This page has not been fully proofread.

೫೩೩]
 
ವಿವೇಕಚೂಡಾಮಣಿ
 
೨೬೫
 
೫೩೧. 'ನಾನು ದೇವದತ್ತನು' ಎಂಬ ಜ್ಞಾನವು ಯಾವುದನ್ನೂ
[^೧]
ಅಪೇಕ್ಷಿಸದೆ ಆಗುವುದು; ಹಾಗೆಯೇ ಬ್ರಹ್ಮಜ್ಞಾನಿಗೂ 'ನಾನು ಬ್ರಹ್ಮವು
'
ಎಂಬ ಜ್ಞಾನವು (ಯಾವುದನ್ನೂ ಅಪೇಕ್ಷಿಸದೆ ಆಗುವುದು).

 
[^] ದೇಶ ಕಾಲಾದಿಗಳನ್ನು.
 

 
ಭಾನುದೇನೇವ ಜಗತ್ಸರ್ವಂ ಭಾಸತೇ ಯಸ್ಯ ತೇಜಸಾ

ಅನಾತ್ಮಕವಸತ್ತು ಚ್ಛಂ ಕಿಂ ನು ತಸ್ಯಾವಭಾಸಕಮ್
 
I
೫೩೨
 
ಸರ್ವ೦

 
ಸರ್ವಂ
ಜಗತ್ -= ಸರ್ವಜಗತ್ತೂ, ಭಾನುನಾ ಇವ = ಸೂರ್ಯನಿಂದ ಹೇಗೋ

ಹಾಗೆ, ಯಸ್ಯ -= ಯಾವನ, ತೇಜಸಾ = ತೇಜಸ್ಸಿನಿಂದ, ಅಸತ್ = ಮಿಥ್ಯಾರೂಪವಾದ
,
ತುಚ್ಛ -ಛಂ = ತುಚ್ಛವಾದ, ಅನಾತ್ಮಕಂ = ಅನಾತ್ಮವಸ್ತುವು, ಭಾಸತೇ -= ತೋರುತ್ತದೆಯೊ
,
ತಸ್ಯ- = ಅವನಿಗೆ, ಅವಭಾಸಕಂ = ಪ್ರಕಾಶಕವಾದದ್ದು, ಕಿಂ ನು [ಸ್ಯಾತ್] - ಯಾವು
= ಯಾವು-
ದಿದ್ದೀತು?
 
S
 

 
೫೩೨. ಸೂರ್ಯನಿಂದ ಸರ್ವಜಗತ್ತೂ ಬೆಳಗುವ ಹಾಗೆ ಯಾವನ

ತೇಜಸ್ಸಿನಿಂದ ಮಿಥ್ಯಾರೂಪವೂ ತುಚ್ಛವೂ ಆದ ಅನಾತ್ಮವಸ್ತುವು ತೋರು
-
ತ್ತ
ದೆಯೊ ಅವನನ್ನು ಪ್ರಕಾಶಿಸುವುದು ಯಾವುದಿದ್ದೀತು?
 

 
ವೇದಶಾಸ್ತ್ರ ಪುರಾಣಾನಿ ಭೂತಾನಿ ಸಕಲಾನ್ಯಪಿ ।

ಯೇನಾರ್ಥವಂತಿ ತಂ ಕಿನ್ನು ವಿಜ್ಞಾತಾರಂ ಪ್ರಕಾಶಯೇತ್ ॥೫೩೩॥
 

 
ವೇದ -ಶಾಸ್ತ್ರ, -ಪುರಾಣಾನಿ = ವೇದಶಾಸ್ತ್ರ ಪುರಾಣಗಳೂ, ಸಕಲಾನಿ ಭೂತಾನಿ

ಅಪಿ = ಭೂತಗಳೆಲ್ಲವೂ, ಯೇನ = ಯಾವನಿಂದ, ಅರ್ಥವಂತಿ- = ಅರ್ಥವತ್ತಾಗುವುವೋ
ವೊ
ತಂ
ವಿಜ್ಞಾ
ತಾರಂ = ಆ ವಿಜ್ಞಾವನ್ನುತೃವನ್ನು, ಕಿಂ ನು -= ಯಾವುದು ತಾನೇ, ಪ್ರಕಾಶ
-
ಯೇತ್ -= ಪ್ರಕಾಶಪಡಿಸೀತು?
 
ತಂ
 

 
೫೩೩. ವೇದ -ಶಾಸ್ತ್ರ -ಪುರಾಣಗಳೂ ಸಮಸ್ತ ಭೂತಗಳೂ ಯಾವುದ
-
ರಿಂದ ಅರ್ಥವತ್ತಾಗುವುವೋವೊ ಆ ವಿಜ್ಞಾತೃವನ್ನು ಯಾವುದು ತಾನೇ ಪ್ರಕಾಶ
 

ಪಡಿಸೀತು??
 
[^]
 
[^೧]
'ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದ
-
ರಿಂದ ತಿಳಿದುಕೊಂಡಾನು? ಎಲೆ ಮೈತ್ರೇಯಿ, ವಿಜ್ಞಾತೃವನ್ನು ಯಾವುದರಿಂದ ತಿಳಿದು
-
ಕೊಂಡಾನು?' ಯೇನೇದಂ ಸರ್ವಂ ವಿಜಾನಾತಿ ತಂ ಕೇನ ವಿಜಾನೀಯಾತ್?

ವಿಜ್ಞಾತಾರಮರೇ ಕೇನ ವಿಜಾನೀಯಾದಿತಿ (ಬೃಹದಾರಣ್ಯಕ ಉ. ೨. ೪. ೧೪). ]