This page has not been fully proofread.

೫೩೭]
 
ವಿವೇಕಚೂಡಾಮಣಿ
 
ಕ್ಷುಧಾಂ ದೇಹವ್ಯಥಾಂ ತ್ಯಾಯಕ್ತ್ವಾ ಬಾಲಃ ಕ್ರೀಡತಿ ವಸ್ತುನಿ ।

ತಥೈವ ವಿದ್ವಾನ್ ರಮತೇ ನಿರ್ಮಮೋ ನಿರಹಂ ಸುಖೀ ॥ ೫೩೬ ॥
 
೨೬೭
 

 
ಬಾಲಃ- = ಬಾಲಕನು, ಕ್ಷುಧಾಂ- = ಹಸಿವನ್ನೂ, ದೇಹವ್ಯಥಾಂ = ದೇಹಾಯಾಸದ ವ್ಯಥೆ
-
ಯನ್ನೂ ತ್ಯಾ, ತ್ಯಕ್ತ್ವಾ= ಬಿಟ್ಟು, ವಸ್ತುನಿ= = [ಆಟದ] ವಸ್ತುವಿನಲ್ಲಿ, ಕ್ರೀಡತಿ = ಆಡುತ್ತಾನೆ,

ತಥಾ ಏನ -ವ = ಹಾಗೆಯೇ, ವಿದ್ವಾನ್ -= ಬ್ರಹ್ಮಜ್ಞಾನಿಯು, ನಿರ್ಮಮಃ -= ಮಮಕಾರ
-
ವಿಲ್ಲದೆ, ನಿರಹಂ- = ಅಹಂಕಾರವಿಲ್ಲದೆ, ಸುಖ-ಖೀ = ಸುಖಿಯಾಗಿ, ರಮತೇ- = ರಮಿಸುತ್ತಾನೆ.
 

 
೫೩೬. ಬಾಲಕನು ಹಸಿವನ್ನೂ ದೇಹಾಯಾಸದ ವ್ಯಥೆಯನ್ನೂ ಮರೆತು

ತನ್ನ ಆಟದ ವಸ್ತುವಿನೊಂದಿಗೆ ಆಡುವಂತೆ ಬ್ರಹ್ಮಜ್ಞಾನಿಯು ಅಹಂಕಾರ

ಮಮಕಾರಗಳಿಲ್ಲದೆ ಸುಖಿಯಾಗಿ (ತನ್ನ ಆತ್ಮನಲ್ಲಿ) ರಮಿಸುತ್ತಾನೆ.
 

 
ಚಿಂತಾಶೂನ್ಯಮದೈನ್ಯಭೈಕ್ಷಮಶನಂ ಪಾನಂ ಸರಿದ್ವಾರಿಷು

ಸ್ವಾತಂತ್ರ್ಯೇಣ ನಿರಂಕುಶಾ ಸ್ಥಿತಿರಭೀರ್ನಿದ್ರಾ ಸ್ಶ್ಮಶಾನೇ ವನೇ ।

ವಸ್ತ್ರಂ ಕ್ಷಾಲನ-ಶೋಷಣಾದಿ-ರಹಿತಂ ದಿಗ್ಯಾವಾಸ್ತು ಶಯ್ಯಾ ಮಹೀ

ಸಂಚಾರೋ ನಿಗಮಾಂತ-ವೀಥಿಷು ವಿದಾಂ ಕ್ರೀಡಾ ಪರೇ ಬ್ರಹ್ಮಣಿ
 
॥ ೫೩೭
 

 
ವಿದಾಂ -= ಬ್ರಹ್ಮಜ್ಞಾನಿಗಳಿಗೆ, ಚಿಂತಾಶೂನ್ಯಂ = ಚಿಂತಾರಹಿತವಾದ, ಅದೈನ್ಯ
ಬೈಕಂ –
-
ಭೈಕ್ಷಂ =
ದೀನತ್ವವಿಲ್ಲದ ಭಿಕ್ಷೆಯಾಗಿರುವ, ಅಶನಂ- = ಆಹಾರವು, ಸರಿತ್-ವಾರಿಸು
ಷು =
ನದಿಯ ಜಲಗಳಲ್ಲಿ, ಪಾನಂ- = ಪಾನವು, ಸ್ವಾತಂತ್ರ್ಯೇ= ಸ್ವತಂತ್ರವಾಗಿ, ನಿರಂಕುಶಾ=
=
ನಿರಂಕುಶವಾದ, ಸ್ಥಿತಿಃ = ಸ್ಥಿತಿಯು, ಸ್ಶ್ಮಶಾನೇ ವನೇ-ಸ್ = ಶ್ಮಶಾನದಲ್ಲಾಗಲಿ ಕಾಡಿನಲ್ಲಾ
ಗಲಿ
-
ಗಲಿ,
ಅಭೀಃ- = ನಿರ್ಭಯವಾದ, ನಿದ್ರಾ- = ನಿದ್ರೆ, ದಿಕ್ ವಾ- = ದಿಕ್ಕೇ ಕಾಲನ , ಕ್ಷಾಲನ-ಶೋಷ.
-
ಣಾದಿರಹಿತಂ = ಒಗೆಯುವುದು ಒಣಗಿಸುವುದು ಮೊದಲಾದುದಿಲ್ಲದ, ವಸ್ತ್ರಮ್

ಅಸ್ತು -= ವಸ್ತ್ರವಾಗಲಿ, ಮಹೀ = ಭೂಮಿಯೇ,ಯ್ಯಾ -= ಹಾಸಿಗೆ, ನಿಗಮಾಂತ.
-
ವೀಥಿಷು = ವೇದಾಂತವೆಂಬ ಬೀದಿಗಳಲ್ಲಿ, ಸಂಚಾರಃ = ಸಂಚಾರ, ಪರೇ ಬ್ರಹ್ಮಣಿ
=
ಪರಬ್ರಹ್ಮದಲ್ಲಿ, ಕ್ರೀಡಾ -= ಕ್ರೀಡೆಯು.
 

 
೫೩೭. ಬ್ರಹ್ಮಜ್ಞಾನಿಗಳು ಯಾವ ಚಿಂತೆಯಾಗಲಿ ದೈನ್ಯವಾಗಲಿ ಇಲ್ಲದೆ

ಭಿಕ್ಷೆಯಿಂದಲೇ ಊಟಮಾಡುತ್ತಾರೆ; ನದಿಯ ನೀರೇ ಅವರಿಗೆ ಪಾನವಾಗಿದೆ;

ಸ್ವತಂತ್ರವಾಗಿಯೂ
 
ನಿರಂಕುಶವಾಗಿಯೂ ಇದ್ದು, ಸ್ಮಶಾನದಲ್ಲಾಗಲಿ ಕಾಡಿ
-
ನಲ್ಲಾಗಲಿ ನಿರ್ಭಯವಾಗಿ ಮಲಗುತ್ತಾರೆ; ಅವರಿಗೆ ದಿಕ್ಕೇ ಒಗೆಯುವುದು

ಒಣಗಿಸುವುದು ಮೊದಲಾದುದಿಲ್ಲದ ವಸ್ತ್ರವಾಗಿದೆ; ನೆಲವೇ ಅವರಿಗೆ ಹಾಸಿಗೆ;

ಅವರು ವೇದಾಂತವೆಂಬ ಬೀದಿಗಳಲ್ಲಿ ಸಂಚರಿಸುತ್ತಾರೆ; ಅವರಿಗೆ ಕ್ರೀಡೆಯು

ಪರಬ್ರಹ್ಮದಲ್ಲಿಯೇ.