This page has not been fully proofread.

ವಿವೇಕಚೂಡಾಮಣಿ
 
[೫೧೭
 
ಭವತ್- ಕೃಪಾಶ್ರೀ ಮಹಿಮ- ಪ್ರಸಾದಾತ್ ನಿಮ್ಮ ಕೃಪೆಯೆಂಬ ಲಕ್ಷ್ಮಿಯ
ಮಹಿಮೆಯ ಪ್ರಸಾದದಿಂದ ಏಷಾ - ಈ ಸ್ವಾರಾಜ್ಯ-ಸಾಮ್ರಾಜ್ಯ - ವಿಭೂತಿಃ =
ಸ್ವಾರಾಜ್ಯ ಸಾಮ್ರಾಜ್ಯದ ವೈಭವವು ಮಯಾ - ನನ್ನಿಂದ ಪ್ರಾಸ್ತಾ - ಹೊಂದಲ್ಪಟ್ಟಿದೆ;
ಮಹಾತ್ಮನೇ - ಮಹಾತ್ಮನಾದ ಶ್ರೀಗುರವೇ – ಶ್ರೀಗುರುವಾದ ತೇ = ನಿನಗೆ ನಮಃ
ನಮಃ ಅಸ್ತು - ಪುನಃಪುನಃ ನಮಸ್ಕಾರವಿರಲಿ, ಪುನಃ ನಮಃ ಅಸ್ತು.
 
೨೫೮
 
೫೧೬. ನಿಮ್ಮ ಕೃಪೆಯೆಂಬ ಲಕ್ಷ್ಮಿಯ ಮಹಿಮೆಯ ಪ್ರಸಾದದಿಂದ ಈ
ಸ್ವಾರಾಜ್ಯ ಸಾಮ್ರಾಜ್ಯದ ವೈಭವವು ನನಗೆ ಪ್ರಾಪ್ತವಾಯಿತು. ಮಹಾತ್ಮ
ನಾದ ಶ್ರೀಗುರುವೇ, ನಿನಗೆ ಪುನಃ ಪುನಃ ನಮಸ್ಕಾರಗಳು.
 
ಮಹಾಸ್ವ ಮಾಯಾಕೃತ-ಜನಿ-ಜರಾ-ಮೃತ್ಯು-ಗಹನೇ
ಭ್ರಮಂತಂ ಕ್ಲಿಶ್ಯಂತಂ ಬಹುಲತರ-ತಾರನುದಿನಮ್ ।
ಅಹಂಕಾರವ್ಯಾಘ್ರ-ವೃಥಿತಮಿಮಮತ್ಯಂತ-ಕೃಪಯಾ
ಪ್ರಬೋಧ್ಯ ಪ್ರಸ್ತಾಪಾತ್ ಪರಮವಿತವಾನ್ ಮಾನಸಿ
ಗುರೋ ॥ ೫೧೭ ॥
 
ಗುರೋ ಹೇ ಗುರುವೆ, ಮಹಾಸ್ವ=ಮಹಾಸ್ವಪ್ನದಂತಿರುವ ಮಾಯಾ
ಕೃತ ಜನಿ-ಜರಾಮೃತ್ಯು ಗಹನೇ-ಮಾಯೆಯಿಂದ ಮಾಡಲ್ಪಟ್ಟ ಹುಟ್ಟು ಮುಪ್ಪು.
ಸಾವುಗಳೆಂಬ ಕಾಡಿನಲ್ಲಿ ಭ್ರಮಂತಂ ಅಲೆಯುತ್ತಿರುವ, ಬಹುಲತರ ತಾಪೈಕಿ =
ಬಗೆಬಗೆಯ ತಾಪಗಳಿಂದ ಅನುದಿನಂ ಪ್ರತಿದಿನವೂ ಕ್ಲಿಶ್ಯಂತಂ ಕೇಶಪಡುತ್ತಿರುವ,
ಅಹಂಕಾರವ್ಯಾಘ್ರ, ವೃಥಿತಂ = ಅಹಂಕಾರವೆಂಬ ಹುಲಿಯಿಂದ ವ್ಯಥೆಪಡುತ್ತಿರುವ,
ಇಮಂ ಮಾಂ = ಈ ನನ್ನನ್ನು ಅತ್ಯಂತ ಕೃಪಯಾ - ಅಪಾರಕೃಪೆಯಿಂದ ಪ್ರಸ್ತಾ-
ಪಾತ್ - ನಿದ್ರೆಯಿಂದ ಪ್ರಬೋಧ್ಯ - ಎಚ್ಚರಗೊಳಿಸಿ ಪರಂ- ಸಂಪೂರ್ಣವಾಗಿ ಅನಿ.
 
ತವಾನ್ ಅಸಿ - ಕಾಪಾಡಿರುವೆ.
 
೫೧೭. ಹೇ ಗುರುವೆ, ಮಹಾಸ್ವಪ್ನ ದಂತಿರುವ ಮಾಯಾಕೃತವಾದ
ಹುಟ್ಟುಮುಪ್ಪು-ಸಾವುಗಳೆಂಬ ಕಾಡಿನಲ್ಲಿ ಅಲೆಯುತ್ತಿರುವ, ಬಗೆ ಬಗೆಯ
ತಾಪಗಳಿಂದ ಪ್ರತಿದಿನವೂ ಕೇಶಪಡುತ್ತಿರುವ, ಅಹಂಕಾರವೆಂಬ ಹುಲಿ
ಯಿಂದ ವ್ಯಥೆಪಡುತ್ತಿರುವ ಈ ನನ್ನನ್ನು ಅಪಾರಕೃಪೆಯಿಂದ (ಅವಿದ್ಯೆಯೆಂಬ)
ನಿದ್ರೆಯಿಂದ ಎಚ್ಚರಗೊಳಿಸಿ ಸಂಪೂರ್ಣವಾಗಿ ಕಾಪಾಡಿರುವೆ !
 
ನಮಸ್ತ ಸ ಕ ಕಚಿನ್ಮಹಸೇ ನಮಃ ।
ಯದೇತದ್ವಿಶ್ವರೂಪೇಣ ರಾಜತೇ ಗುರುರಾಜ ತೇ
 
॥ ೫೧೮ ।