This page has been fully proofread once and needs a second look.

೫೩೧. 'ನಾನು ದೇವದತ್ತನು' ಎಂಬ ಜ್ಞಾನವು ಯಾವುದನ್ನೂ[^೧]
ಅಪೇಕ್ಷಿಸದೆ ಆಗುವುದು; ಹಾಗೆಯೇ ಬ್ರಹ್ಮಜ್ಞಾನಿಗೂ 'ನಾನು ಬ್ರಹ್ಮವು'
ಎಂಬ ಜ್ಞಾನವು (ಯಾವುದನ್ನೂ ಅಪೇಕ್ಷಿಸದೆ ಆಗುವುದು).
 
[^೧] ದೇಶ ಕಾಲಾದಿಗಳನ್ನು.]
 
ಭಾನುನೇವ ಜಗತ್ಸರ್ವಂ ಭಾಸತೇ ಯಸ್ಯ ತೇಜಸಾ ।
ಅನಾತ್ಮಕವಸತ್ತುಚ್ಛಂ ಕಿಂ ನು ತಸ್ಯಾವಭಾಸಕಮ್ ॥ ೫೩೨ ॥
 
ಸರ್ವಂ ಜಗತ್ = ಸರ್ವಜಗತ್ತೂ, ಭಾನುನಾ ಇವ = ಸೂರ್ಯನಿಂದ ಹೇಗೋ
ಹಾಗೆ, ಯಸ್ಯ = ಯಾವನ, ತೇಜಸಾ = ತೇಜಸ್ಸಿನಿಂದ, ಅಸತ್ = ಮಿಥ್ಯಾರೂಪವಾದ,
ತುಚ್ಛಂ = ತುಚ್ಛವಾದ, ಅನಾತ್ಮಕಂ = ಅನಾತ್ಮವಸ್ತುವು, ಭಾಸತೇ = ತೋರುತ್ತದೆಯೊ,
ತಸ್ಯ = ಅವನಿಗೆ, ಅವಭಾಸಕಂ = ಪ್ರಕಾಶಕವಾದದ್ದು, ಕಿಂ ನು [ಸ್ಯಾತ್] = ಯಾವು-
ದಿದ್ದೀತು?
 
೫೩೨. ಸೂರ್ಯನಿಂದ ಸರ್ವಜಗತ್ತೂ ಬೆಳಗುವ ಹಾಗೆ ಯಾವನ
ತೇಜಸ್ಸಿನಿಂದ ಮಿಥ್ಯಾರೂಪವೂ ತುಚ್ಛವೂ ಆದ ಅನಾತ್ಮವಸ್ತುವು ತೋರು-
ತ್ತದೆಯೊ ಅವನನ್ನು ಪ್ರಕಾಶಿಸುವುದು ಯಾವುದಿದ್ದೀತು?
 
ವೇದಶಾಸ್ತ್ರಪುರಾಣಾನಿ ಭೂತಾನಿ ಸಕಲಾನ್ಯಪಿ ।
ಯೇನಾರ್ಥವಂತಿ ತಂ ಕಿನ್ನು ವಿಜ್ಞಾತಾರಂ ಪ್ರಕಾಶಯೇತ್ ॥೫೩೩॥
 
ವೇದ-ಶಾಸ್ತ್ರ-ಪುರಾಣಾನಿ = ವೇದಶಾಸ್ತ್ರ ಪುರಾಣಗಳೂ, ಸಕಲಾನಿ ಭೂತಾನಿ
ಅಪಿ = ಭೂತಗಳೆಲ್ಲವೂ, ಯೇನ = ಯಾವನಿಂದ, ಅರ್ಥವಂತಿ = ಅರ್ಥವತ್ತಾಗುವುವೊ
ತಂ ವಿಜ್ಞಾತಾರಂ = ಆ ವಿಜ್ಞಾತೃವನ್ನು, ಕಿಂ ನು = ಯಾವುದು ತಾನೇ, ಪ್ರಕಾಶ-
ಯೇತ್ = ಪ್ರಕಾಶಪಡಿಸೀತು?
 
೫೩೩. ವೇದ-ಶಾಸ್ತ್ರ-ಪುರಾಣಗಳೂ ಸಮಸ್ತ ಭೂತಗಳೂ ಯಾವುದ-
ರಿಂದ ಅರ್ಥವತ್ತಾಗುವುವೊ ಆ ವಿಜ್ಞಾತೃವನ್ನು ಯಾವುದು ತಾನೇ ಪ್ರಕಾಶ-
ಪಡಿಸೀತು?[^೧]
 
[^೧]'ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದ-
ರಿಂದ ತಿಳಿದುಕೊಂಡಾನು? ಎಲೆ ಮೈತ್ರೇಯಿ, ವಿಜ್ಞಾತೃವನ್ನು ಯಾವುದರಿಂದ ತಿಳಿದು-
ಕೊಂಡಾನು?' ಯೇನೇದಂ ಸರ್ವಂ ವಿಜಾನಾತಿ ತಂ ಕೇನ ವಿಜಾನೀಯಾತ್?
ವಿಜ್ಞಾತಾರಮರೇ ಕೇನ ವಿಜಾನೀಯಾದಿತಿ (ಬೃಹದಾರಣ್ಯಕ ಉ. ೨. ೪. ೧೪). ]