This page has not been fully proofread.

೫೩೩]
 
ವಿವೇಕಚೂಡಾಮಣಿ
 
೨೬೫
 
೫೩೧. 'ನಾನು ದೇವದತ್ತನು' ಎಂಬ ಜ್ಞಾನವು ಯಾವುದನ್ನೂ
ಅಪೇಕ್ಷಿಸದೆ ಆಗುವುದು; ಹಾಗೆಯೇ ಬ್ರಹ್ಮಜ್ಞಾನಿಗೂ 'ನಾನು ಬ್ರಹ್ಮವು
ಎಂಬ ಜ್ಞಾನವು (ಯಾವುದನ್ನೂ ಅಪೇಕ್ಷಿಸದೆ ಆಗುವುದು).
[೧ ದೇಶ ಕಾಲಾದಿಗಳನ್ನು.
 
ಭಾನುದೇವ ಜಗತ್ಸರ್ವಂ ಭಾಸತೇ ಯಸ್ಯ ತೇಜಸಾ
ಅನಾತ್ಮಕವಸತ್ತು ಚ್ಛಂ ಕಿಂ ನು ತಸ್ಯಾವಭಾಸಕಮ್
 
I ೫೩೨ ।
 
ಸರ್ವ೦ ಜಗತ್ - ಸರ್ವಜಗತ್ತೂ ಭಾನುನಾ ಇವ= ಸೂರ್ಯನಿಂದ ಹೇಗೋ
ಹಾಗೆ ಯಸ್ಯ - ಯಾವನ ತೇಜಸಾ = ತೇಜಸ್ಸಿನಿಂದ ಅಸತ್ = ಮಿಥ್ಯಾರೂಪವಾದ
ತುಚ್ಛ - ತುಚ್ಛವಾದ ಅನಾತ್ಮಕಂ = ಅನಾತ್ಮವಸ್ತುವು ಭಾಸತೇ - ತೋರುತ್ತದೆಯೊ
ತಸ್ಯ- ಅವನಿಗೆ ಅವಭಾಸಕಂ = ಪ್ರಕಾಶಕವಾದದ್ದು ಕಿಂ ನು [ಸ್ಯಾತ್] - ಯಾವು
ದಿದ್ದೀತು?
 
S
 
೫೩೨. ಸೂರ್ಯನಿಂದ ಸರ್ವಜಗತ್ತೂ ಬೆಳಗುವ ಹಾಗೆ ಯಾವನ
ತೇಜಸ್ಸಿನಿಂದ ಮಿಥ್ಯಾರೂಪವೂ ತುಚ್ಛವೂ ಆದ ಅನಾತ್ಮವಸ್ತುವು ತೋರು
ಇದೆಯೊ ಅವನನ್ನು ಪ್ರಕಾಶಿಸುವುದು ಯಾವುದಿದ್ದೀತು?
 
ವೇದಶಾಸ್ತ್ರ ಪುರಾಣಾನಿ ಭೂತಾನಿ ಸಕಲಾನ್ಯಪಿ ।
ಯೇನಾರ್ಥವಂತಿ ತಂ ಕಿನ್ನು ವಿಜ್ಞಾತಾರಂ ಪ್ರಕಾಶಯೇತ್ ॥೫೩೩॥
 
ವೇದ ಶಾಸ್ತ್ರ, ಪುರಾಣಾನಿ = ವೇದಶಾಸ್ತ್ರ ಪುರಾಣಗಳೂ ಸಕಲಾನಿ ಭೂತಾನಿ
ಅಪಿ = ಭೂತಗಳೆಲ್ಲವೂ ಯೇನ – ಯಾವನಿಂದ ಅರ್ಥವಂತಿ- ಅರ್ಥವತ್ತಾಗುವುವೋ
ವಿಜ್ಞಾತ
ತಾರಂ = ಆ ವಿಜ್ಞಾವನ್ನು ಕಿಂ ನು - ಯಾವುದು ತಾನೇ ಪ್ರಕಾಶ
ಯೇತ್ - ಪ್ರಕಾಶಪಡಿಸೀತು?
 
ತಂ
 
೫೩೩. ವೇದ ಶಾಸ್ತ್ರ ಪುರಾಣಗಳೂ ಸಮಸ್ತ ಭೂತಗಳೂ ಯಾವುದ
ರಿಂದ ಅರ್ಥವತ್ತಾಗುವುವೋ ಆ ವಿಜ್ಞಾತೃವನ್ನು ಯಾವುದು ತಾನೇ ಪ್ರಕಾಶ
 
ಪಡಿಸೀತು??
 
[೧'ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದ
ರಿಂದ ತಿಳಿದುಕೊಂಡಾನು? ಎಲೆ ಮೈತ್ರೇಯಿ, ವಿಜ್ಞಾತೃವನ್ನು ಯಾವುದರಿಂದ ತಿಳಿದು
ಕೊಂಡಾನು?' ಯೇನೇದಂ ಸರ್ವಂ ವಿಜಾನಾತಿ ತಂ ಕೇನ ವಿಜಾನೀಯಾತ್?
ವಿಜ್ಞಾತಾರಮರೇ ಕೇನ ವಿಜಾನೀಯಾದಿತಿ (ಬೃಹದಾರಣ್ಯಕ ಉ. ೨. ೪. ೧೪). ]