This page has been fully proofread once and needs a second look.

ಕರ್ತೃತ್ವ-ಭೋಕ್ತೃತ್ವ-ಖಲತ್ವ-ಮತ್ತತಾ-
ಜಡತ್ವ-ಬದ್ಧತ್ವ-ವಿಮುಕ್ತತಾದಯಃ ।
ಬುದ್ಧೇರ್ವಿಕಲ್ಪಾ ನತು ಸಂತಿ ವಸ್ತುತಃ
ಸ್ವಸ್ಮಿನ್ ಪರೇ ಬ್ರಹ್ಮಣಿ ಕೇವಲೇಽದ್ವಯೇ ॥ ೫೦೯ ॥
 
ಕರ್ತೃತ್ವ-ಭೋಕ್ತೃತ್ವ-ಖಲತ್ವ-ಮತ್ತತಾ-ಜಡತ್ವ-ಬದ್ಧತ್ವ-ವಿಮುಕ್ತತಾ-
ಆದಯಃ = ಕರ್ತೃತ್ವ ಭೋಕ್ತೃತ್ವ ನೀಚತ್ವ ಮತ್ತತೆ ಜಡತ್ವ ಬದ್ಧತ್ವ ಮುಕ್ತತ್ವ
ಮೊದಲಾದುವು, ಬುದ್ಧೇಃ = ಬುದ್ಧಿಯ, ವಿಕಲ್ಪಾಃ = ಧರ್ಮಗಳು, ಕೇವಲೇ =
ಕೇವಲವಾದ ,ಅದ್ವಯೇ = ಅದ್ವಯವಾದ, ಸ್ವಸ್ಮಿನ್ = ತನ್ನ ಆತ್ಮನಾದ, ಪರೇ-
ಬ್ರಹ್ಮಣಿ = ಪರಬ್ರಹ್ಮದಲ್ಲಿ, ವಸ್ತುತಃ = ನಿಜವಾಗಿ, ನ ತು ಸಂತಿ = ಇಲ್ಲವು.
 
೫೦೯. ಕರ್ತೃತ್ವ ಭೋಕ್ತೃತ್ವ ನೀಚತ್ವ ಮತ್ತತೆ ಜಡತ್ವ ಬದ್ಧತ್ವ
ಮುಕ್ತತ್ವ-- ಇವೇ ಮೊದಲಾದುವು ಬುದ್ಧಿಯ ಧರ್ಮಗಳೇ ಹೊರತು
ಕೇವಲವೂ ಅದ್ವಯವೂ ಆತ್ಮವೂ ಆದ ಪರಬ್ರಹ್ಮದಲ್ಲಿ ನಿಜವಾಗಿ ಇಲ್ಲವು.
 
ಸಂತು ವಿಕಾರಾಃ ಪ್ರಕೃತೇರ್ದಶಧಾ ಶತಧಾ ಸಹಸ್ರಧಾ ವಾಽಪಿ ।
ಕಿಂ ಮೇಽಸಂಗಚಿತೇಸ್ತೈರ್ನ ಘನಃ ಕ್ವಚಿದಂಬರಂ ಸ್ಪೃಶತಿ ॥೫೧೦॥
 
ಪ್ರಕೃತೇಃ = ಪ್ರಕೃತಿಯ, ವಿಕಾರಾಃ = ವಿಕಾರಗಳು, ದಶಧಾ = ಹತ್ತು ಬಗೆ-
ಯಾಗಿ, ಶತಧಾ = ನೂರು ಬಗೆಯಾಗಿ, ಸಹಸ್ರಧಾ ವಾ ಅಪಿ = ಅಥವಾ ಸಾವಿರ ಬಗೆ-
ಯಾಗಿ, ಸಂತು = ಇರಲಿ; ಅಸಂಗಚಿತೇಃ = ಅಸಂಗಚಿದ್ರೂಪನಾದ, ಮೇ = ನನಗೆ,
ತೈಃ = ಅವುಗಳಿಂದ, ಕಿಂ = ಏನಾಗಬೇಕು? ಘನಃ = ಮೇಘವು, ಕ್ವಚಿತ್ = ಎಲ್ಲಿಯೂ,
ಅಂಬರಂ = ಆಕಾಶವನ್ನು, ನ ಸ್ಪೃಶತಿ = ಸೋಂಕುವುದಿಲ್ಲ.
 
೫೧೦. ಪ್ರಕೃತಿಯ ವಿಕಾರಗಳು ಹತ್ತು ಬಗೆಯಾಗಿರಲಿ ನೂರು ಬಗೆ-
ಯಾಗಿರಲಿ ಅಥವಾ ಸಾವಿರ ಬಗೆಯಾಗಿರಲಿ; ಅಸಂಗಚಿದ್ರೂಪನಾದ ನನಗೆ
ಅವುಗಳಿಂದ ಏನಾಗಬೇಕು? ಮೇಘವು ಎಲ್ಲಿಯೂ ಆಕಾಶವನ್ನು ಸೋಂಕುವು-
ದಿಲ್ಲ.
 
ಅವ್ಯಕ್ತಾದಿ-ಸ್ಕೂಥೂಲಪರ್ಯಂತಮೇತ-
ದ್ವಿಶ್ವಂ ಯತ್ರಾಭಾಸಮಾತ್ರಂ ಪ್ರತೀತಮ್ ।
ವ್ಯೋಮಪ್ರಖ್ಯಂ ಸೂಕ್ಷ್ಮಮಾದ್ಯಂತಹೀನಂ
ಬ್ರಹ್ಮಾದ್ವೈತಂ ಯುತ್ತದೇವಾಹಮಸ್ಮಿ ॥ ೫೧೧ ॥
 
ಯತ್ರ = ಯಾವುದರಲ್ಲಿ, ಅವ್ಯಕ್ತಾದಿ-ಸ್ಕೂಥೂಲಪರ್ಯಂತಂ = ಅವ್ಯಕ್ತವೇ ಮೊದ-
ಲಾಗಿ ಸ್ಥೂಲಶರೀರದ ವರೆಗಿರುವ, ಏತತ್ ವಿಶ್ವಂ = ಈ ವಿಶ್ವವು, ಆಭಾಸಮಾತ್ರಂ =