2023-03-19 09:55:46 by Vidyadhar Bhat
This page has been fully proofread once and needs a second look.
೫೪೩. ಇವನು ಕೆಲಸ ಮಾಡುತ್ತಿದ್ದರೂ ಮಾಡುತ್ತಿಲ್ಲ;[^೧] ಕರ್ಮಫಲ-
ವನ್ನನುಭವಿಸುತ್ತಿದ್ದರೂ ಅನುಭವಿಸುತ್ತಿಲ್ಲ;[^೨] ಶರೀರವುಳ್ಳವನಾಗಿದ್ದರೂ ಶರೀರ-
ವಿಲ್ಲದವನು;[^೩] ಪರಿಚ್ಛಿನ್ನನಾಗಿದ್ದರೂ ಸರ್ವವ್ಯಾಪಿಯು.
[^೧] ಕರ್ತತ್ವವಿಲ್ಲದಿರುವುದರಿಂದ.
[^೨] ಭೋಕ್ತಿತ್ವವಿಲ್ಲದಿರುವುದರಿಂದ.
[^೩] ಶರೀರದಲ್ಲಿ ಆತ್ಮಭಾವವಿಲ್ಲದಿರುವುದರಿಂದ.]
ಅಶರೀರಂ ಸದಾ ಸಂತಮಿಮಂ ಬ್ರಹ್ಮವಿದಂ ಕ್ವಚಿತ್ ।
ಪ್ರಿಯಾಪ್ರಿಯೇ ನ ಸ್ಪೃಶತಸ್ತಥೈವ ಚ ಶುಭಾಶುಭೇ ॥ ೫೪೪ ॥
ಸದಾ = ಯಾವಾಗಲೂ, ಅಶರೀರಂ ಸಂತಂ = ಶರೀರಾಭಿಮಾನವಿಲ್ಲದಿರುವ,
ಇಮಂ ಬ್ರಹ್ಮವಿದಂ = ಈ ಬ್ರಹ್ಮಜ್ಞಾನಿಯನ್ನು, ಪ್ರಿಯಾಪ್ರಿಯೇ = ಸುಖದುಃಖಗಳಾ-
ಗಲಿ, ತಥಾ ಏವ ಚ = ಹಾಗೆಯೇ, ಶುಭಾಶುಭೇ = ಪುಣ್ಯಪಾಪಗಳಾಗಲಿ, ಕ್ವಚಿತ್ =
ಎಂದಿಗೂ, ನ ಸ್ಪೃಶತಃ = ಸೋಂಕುವುದಿಲ್ಲ.
೫೪೪. ಯಾವಾಗಲೂ ಶರೀರಾಭಿಮಾನವಿಲ್ಲದೆ ಇರುತ್ತಿರುವ ಈ ಬ್ರಹ್ಮ-
ಜ್ಞಾನಿಯನ್ನು ಸುಖದುಃಖಗಳಾಗಲಿ ಪುಣ್ಯಪಾಪಗಳಾಗಲಿ ಎಂದಿಗೂ
ಸೋಂಕುವುದಿಲ್ಲ.
[ಛಾಂದೋಗ್ಯಪನಿಷತ್ತಿನ ಅಶರೀರಂ ವಾವ ಸಂತಂ ಪ್ರಿಯಾಪ್ರಿಯೇ ನ
ಸ್ಪೃಶತಃ (೮. ೧೨. ೧) ಎಂಬುದರ ಭಾವ.]
ಸ್ಥೂಲಾದಿ-ಸಂಬಂಧವತೋಽಭಿಮಾನಿನಃ
ಸುಖಂ ಚ ದುಃಖಂ ಚ ಶುಭಾಶುಭೇ ಚ ।
ವಿಧ್ವಸ್ತಬಂಧಸ್ಯ ಸದಾತ್ಮನೋ ಮುನೇಃ
ಕುತಃ ಶುಭಂ ವಾಽಪ್ಯಶುಭಂ ಫಲಂ ವಾ ॥ ೫೪೫ ॥
ಸ್ಥೂಲಾದಿ-ಸಂಬಂಧವತಃ = ಸ್ಥೂಲದೇಹವೇ ಮೊದಲಾದುವುಗಳೊಂದಿಗೆ
ಸಂಬಂಧವುಳ್ಳ, ಅಭಿಮಾನಿನಃ = ಅಭಿಮಾನಿಗೆ, ಸುಖಂ ಚ ದುಃಖಂ ಚ = ಸುಖದುಃಖ-
ಗಳೂ, ಶುಭಾಶುಭೇ ಚ = ಶುಭಾಶುಭಗಳೂ [ಉಂಟಾಗುತ್ತವೆ]; ವಿಧ್ವಸ್ತ-ಬಂಧಸ್ಯ =
ಬಂಧವನ್ನು ಧ್ವಂಸಮಾಡಿಕೊಂಡ, ಸದಾತ್ಮನಃ = ಸತ್ಸ್ವರೂಪನಾದ, ಮುನೇಃ =
ಮುನಿಗೆ, ಶುಭಂ ವಾ ಅಪಿ = ಶುಭವಾಗಲಿ, ಅಶುಭಂ = ಅಶುಭವಾಗಲಿ, ಫಲಂ ವಾ =
ಫಲವಾಗಲಿ, ಕುತಃ = ಎಲ್ಲಿಯದು?
೫೪೫. ಸ್ಥೂಲದೇಹವೇ ಮೊದಲಾದುವುಗಳೊಂದಿಗೆ ಸಂಬಂಧವನ್ನು
ಪಡೆದಿರುವ ಅಭಿಮಾನಿಗೆ ಸುಖದುಃಖಗಳೂ ಶುಭಾಶುಭಗಳೂ ಉಂಟಾಗು-