This page has not been fully proofread.

១៦ ១
 
ವಿವೇಕಚೂಡಾಮಣಿ
 
[೫೨೫
 
೫೨೪, ವಿಕಲ್ಪ ಶೂನ್ಯನಾದ ಅಖಂಡಜ್ಞಾನಾತ್ಮನಲ್ಲಿ ವಿವಿಧಕಲ್ಪನೆಗಳನ್ನು
ಮಾಡುವುದು ಆಕಾಶದಲ್ಲಿ ನಗರವನ್ನು ಕಲ್ಪಿಸಿದಂತೆ. ಆದುದರಿಂದ ಅದ್ವಯಾ
ನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನ
ವನ್ನು ಸೇವಿಸು.
 
ತಮವಸ್ಥಾ ಪರಮೋಪಶಾಂತಿ-
ರ್ಬುದ್ಧರಸಲ್ಪ-ವಿಕಲ್ಪ-ಹೇತೋಃ ।
ಬ್ರಹ್ಮಾತ್ಮನಾ ಬ್ರಹ್ಮವಿದೆ ಮಹಾತ್ಮನೋ
 
ಯತ್ರಾದ್ವಯಾನಂದಸುಖಂ ನಿರಂತರವ । ೫೨೫ ।
 
ವಾದ
 
ಅಸತ್ಯಲ್ಪ ನಿಕಲ್ಪ ಹೇತೋಃ = ಮಿಥ್ಯಾ ವಿಷಯಗಳ ಕಲ್ಪನೆಗಳಿಗೆ ಕಾರಣ
ಬುದ್ಧಃ – ಬುದ್ಧಿಗೆ ಮಹಾತ್ಮನಃ – ಮಹಾತ್ಮನಾದ ಬ್ರಹ್ಮವಿದಃ = ಬ್ರಹ್ಮ
ಬ್ರಹ್ಮಾತ್ಮನಾ - ಬ್ರಹ್ಮಭಾವದಿಂದ [ಆಗುವ ತೂಮವಸ್ಥಾ -
ಮೌನವೇ ಪರಮೋಪಶಾಂತಿಃ - ಪರಮಶಾಂತಿಯು; ಯತ್ರ ಎಲ್ಲಿ ನಿರಂತರಂ=
ಯಾವಾಗಲೂ ಅದ್ವಯಾನಂದಸುಖಂ = ಅದ್ವಯಾನಂದಸುಖವು [ಆಗುತ್ತದೆಯೋ,
 
ಜ್ಞಾನಿ
ನಿಯ
 
೫೨೫. ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣವಾದ ಬುದ್ಧಿಗೆ, ಮಹಾ
ತ್ಮನಾದ ಬ್ರಹ್ಮಜ್ಞಾನಿಯ ಬ್ರಹ್ಮಭಾವದಿಂದ ಉಂಟಾಗುವ ಮೌನವೇ ಪರ
ಮೋಪಶಾಂತಿ, ಅಲ್ಲಿ ನಿರಂತರವೂ ಅದ್ವಯಾನಂದಸುಖವಾಗುತ್ತದೆ.
 
ನಾಸ್ತಿ ನಿರ್ವಾಸನಾತ್ಮನಾತ್ ಪರಂ ಸುಖಕೃದುತ್ತಮಮ್ ।
ವಿಜ್ಞಾತಾತ್ಮಸ್ವರೂಪಸ್ಯ ಸ್ನಾನಂದರಸ-ಪಾಯಿನಃ
 
॥ ೫೨೬ ॥
 
ವಿಜ್ಞಾತ. ಆತ್ಮಸ್ವರೂಪಸ್ಯ - ಆತ್ಮಸ್ವರೂಪವನ್ನು ತಿಳಿದುಕೊಂಡಿರುವ ಸ್ವ.
ಆನಂದರಸ.ಪಾಯಿನಃ = ಆತ್ಮಾನಂದರಸವನ್ನು ಕುಡಿಯುತ್ತಿರುವವನಿಗೆ ನಿರ್ವಾಸ
ನಾತ್ - ಸರ್ವವಾಸನಾರಹಿತವಾದ ಮೌನಾತ್ = ಮೌನಕ್ಕಿಂತ ಉತ್ತಮಂ = ಶ್ರೇಷ್ಠ
ವಾದ ಸುಖಕೃತ್ - ಸುಖಕರವಾದದ್ದು ಪರಂ ನ ಆಸ್ತಿ - ಬೇರೊಂದಿಲ್ಲವು.
 
೫೨೬, ಆತ್ಮಸ್ವರೂಪವನ್ನು ತಿಳಿದುಕೊಂಡು ಆತ್ಮಾನಂದರಸವನ್ನು
ಕುಡಿಯುತ್ತಿರುವವನಿಗೆ ಸರ್ವವಾಸನಾರಹಿತವಾದ ಮೌನಕ್ಕಿಂತ ಶ್ರೇಷ್ಠ.
ಸುಖಕರವಾದದ್ದು ಬೇರೊಂದಿಲ್ಲ.
 
ಗಚ್ಛಂಸ್ತಿಷ್ಠನ್ನು ಪವಿಶಂಛಯಾನೋ ವಾನ್ಯಥಾಽಪಿ ವಾ ।
ಯಥೇಚ್ಛಯಾ ವಸೇದ್ವಿದ್ವಾನಾತ್ಮಾರಾಮಃ ಸದಾ ಮುನಿಃ ॥ ೫೨೭ ॥