2023-03-19 09:41:13 by Vidyadhar Bhat
This page has been fully proofread once and needs a second look.
ಏಷ ಸ್ವಯಂಜ್ಯೋತಿರನಂತಶಕ್ತಿ-
ರಾತ್ಮಾಽಪ್ರಮೇಯಃ ಸಕಲಾನುಭೂತಿಃ ।
ಯಮೇವ ವಿಜ್ಞಾಯ ವಿಮುಕ್ತಬಂಧೋ
ಜಯತ್ಯಯಂ ಬ್ರಹ್ಮವಿದುತ್ತಮೋತ್ತಮಃ ॥ ೫೩೪ ॥
ಏಷಃ ಆತ್ಮಾ= ಈ ಆತ್ಮನು, ಸ್ವಯಂಜ್ಯೋತಿಃ = ಸ್ವಯಂಪ್ರಕಾಶನು, ಅನಂತ-
ಶಕ್ತಿಃ = ಅನಂತಶಕ್ತಿಯುಳ್ಳವನು, ಅಪ್ರಮೇಯಃ = ಅಪ್ರಮೇಯನು, ಸಕಲಾನು-
ಭೂತಿಃ = ಸರ್ವಾನುಭವಸಿದ್ದನು; ಯಮ್ ಏವ = ಯಾವನನ್ನೇ, ವಿಜ್ಞಾಯ =
ತಿಳಿದುಕೊಂಡು, ವಿಮುಕ್ತಬಂಧಃ = ಬಂಧದಿಂದ ಮುಕ್ತನಾಗಿ, ಅಯಂ = ಇವನು,
ಬ್ರಹ್ಮವಿತ್-ಉತ್ತಮೋತ್ತಮಃ = ಬ್ರಹ್ಮಜ್ಞಾನಿಗಳಲ್ಲಿ ಸರ್ವೋತ್ತಮನಾಗಿ, ಜಯತಿ =
ಸರ್ವೋತ್ಕೃಷ್ಟನಾಗಿರುತ್ತಾನೆ.
೫೩೪. ಈ ಆತ್ಮನು ಸ್ವಯಂಪ್ರಕಾಶನು, ಅನಂತಶಕ್ತಿಯುಳ್ಳವನು,
ಅಪ್ರಮೇಯನಾಗಿದ್ದರೂ ಎಲ್ಲರ ಅನುಭವಕ್ಕೂ ಗೋಚರನಾದವನು;
ಅವನನ್ನೇ ಅರಿತುಕೊಂಡು ಸಂಸಾರಬಂಧದಿಂದ ಮುಕ್ತನಾದ ಇವನು ಬ್ರಹ್ಮ-
ವಿದರಲ್ಲಿ ಸರ್ವೋತ್ತಮನಾಗಿ ಸರ್ವೋತ್ಕೃಷ್ಟನಾಗಿರುತ್ತಾನೆ.
ನ ಖಿದ್ಯತೇ ನೋ ವಿಷಯೈಃ ಪ್ರಮೋದತೇ
ನ ಸಜ್ಜತೇ ನಾಪಿ ವಿರಜ್ಯತೇ ಚ ।
ಸ್ವಸ್ಮಿನ್ಸದಾ ಕ್ರೀಡತಿ ನಂದತಿ ಸ್ವಯಂ
ನಿರಂತರಾನಂದರಸೇನ ತೃಪ್ತಃ ॥ ೫೩೫ ॥
[ಇವನು] ನ ಖಿದ್ಯತೇ = ದುಃಖಿಸುವುದಿಲ್ಲ, ವಿಷಯೈಃ = ವಿಷಯಗಳಿಂದ,
ನ ಉ ಪ್ರಮೋದತೇ = ಸಂತೋಷಪಡುವುದಿಲ್ಲ; [ಅವುಗಳಲ್ಲಿ] ನ ಸಜ್ಜತೇ = ಆಸಕ್ತ-
ನಾಗುವುದಿಲ್ಲ, ನ ಅಪಿ ನಿರಜ್ಯತೇ ಚ = ವಿರಕ್ತನಾಗುವುದೂ ಇಲ್ಲ; ನಿರಂತರ-
ಆನಂದ-ರಸೇನ = ನಿತ್ಯಾನಂದರಸದಿಂದ, ತೃಪ್ತಃ = ತೃಪ್ತನಾಗಿ, ಸದಾ = ಯಾವಾ-
ಗಲೂ, ಸ್ವಯಂ = ತಾನೇ, ಸ್ವಸ್ಮಿನ್ = ತನ್ನಲ್ಲಿಯೇ, ಕ್ರೀಡತಿ = ಕ್ರೀಡಿಸುತ್ತಾನೆ, ನಂದತಿ =
ಆನಂದಿಸುತ್ತಾನೆ.
೫೩೫. ಅವನು (ವಿಷಯ-ವಿಯೋಗದಿಂದ) ದುಃಖಿಸುವುದಿಲ್ಲ, ವಿಷಯ-
ಗಳಿಂದ ಸಂತೋಷಪಡುವುದಿಲ್ಲ; (ಸುಖ-ಸಾಧನಗಳಲ್ಲಿ) ಆಸಕ್ತನಾಗುವುದೂ
ಇಲ್ಲ, ವಿರಕ್ತನಾಗುವುದೂ ಇಲ್ಲ. ನಿತ್ಯಾನಂದರಸದಿಂದ ತೃಪ್ತನಾಗಿ ಯಾವಾ-
ಗಲೂ ತಾನೇ ತನ್ನಲ್ಲಿಯೇ ಕ್ರೀಡಿಸುತ್ತಾನೆ, ಆನಂದಪಡುತ್ತಾನೆ.