This page has not been fully proofread.

೨೬೬
 
ವಿವೇಕಚೂಡಾಮಣಿ
 
ಏಷ ಸ್ವಯಂಜ್ಯೋತಿರನಂತಶಕ್ತಿ-
ರಾತ್ಮಾಪ್ರಮೇಯಃ ಸಕಲಾನುಭೂತಿಃ ।
ಯಮೇವ ವಿಜ್ಞಾಯ ವಿಮುಕ್ತ ಬಂಧೋ
 
ಜಯತ್ಯಯಂ ಬ್ರಹ್ಮವಿದುತ್ತಮೋತ್ತಮಃ ॥ ೫೩೪ ॥
 
ಏಷಃ ಆತ್ಮಾ- ಈ ಆತ್ಮನು ಸ್ವಯಂಜ್ಯೋತಿಃ - ಸ್ವಯಂಪ್ರಕಾಶನು ಅನಂತ.
ಶಕ್ತಿಃ ಅನಂತಶಕ್ತಿಯುಳ್ಳವನು ಅಪ್ರಮೇಯಃ ಅಪ್ರಮೇಯನು ಸಕಲಾನು.
ಭೂತಿಃ = ಸರ್ವಾನುಭವಸಿದ್ದನು; ಯಮ್ ಏವ = ಯಾವನನ್ನೇ ವಿಜ್ಞಾಯ =
ತಿಳಿದುಕೊಂಡು ವಿಮುಕ್ತ ಬಂಧಃ – ಬಂಧದಿಂದ ಮುಕ್ತನಾಗಿ ಅಯಂ - ಇವನು
ಬ್ರಹ್ಮವಿತ್,ಉತ್ತಮೋತ್ತಮಃ- ಬ್ರಹ್ಮಜ್ಞಾನಿಗಳಲ್ಲಿ ಸರ್ವೋತ್ತಮನಾಗಿ ಜಯತಿ-
ಸರ್ವೋತ್ಕೃಷ್ಟನಾಗಿರುತ್ತಾನೆ.
 
೫೩೪. ಈ ಆತ್ಮನು ಸ್ವಯಂಪ್ರಕಾಶನು, ಅನಂತಶಕ್ತಿಯುಳ್ಳವನು,
ಅಪ್ರಮೇಯನಾಗಿದ್ದರೂ ಎಲ್ಲರ ಅನುಭವಕ್ಕೂ ಗೋಚರನಾದವನು;
 
ಅವನನ್ನೇ ಅರಿತುಕೊಂಡು ಸಂಸಾರಬಂಧದಿಂದ ಮುಕ್ತನಾದ ಇವನು ಬ್ರಹ್ಮ
ವಿದರಲ್ಲಿ ಸರ್ವೋತ್ತಮನಾಗಿ ಸರ್ವೋತ್ಕೃಷ್ಟನಾಗಿರುತ್ತಾನೆ.
 
ನ ಖಿದ್ಯತೇ ನೋ ವಿಷಯ ಪ್ರಮೋದತೇ
ನ ಸಜ್ಜತೇ ನಾಪಿ ವಿರಜತೇ ಚ ।
ಸ್ವಸ್ಮಿನ್ಸದಾ ಕ್ರೀಡತಿ ನಂದತಿ ಸ್ವಯಂ
ನಿರಂತರಾನಂದರಸೇನ ತೃಪ್ತಃ
 
॥ ೫೩೫ ।
 
[ಇವನು] ನ ಖಿದ್ಯತೇ .. ದುಃಖಿಸುವುದಿಲ್ಲ, ವಿಷಯಃ = ವಿಷಯಗಳಿಂದ
ನ ಉ ಪ್ರಮೋದತೇ - ಸಂತೋಷಪಡುವುದಿಲ್ಲ; [ಅವುಗಳಲ್ಲಿ] ನ ಸಜ್ಜತೇ ಆಸಕ್ತ
ನಾಗುವುದಿಲ್ಲ, ನ ಅಪಿ ನಿರಜ್ಯತೇ ಚ , ವಿರಕ್ತನಾಗುವುದೂ ಇಲ್ಲ; ನಿರಂತರ.
ಆನಂದ ರಸೇನ - ನಿತ್ಯಾನಂದರಸದಿಂದ ತೃಪ್ತಃ – ತೃಪ್ತನಾಗಿ
ಗಲೂ ಸ್ವಯಂ ತಾನೇ ಸ್ವಸ್ಮಿನ್ - ತನ್ನಲ್ಲಿಯೇ ಕ್ರೀಡತಿ ಕ್ರೀಡಿಸುತ್ತಾನೆ, ನಂದತಿ
ಆನಂದಿಸುತ್ತಾನೆ.
 
ಸದಾ … ಯಾವಾ
 
೫೩೫. ಅವನು (ವಿಷಯ ವಿಯೋಗದಿಂದ) ದುಃಖಿಸುವುದಿಲ್ಲ, ವಿಷಯ
ಗಳಿಂದ ಸಂತೋಷಪಡುವುದಿಲ್ಲ; (ಸುಖ.ಸಾಧನಗಳಲ್ಲಿ) ಆಸಕ್ತನಾಗುವುದೂ
ಇಲ್ಲ, ವಿರಕ್ತನಾಗುವುದೂ ಇಲ್ಲ. ನಿತ್ಯಾನಂದರಸದಿಂದ ತೃಪ್ತನಾಗಿ ಯಾವಾ
ಗಲೂ ತಾನೇ ತನ್ನಲ್ಲಿಯೇ ಕ್ರೀಡಿಸುತ್ತಾನೆ, ಆನಂದಪಡುತ್ತಾನೆ.