This page has not been fully proofread.

೫೫೦]
 
ವಿವೇಕಚೂಡಾಮಣಿ
 
೨೭೩
 
೫೪೮. ಆದರೆ ಈ ಮುಕ್ತನ ದೇಹವು (ಬಿಡಲ್ಪಟ್ಟ) ಹಾವಿನ ಪೊರೆ
ಯಂತೆ ಹೇಗೋ ಪ್ರಾಣವಾಯುವಿನಿಂದ ಇಲ್ಲಿ ಅಲ್ಲಿ ಚಲಿಸಲ್ಪಡುತ್ತ ಇರು
ಇದೆ.
 
[ಹೇಗೆ ಪ್ರಾಣರಹಿತವಾದ ಹಾವಿನ ಪೊರೆಯು ಹುತ್ತದಲ್ಲಿ ಬಿಡಲ್ಪಟ್ಟು ಬಿದ್ದಿರು
ಇದೆಯೊ ಹಾಗೆಯೇ ಈ ಶರೀರವು ಬಿದ್ದಿರುತ್ತದೆ. ತದಥಾಹಿನಿಲ ನೀ
ವಕೇ ಮೃತಾ ಪ್ರತ್ಯ ಸ್ತಾ ಶಯಾತ, ಏವಮೇವೇದಂ ಶರೀರಂ ಶೇತೇ (ಬೃಹ
ದಾರಣ್ಯಕ ಉ. ೪. ೪. ೭). ]
 
ಪ್ರೋತಸಾ ನೀಯತೇ ದಾರು ಯಥಾ ನಿಮ್ಮೋನ್ನತ-ಸ್ಥಲಮ್ ।
ದೈವೇನ ನೀಯತೇ ದೇಹೋ ಯಥಾಕಾಲೋಪಭುಕ್ತಿಮು ॥ ೫೪೯ ॥
 
ಯಥಾ - ಹೇಗೆ ದಾರು - ಮರದ ತುಂಡು ಸ್ರೋತಸಾ - ಪ್ರವಾಹದಿಂದ
ನಿಮ್ಮ, ಉನ್ನತ ಸ್ಥಲ ಹಳ್ಳತಿಟ್ಟುಗಳಿಗೆ ನೀಯತೇ = ಒಯ್ಯಲ್ಪಡುತ್ತದೆಯೊ
[ಹಾಗೆಯೇ] ದೇಹಃ- ದೇಹವು ಯಥಾಕಾಲ. ಉಪಭುಕ್ತಿತು ಕಾಲೋಚಿತವಾದ
ಭೋಗಗಳ ಕಡೆಗೆ ದೈವೇನ - ಪ್ರಾರಬ್ಧ ಕರ್ಮದಿಂದ ನೀಯತೇ,
 
೫೪೯ ಹೇಗೆ ನೀರಿನ ಪ್ರವಾಹವು ಮರದ ತುಂಡನ್ನು ಹಳ್ಳತಿಟ್ಟುಗಳಿಗೆ
ಒಯ್ಯುತ್ತದೆಯೋ ಹಾಗೆಯೇ ಪ್ರಾರಬ್ಧ ಕರ್ಮವು ದೇಹವನ್ನು ಕಾಲೋಚಿತ
ವಾದ ಸುಖದುಃಖಾನುಭವದ ಕಡೆಗೆ ಒಯ್ಯುತ್ತದೆ.
 
ಪ್ರಾರಬ್ಧ ಕರ್ಮ-ಪರಿಕಲ್ಪಿತ ವಾಸನಾಭಿಃ
ಸಂಸಾರಿವಚ್ಚರತಿ ಭುಕ್ತಿಷು ಮುಕ್ತದೇಹಃ ।
ಸಿದ್ಧಃ ಸ್ವಯಂ ವಸತಿ ಸಾವದ ತೊಂ
 
ಚಕ್ರಸ್ಯ ಮೂಲಮಿವ ಕಲ್ಪ-ವಿಕಲ್ಪ-ಶೂನ್ಯಃ ॥ ೫೫೦ ।
 
ಮುಕ್ತ ದೇಹಃ ಬ್ರಹ್ಮಜ್ಞಾನಿಯು ಪ್ರಾರಬ್ಧ ಕರ್ಮ- ಪರಿಕಲ್ಪಿತ.ವಾಸ-
ನಾಭಿಃ - ಪ್ರಾರಬ್ಧ ಕರ್ಮಗಳಿಂದ ಕಲ್ಪಿತವಾಗಿರುವ ಸಂಸ್ಕಾರಗಳಿಂದ ಭುಕ್ತಿಮು
ಭೋಗಗಳಲ್ಲಿ ಸಂಸಾರಿವತ್ = ಸಂಸಾರಿಯಂತೆ ಚರತಿ - ಸಂಚರಿಸುತ್ತಾನೆ; ಸಿದ್ಧತೆ
[ಆ] ಸಿದ್ಧನು ಚಕ್ರಸ್ಯ - ಚಕ್ರದ ಮೂಲವ್ ಇವ ಅಚ್ಚಿನಂತೆ ಕಲ್ಪ ವಿಕಲ್ಪ.
ಶೂನ್ಯಃ = ಸಂಕಲ್ಪ-ವಿಕಲ್ಪಗಳಿಲ್ಲದೆ ಸಾಕ್ಷಿವತ್ - ಸಾಕ್ಷಿಯ ಹಾಗೆ ಅತ್ರ - ಇಲ್ಲಿ
ಸ್ವಯಂ = ತಾನು ತೂಂ ವಸತಿ = ಸುಮ್ಮನಿರುತ್ತಾನೆ.
 
೫೫೦. ಬ್ರಹ್ಮಜ್ಞಾನಿಯು ಪ್ರಾರಬ್ಧ ಕರ್ಮಗಳಿಂದ ಕಲ್ಪಿತವಾಗಿರುವ
ಸಂಸ್ಕಾರಗಳಿಂದ ಸಂಸಾರಿಯಂತೆ ಭೋಗಗಳಲ್ಲಿ ಸಂಚರಿಸುತ್ತಾನೆ. ಚಕ್ರದ