನ್ನು ಈ ಷತ್ ಅಪಿ ಸ್ವಲ್ಪವೂ ನ ಏವ ಅನೇಕತೇ=
ಗಮನಿಸುವುದೇ ಇಲ್ಲ; ಸಃ = ಅವನು ಸ್ವಾನಂದ. ಸಾಂದ್ರರಸಪಾನ- ಸುಮತ್ತೆ.ಚಿತ್ರ 9
ಸ್ವಾತ್ಮಾನಂದದ ಸಾಂದ್ರರಸಪಾನದಿಂದ ಮತ್ತವಾದ ಚಿತ್ರವುಳ್ಳವನಾಗಿರುತ್ತಾನೆ.
 
೫೫೧. ಬ್ರಹ್ಮಜ್ಞಾನಿಯು ಇಂದ್ರಿಯಗಳನ್ನು ವಿಷಯಗಳಲ್ಲಿ ನಿಯೋಜಿಸು
ವುದೂ ಇಲ್ಲ, ಅವುಗಳಿಂದ ಹಿಂತೆಗೆಯುವುದೂ ಇಲ್ಲ; ಸಾಕ್ಷಿರೂಪದಿಂದ
ಅವಿಕಾರಿಯಾಗಿರುತ್ತಾನೆ. ಕರ್ಮಫಲವನ್ನು ಸ್ವಲ್ಪವಾದರೂ ಗಮನಿಸುವುದೇ
ಇಲ್ಲ. ಅವನು ಸ್ವಾತ್ಮಾನಂದದ ಸಾಂದ್ರರಸಪಾನದಿಂದ ಮತ್ತನಾಗಿರುತ್ತಾನೆ.
 
ಲಕ್ಷಾಲಕ್ಷ್ಯಗತಿಂ ತ್ಯಾ ಯತೇವಲಾತ್ಮನಾ ।
ಶಿವ ಏವ ಸ್ವಯಂ ಸಾಕ್ಷಾದಯಂ ಬ್ರಹ್ಮವಿದುತ್ತಮಃ ॥ ೫೫೨ ।
 
ನಿ
 
ಯಃ = ಯಾವನು ಲಕ್ಷ. ಅಲಕ್ಷ್ಯ-ಗತಿc=ಲಕ್ಷ ಅಲಕ್ಷ ಎಂಬ ಭಾವನೆ
ಯನ್ನು ತ್ಯಾ ಬಿಟ್ಟು ಕೇವಲ ಆತ್ಮನಾ- ಕೇವಲ- ಆತ್ಮಸ್ವರೂಪದಿಂದ ತಿಷ್ಯತ್-
ಇರುತ್ತಾನೆಯೋ ಅಯಂ = ಇವನು ಸ್ವಯಂ - ತಾನೇ ಶಿವಃ ಏವ = ಸಾಕ್ಷಾತ
ಶಿವನೇ, ಬ್ರಹ್ಮವಿತ್ಉತ್ತಮಃ – ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನು.
 
53
 
೫೫೨, ಲಕ್ಷ, ಅಲಕ್ಷ" ಎಂಬ ಭಾವನೆಗಳನ್ನು ಬಿಟ್ಟು ಕೇವಲಾತ್ಮ
ರೂಪದಿಂದಲೇ ಇರುತ್ತಿರುವ ಇವನು ಸಾಕ್ಷಾತ್ ಶಿವನ ಬ್ರಹ್ಮಜ್ಞಾನಿ
ಗಳಲ್ಲಿ ಶ್ರೇಷ್ಠನೂ ಆಗಿರುವನು.
 
[೧ ಇದು ಧ್ಯಾನಕ್ಕೆ ಯೋಗ್ಯವಾದುದು, ಯೋಗ್ಯವಲ್ಲ ಎಂಬ ಭಾವನೆಗಳು.]