This page has been fully proofread once and needs a second look.

ವಿದ್ವಾನ್ = ವಿದ್ವಾಂಸನಾದ, ಆತ್ಮಾರಾಮಃ – ಆತ್ಮಾರಾಮನಾದ, ಮುನಿಃ =
ಮುನಿಯು, ಗಚ್ಛನ್ = ನಡೆಯುತ್ತ, ತಿಷ್ಠನ್ = ನಿಲ್ಲು, ಉಪವಿಶನ್ = ಕುಳಿತು-
ಕೊಳ್ಳುತ್ತ, ಶಯಾನಃ ವಾ = ಮಲಗುತ್ತ, ಅನ್ಯಥಾ ಅಪಿ ವಾ = ಅಥವಾ ಬೇರೆ ಸ್ಥಿತಿ-
ಯಲ್ಲಿ ಇರುತ್ತ, ಯಥೇಚ್ಛಯಾ = ಸ್ಟೇಚ್ಛೆಯಿಂದ, ಸದಾ = ಯಾವಾಗಲೂ, ವಸೇತ್ =
ಇರಬೇಕು.
 
೫೨೭. ವಿದ್ವಾಂಸನೂ ಆತ್ಮಾರಾಮನೂ ಆದ ಮುನಿಯು ನಡೆಯು-
ವಾಗಲೂ ನಿಲ್ಲುವಾಗಲೂ ಕುಳಿತುಕೊಳ್ಳುವಾಗಲೂ ಮಲಗುವಾಗಲೂ
ಅಥವಾ ಬೇರೆ ಯಾವ ಸ್ಥಿತಿಯಲ್ಲಿರುವಾಗಲೂ ಸ್ಟೇಚ್ಛೆಯಿಂದ[^೧] ಯಾವಾ-
ಗಲೂ ಇರಬೇಕು.
 
[^೧] ಪರತಂತ್ರನಾಗದೆ.]
 
ನ ದೇಶಕಾಲಾಸನದಿಗ್ಯಮಾದಿ-
ಲಕ್ಷ್ಯಾದ್ಯಪೇಕ್ಷಾಽಪ್ರತಿಬದ್ಧವೃತ್ತೇಃ ।
ಸಂಸಿದ್ಧತತ್ತ್ವಸ್ಯ ಮಹಾತ್ಮನೋಽಸ್ತಿ
ಸ್ವವೇದನೇ ಕಾ ನಿಯಮಾಪೇಕ್ಷಾ ॥ ೫೨೮ ॥
 
ಅಪ್ರತಿಬದ್ಧವೃತ್ತೇಃ = ಪ್ರತಿಬಂಧವಿಲ್ಲದ ಬುದ್ಧಿವೃತ್ತಿಯುಳ್ಳ, ಸಂಸಿದ್ಧ-
ತತ್ತ್ವಸ್ಯ = ಆತ್ಮಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ, ಮಹಾತ್ಮನಃ = ಮಹಾತ್ಮ-
ನಿಗೆ, ದೇಶ-ಕಾಲ-ಆಸನ-ದಿಕ್-ಯಮ-ಆದಿ-ಲಕ್ಷ್ಯ-ಆದಿ-ಅಪೇಕ್ಷಾ = ದೇಶ ಕಾಲ
ಆಸನ ದಿಕ್ಕು ಯಮಾದಿಗಳು, ಲಕ್ಷವೇ ಮೊದಲಾದುವು-- ಇವುಗಳ ಅಪೇಕ್ಷೆಯು,
ನ = ಇರುವುದಿಲ್ಲ; ಸ್ವ-ವೇದನೇ = ಸ್ವಾತ್ಮಸಾಕ್ಷಾತ್ಕಾರಕ್ಕೆ, ನಿಯಮಾದಿ-ಅಪೇಕ್ಷಾ =
ನಿಯಮಾದಿಗಳ ಅಪೇಕ್ಷೆಯು, ಕಾ ಅಸ್ತಿ = ಎಲ್ಲಿಯದು?
 
೫೨೮. ಯಾವ ಪ್ರತಿಬಂಧವೂ ಇಲ್ಲದ ಬುದ್ಧಿ ವೃತ್ತಿಯುಳ್ಳ, ಆತ್ಮ
ಸ್ವರೂಪವನ್ನು ನಿಶ್ಚಯಪಡಿಸಿಕೊಂಡಿರುವ ಮಹಾತ್ಮನಿಗೆ ದೇಶ[^೧] ಕಾಲ ಆಸನ
ದಿಕ್ಕು ಯಮನಿಯವಾದಿಗಳು ಲಕ್ಷ್ಯಾದಿಗಳು[^೨]-- ಇವುಗಳ ಅಪೇಕ್ಷೆಯಿರುವು-
ದಿಲ್ಲ. ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ನಿಯಮಾದಿಗಳ
ಅಪೇಕ್ಷೆ ಎಲ್ಲಿಯದು?
 
[^೧] ಪವಿತ್ರ ಸ್ಥಾನಗಳು, ಹೀಗೆಯೇ ಪವಿತ್ರವಾದ ಕಾಲ.
[^೨] ಧ್ಯಾನಕ್ಕೆ ಬೇಕಾದ ಲಕ್ಷ್ಯಗಳು.]
 
ಘಟೋಽಯಮಿತಿ ವಿಜ್ಞಾತುಂ ನಿಯಮಃ ಕೋ ನ್ವಪೇಕ್ಷ್ಯತೇ ।
ವಿನಾ ಪ್ರಮಾಣಸುಷ್ಠುತ್ವಂ ಯಸ್ಮಿನ್ಸತಿ ಪದಾರ್ಥಧೀಃ ॥ ೫೨೯ ॥