This page has not been fully proofread.

೨೭೦
 
ವಿವೇಕಚೂಡಾಮಣಿ
 
[೫೪೨
 
[ಜಗತ್ತಿನಲ್ಲಿ ಬ್ರಹ್ಮಜ್ಞಾನಿಯನ್ನು ಜನರು ನಾನಾ ಬಗೆಯಿಂದ ನೋಡುತ್ತಾರೆ, ಅವನ
ವಿಷಯದಲ್ಲಿ ನಾನಾ ವಿಧವಾದ ಅಭಿಪ್ರಾಯವನ್ನು ಕೊಡುತ್ತಾರೆ.
ಅವರು ಏನೇ
ಹೇಳಲಿ, ಏನೇ ಮಾಡಲಿ ಬ್ರಹ್ಮವಿದನು ಉದಾಸೀನನಾಗಿಯೇ ಇರುತ್ತಾನೆ.
೧ ಹೆಬ್ಬಾವು ಹೆಚ್ಚು ಓಡಾಡದೆ ತನ್ನ ಸಮೀಪಕ್ಕೆ ಬಂದ ಆಹಾರವನ್ನೇ ತೆಗೆದು
ಕೊಳ್ಳುತ್ತದೆ.]
 
ನಿರ್ಧನೋsಪಿ ಸದಾ ತು
ನಿತ್ಯತೃಪ್ರೋsಭುಂಜಾನೋ
 
[ಬ್ರಹ್ಮಜ್ಞಾನಿಯು] ನಿರ್ಧನಃ ಅಪಿ = ಧನರಹಿತನಾದರೂ ಸದಾ - ಯಾವಾ
ಗಲೂ ತುಷ್ಟಃ - ಸಂತುಷ್ಟನಾಗಿಯೂ ಅಸಹಾಯಃ ಅಪಿ. ಸಹಾಯವಿಲ್ಲದವ
ನಾದರೂ ಮಹಾಬಲಃ - ಮಹಾಬಲನಾಗಿಯೂ ಅಭುಂಜಾನಃ ಅಪಿ = ವಿಷಯ
ಭೋಗಗಳನ್ನು ಅನುಭವಿಸದಿದ್ದರೂ ನಿತ್ಯತೃಪ್ತಃ - ನಿತ್ಯತೃಪ್ತನಾಗಿಯೂ ಅಸಮಃ
ಅಪಿ = ಅಸದೃಶನಾಗಿದ್ದರೂ ಸಮದರ್ಶನಃ = ಸಮದೃಷ್ಟಿಯುಳ್ಳವನಾಗಿಯೂ [ಇರು
ತಾನೆ].
 
ಸಹಾಯೋ ಮಹಾಬಲಃ ।
ಸಮಃ ಸಮದರ್ಶನಃ ॥ ೫೪೨ ॥
 
೫೪೨, (ಬ್ರಹ್ಮಜ್ಞಾನಿಯು) ಧನರಹಿತನಾದರೂ ಸದಾ ಸಂತುಷ್ಟನಾಗಿರು
ತಾನೆ;" ಸಹಾಯವಿಲ್ಲದವನಾದರೂ ಮಹಾಬಲನಾಗಿರುತ್ತಾನೆ; ವಿಷಯ
ಭೋಗಗಳನ್ನು ಅನುಭವಿಸದಿದ್ದರೂ ನಿತ್ಯತೃಪ್ತನಾಗಿರುತ್ತಾನೆ; ಅಸದೃಶ
ನಾಗಿದ್ದರೂ ಸಮದೃಷ್ಟಿಯುಳ್ಳವನಾಗಿರುತ್ತಾನೆ.
[೧ ಆತ್ಮಜ್ಞಾನವೆಂಬ ಸಂಪತ್ತು ಇರುವುದರಿಂದ.
 
೨ ವಿವೇಕ ಧೈರ್ಯ ಮೊದಲಾದುವುಗಳಿಂದ ಸಂಪನ್ನನಾಗಿರುತ್ತಾನೆ.
 
2
 
ಆತ್ಮಾನಂದವನ್ನು ಅನುಭವಿಸುತ್ತ ಇರುತ್ತಾನೆ.
 

 
'ಸರ್ವತ್ರ ಶತ್ರುಗಳನ್ನಾಗಲಿ ಮಿತ್ರರನ್ನಾಗಲಿ ನೋಡುವುದಿಲ್ಲ.
 
ಅಪಿ ಕುರ್ವನ್ನ ಕುರ್ವಾಣಕ್ಕಾಭೋಕ್ತಾ ಫಲಭೋಗ್ಯಪಿ ।
ಶರೀರ್ಯ ಶರೀರ್ಯೆಷ ಪರಿಚ್ಛಿsಪಿ ಸರ್ವಗ ॥ ೫೪೩ ॥
 
ಏಷಃ ಇವನು ಕುರ್ವನ್ ಅಪಿ ಕೆಲಸ ಮಾಡುತ್ತಿದ್ದರೂ ಆಕುರ್ವಾಣಃ
ಮಾಡುತ್ತಿಲ್ಲ, ಫಲಭೋಗೀ ಅಪಿ = ಕರ್ಮಫಲವನ್ನು ಅನುಭವಿಸುತ್ತಿದ್ದರೂ
ಅಭೋಕ್ತಾ ಚ = ಅನುಭವಿಸುತ್ತಿಲ್ಲ, ಶರೀರೀ ಅಪಿ= ಶರೀರವುಳ್ಳವನಾಗಿದ್ದರೂ
ಅಶರೀರೀ-ಶರೀರವಿಲ್ಲದವನು, ಪರಿಚ್ಛಿನ್ನಃ ಅಪಿ- ಪರಿಚ್ಛಿನ್ನವಾಗಿದ್ದರೂ ಸರ್ವಗಃ
ಸರ್ವವ್ಯಾಪಿಯು.