This page has not been fully proofread.

ವಿವೇಕಚೂಡಾಮಣಿ
 
ಸ್ವ, ಆತ್ಮನಾ ಏವ - ತನ್ನ ಆತ್ಮನಿಂದಲೇ ಸದಾ - ಯಾವಾಗಲೂ ತುಷ್ಟಃ =
ಸಂತುಷ್ಟನಾದ ಸ್ವಯಂ ತಾನೇ ಸರ್ವಾತ್ಮನಾ ಸ್ಥಿತಃಸರ್ವಾತ್ಮಭಾವದಿಂದ ಇರುವ
ಏಕಚರಃ = ಒಬ್ಬನೇ ಆದ ಮುನಿಃ = ಮುನಿಯು ಕಾಮ. ಅ = ಯಥೇಚ್ಛಾ
ಅನ್ನಶಾಲಿಯಾಗಿ ಕಾಮರೂಪೀ - ಯಥೇಚ್ಛಾ-ರೂಪಶಾಲಿಯಾಗಿ ಸಂಶ್ಚರತಿ -
 
ಸಂಚರಿಸುತ್ತಾನೆ.
 
೫೪೦.
 
ಸ್ವಾತ್ಮನಿಂದಲೇ ಸದಾ ಸಂತುಷ್ಟನಾದ, ತಾನೇ ಸರ್ವಾತ್ಮನಾದ
ಮತ್ತು ಏಕಚಾರಿಯಾದ ಮುನಿಯು ಯಥೇಚ್ಛವಾಗಿ ಅನ್ನಶಾಲಿಯೂ ರೂಪ
ಶಾಲಿಯೂ ಆಗಿ ಸಂಚರಿಸುತ್ತಾನೆ.
 
[೧ ಬ್ರಹ್ಮಜ್ಞಾನಿಯು ತಾನೇ ಎಲ್ಲವೂ ಆಗಿರುವುದರಿಂದ ಬ್ರಹ್ಮಸ್ವರೂಪದಿಂದ
ಎಲ್ಲರ ರೂಪವನ್ನೂ ಅನ್ನವನ್ನೂ ಪಡೆದುಕೊಳ್ಳುತ್ತಾನೆ ಎಂದರ್ಥ. "ಗುವಲ್ಲಿಯ
(ತೈತ್ತಿರೀಯ ಉ.) ಹತ್ತನೆಯ ಅನುವಾಕವನ್ನು ನೋಡಿ.
 
೫೪೧]
 
೨೬೯
 
ಕೈಚಿಟ್ಯೂಡೋ ವಿದ್ವಾನ್ ಕ್ವಚಿದಪಿ ಮಹಾರಾಜ-ವಿಭವಃ
ಕ್ವಚಿದ್ಧಾಂತಃ ಸೌಮ್ಯಃ ಕ್ವಚಿದಜಗರಾಚಾರ-ಕಲಿತಃ ।
ಕ್ವಚಿತ್ರಾತ್ರೀಭೂತಃ ಕ್ವಚಿದವಮತಃ ಕ್ಯಾಪ್ಯವಿದಿತ
ಶರವಂ ಪ್ರಾಜ್ಞಃ ಸತತ-ಪರಮಾನಂದ-ಸುಖಿತಃ ॥ ೫೪೧ ॥
 
=
 
ಸತತ-ಪರಮಾನಂದ-ಸುಖಿತಃ = ನಿರಂತರವೂ ಪರಮಾನಂದ- ಸುಖವುಳ್ಳ
ಪ್ರಾಜ್ಞಃ- ಬ್ರಹ್ಮವಿದನು ಕ್ವಚಿತ್ – ಕೆಲವು ವೇಳೆ ಮೂಢಃ = ಮೂಢನಂತೆ, ಕ್ವಚಿತ್
ಅಪಿ ವಿದ್ವಾನ್ ವಿದ್ವಾಂಸನಂತೆ, ಮಹಾರಾಜ ವಿಭವಃ = ಮಹಾರಾಜ-ವೈಭವದಿಂದ
ಮೆರೆಯುವಂತೆ, ಕ್ವಚಿತ್ ಭ್ರಾಂತಃ = ಭ್ರಾಂತನಂತೆ, ಕ್ವಚಿತ್ ಸೌಮ್ಯಃ = ಸೌಮ್ಯ
ನಂತೆ, ಅಜಗರ, ಆಚಾರ ಕಲಿತಃ = ಅಜಗರವೃತ್ತಿಯಿಂದ ಕೂಡಿದವನಾಗಿ, ಕ್ವಚಿತ್
ಪಾತ್ರೀಭೂತಃಸತ್ಪಾತ್ರನಾಗಿ, ಕ್ವಚಿತ್ ಅವನತಃ ಅವಮಾನಿತನಾಗಿ, ಕೈ ಅಪಿ
ಎಲ್ಲಿಯೋ ಅವಿದಿತಃ = ತಿಳಿಯಲ್ಪಡದವನಾಗಿ-ಏವಂ- ಹೀಗೆ ಚರತಿ = ಸಂಚರಿಸು
ತಾನೆ.
 
೫೪೧. ಕೆಲವು ವೇಳೆ ಮೂಢನಂತೆ, ಕೆಲವೊಮ್ಮೆ ವಿದ್ವಾಂಸನಂತೆ,
ಮಹಾರಾಜ ವೈಭವದಿಂದ ಮೆರೆಯುವಂತೆ, ಇನ್ನೊಮ್ಮೆ ಭ್ರಾಂತನಂತೆ,
ಮತ್ತೊಂದು ಸಲ ಶಾಂತನಂತೆ, ಕೆಲವು ಸಮಯ ಅಜಗರವೃತ್ತಿಯನ್ನವಲಂಬಿ
ಸಿದವನಾಗಿ, ಮತ್ತೊಮ್ಮೆ ಸತ್ಪಾತ್ರನಾಗಿ, ಕೆಲವು ಸಲ ಅವಮಾನಿತನಾಗಿ,
ಎಲ್ಲಿಯೊ ಯಾರಿಗೂ ತಿಳಿಯದಂತೆ ಇರುತ್ತ, ನಿರಂತರವೂ ಪರಮಾನಂದ
ಸುಖವುಳ್ಳ ಬ್ರಹ್ಮವಿದನು ಹೀಗೆ ಸಂಚರಿಸುತ್ತಾನೆ.