This page has been fully proofread once and needs a second look.

ಬ್ರಹ್ಮ ಏವ = ಬ್ರಹ್ಮವೇ; ಪ್ರಶಾಂತಮನಸಾ = ಪ್ರಶಾಂತವಾದ ಮನಸ್ಸಿನಿಂದ,
ಅಧ್ಯಾತ್ಮದೃಶಾ = ಅಧ್ಯಾತ್ಮದೃಷ್ಟಿಯಿಂದ, ಸರ್ವಾಸು ಅವಸ್ಥಾಸು ಅಪಿ= ಎಲ್ಲ ಅವಸ್ಥೆ-
ಗಳಲ್ಲಿಯೂ, ಪಶ್ಯ = [ಬ್ರಹ್ಮವನ್ನೇ] ನೋಡು; ಚಕ್ಷುಷ್ಮತಾಂ = ಕಣ್ಣಿರುವವರಿಗೆ,
ಅಭಿತಃ = ಸುತ್ತಲೂ, ರೂಪಾತ್ = ರೂಪಕ್ಕಿಂತ, ಅನ್ಯತ್ = ಬೇರೊಂದು, ಅವೇ-
ಕ್ಷಿತುಂ = ನೋಡಲು, ಕಿಂ ವಿದ್ಯತೇ = ಇರುವುದೆ? ತದ್ವತ್ = ಹಾಗೆಯೇ, ಬ್ರಹ್ಮವಿದಃ =
ಬ್ರಹ್ಮಜ್ಞಾನಿಗೆ, ಸತಃ = ಸದ್ರೂಪಕ್ಕಿಂತ, ಅಪರಂ ಕಿಂ = ಬೇರೆ ಯಾವುದು, ಬುದ್ಧೇಃ =
ಬುದ್ಧಿಯ, ವಿಹಾರಾಸ್ಪದಂ = ಸಂಚಾರಕ್ಕೆ ಆಶ್ರಯವಾಗಿ [ಇರುತ್ತದೆ?]
 
೫೨೦. ಈ ಜಗತ್ತು ಬ್ರಹ್ಮಪ್ರತ್ಯಯದ ಪ್ರವಾಹವಾಗಿರುತ್ತದೆ. ಆದು-
ದರಿಂದ ಅದು ಎಲ್ಲಾ ಕಡೆಯಲ್ಲಿಯೂ ಬ್ರಹ್ಮವೇ, ಪ್ರಶಾಂತಮನಸ್ಸಿನಿಂದ
ಮತ್ತು ಅಧ್ಯಾತ್ಮದೃಷ್ಟಿಯಿಂದ ಎಲ್ಲ ಅವಸ್ಥೆಗಳಲ್ಲಿಯೂ (ಬ್ರಹ್ಮವನ್ನೇ)
ನೋಡು, ಕಣ್ಣಿರುವವರಿಗೆ ಸುತ್ತಲೂ ರೂಪಕ್ಕಿಂತ ಬೇರೆಯಾದುದು
ನೋಡಲು ಇರುವುದೆ? ಹೀಗೆಯೇ ಬ್ರಹ್ಮಜ್ಞಾನಿಗೆ ಸದ್ರೂಪವಾದ (ಬ್ರಹ್ಮ-
ಕ್ಕಿಂತ) ಮತ್ತೇನು ಬುದ್ಧಿಯ ಸಂಚಾರಕ್ಕೆ ಆಶ್ರಯವಾದೀತು?
 
ಕಸ್ತಾಂ ಪರಾನಂದ-ರಸಾನುಭೂತಿ-
ಮುತ್ಸೃಜ್ಯ ಶೂನ್ಯೇಷು ರಮೇತ ವಿದ್ವಾನ್ ।
ಚಂದ್ರೆ ಮಹಾಹ್ಲಾದಿನಿ ದೀಪ್ಯಮಾನೇ
ಚಿತ್ರೇಂದುಮಾಲೋಕಯಿತುಂ ಕ ಇಚ್ಛೆಛೇತ್ ॥ ೫೨೧ ॥
 
ಕಃ ವಿದ್ವಾನ್ = ಯಾವ ವಿದ್ವಾಂಸನು, ತಾಂ = ಆ, ಪರಾನಂದ-ರಸಾನು-
ಭೂತಿಂ = ಪರಾನಂದರಸದ ಅನುಭವವನ್ನು, ಉತ್ಸೃಜ್ಯ = ಬಿಟ್ಟು, ಶೂನ್ಯೇಷು =
ನೀರಸವಿಷಯಗಳಲ್ಲಿ, ರಮೇತ = ರಮಿಸಿಯಾನು? ಮಹಾಹ್ಲಾದಿನಿ ಚಂದ್ರೇ ದೀಪ್ಯ-
ಮಾನೇ [ಸತಿ] = ಮಹಾಹ್ಲಾದವನ್ನುಂಟುಮಾಡುವ ಚಂದ್ರನು ಪ್ರಕಾಶಿಸುತ್ತಿರುವಾಗ,
ಕಃ = ಯಾವನು, ಚಿತ್ರ-ಇಂದುಂ = ಚಿತ್ರದಲ್ಲಿರುವ ಚಂದ್ರನನ್ನು, ಆಲೋಕಯಿತುಂ =
ನೋಡುವುದಕ್ಕೆ, ಇಚ್ಛೆಛೇತ್ = ಬಯಸುವನು?
 
೫೨೧. ಆ ಪರಾನಂದದ ಅನುಭವವನ್ನು ಬಿಟ್ಟು, ನೀರಸವಾದ
ವಿಷಯಗಳಲ್ಲಿ ಯಾವ ವಿದ್ವಾಂಸನು ತಾನೇ ರಮಿಸಿಯಾನು? ಮಹಾಹ್ಲಾದ-
ವನ್ನುಂಟುಮಾಡುವ ಚಂದ್ರನು ಪ್ರಕಾಶಿಸುತ್ತಿರುವಾಗ ಯಾವನು ತಾನೇ
ಚಿತ್ರದಲ್ಲಿರುವ ಚಂದ್ರನನ್ನು ನೋಡುವುದಕ್ಕೆ ಬಯಸುವನು?
 
ಅಸತ್ಪದಾರ್ಥಾನುಭವೇನ ಕಿಂಚಿ-
ನ್ನ ಹ್ಯಸ್ತಿ ತೃಪ್ತಿರ್ನ ಚ ದುಃಖಹಾನಿಃ ।