This page has not been fully proofread.

ವಿವೇಕಚೂಡಾಮಣಿ
 
[೫೦೩
 
ಛಾಯಯಾ ಸ್ಪಷ್ಟಮುಷ್ಣಂ ವಾ ಶೀತಂ ವಾ ಸುಷ್ಟು ದುಷ್ಟು ವಾ ।
ನ ಸ್ಪಶವ ಯಂಚಿತ್ ಪುರುಷಂ ತದ್ವಿಲಕ್ಷಣಮ್ ॥ ೫೦೩ ।
 
೨೫೨
 

 
ಛಾಯಯಾ - ನೆರಳಿನಿಂದ ಸ್ಪಷ್ಟಂ = ಮುಟ್ಟಲ್ಪಟ್ಟ ಉಷ್ಣಂ ವಾ = ಉಷ್ಣ
ವಾಗಲಿ ಶೀತಂ ವಾ = ಶೀತವಾಗಲಿ ಸುಟ್ಟು - ಒಳ್ಳೆಯದಾಗಲಿ ದುಷ್ಟು ವಾ -
ಕೆಟ್ಟದಾಗಲಿ ಯಂಚಿತ್ - ಯಾವುದೊಂದೂ ತದ್ವಿ ಲಕ್ಷಣಂ = ಅದಕ್ಕಿಂತ ಭಿನ್ನ
ನಾದ ಪುರುಷಂ = ಪುರುಷನನ್ನು ನ ಸ್ಪಶತಿ ಏವ = ಸೋ೦ಕುವುದೇ ಇಲ್ಲ.
 
೫೦೩, ನೆರಳಿನ ಮೂಲಕ ಮುಟ್ಟಿದ ಉಷ್ಣವಾಗಲಿ ಶೀತವಾಗಲಿ,
ಒಳ್ಳೆಯದಾಗಲಿ ಕೆಟ್ಟದಾಗಲಿ, ನೆರಳಿಗಿಂತ ಭಿನ್ನನಾದ ಪುರುಷನನ್ನು
ಸೋಂಕುವುದೇ ಇಲ್ಲ.
 
ನ ಸಾಕ್ಷಿಣಂ ಸಾಕ್ಷ್ಯಧರ್ಮಾಃ ಸಂಸ್ಕೃಶಂತಿ ವಿಲಕ್ಷಣಮ್ ।
ಅವಿಕಾರಮುದಾಸೀನಂ ಗೃಹಧರ್ಮಾಃ ಪ್ರದೀಪವತ್ ॥ ೫೦೪ ॥
 
ಗೃಹಧರ್ಮಾಃ = ಮನೆಯ ಧರ್ಮಗಳು ಪ್ರದೀಪವತ್ ದೀಪವನ್ನು ಹೇಗೋ
ಹಾಗೆ ಸಾಕ್ಷ್ಯಧರ್ಮಾಃ = ದೃಶ್ಯವಸ್ತುಗಳ ಧರ್ಮಗಳು ಆವಿಕಾರಂ = ನಿರ್ವಿಕಾರ
ನಾದ ಉದಾಸೀನಂ - ಉದಾಸೀನನಾದ ವಿಲಕ್ಷಣಂ – ವಿಲಕ್ಷಣನಾದ ಸಾಕ್ಷಿಣಂ =
ಸಾಕ್ಷಿಯನ್ನು ನ ಸಂಸ್ಕೃಶಂತಿ - ಮುಟ್ಟುವುದಿಲ್ಲ.
 
೫೦೪, ಮನೆಯ ಧರ್ಮಗಳು ಅವುಗಳನ್ನು ಪ್ರಕಾಶಿಸುವ) ಪ್ರದೀಪ
ವನ್ನು ಮುಟ್ಟದಿರುವಂತೆ ನಿರ್ವಿಕಾರನೂ ಉದಾಸೀನನೂ ವಿಲಕ್ಷಣನೂ ಆದ
ಸಾಕ್ಷಿಯನ್ನು ದೃಶ್ಯವಸ್ತುಗಳ ಧರ್ಮಗಳು ಮುಟ್ಟುವುದಿಲ್ಲ.
 
ರವೇರ್ಯಥಾ ಕರ್ಮಣಿ ಸಾಕ್ಷಿಭಾವೋ
 
ವರ್ಯಥಾ ದಾಹ-ನಿಯಾನಕತ್ವಮ್ ।
ರಜೋರ್ಯಥಾರೋಪಿತವಸ್ತು-ಸಂಗ-
ಸ್ತಥೈವ ಕೂಟಸ್ಥ-ಚಿದಾತ್ಮನೋ
 
ಮೇ
 
0.
 
ಕರ್ಮಣಿ - ಕರ್ಮದಲ್ಲಿ ರವೇಃ - ಸೂರ್ಯನಿಗೆ ಸಾಕ್ಷಿಭಾವಃ-ಸಾಕ್ಷಿತ್ವವು
ಯಥಾ - ಹೇಗೋ, ವಹೇಃ - ಅಗ್ನಿಗೆ ದಾಹ ನಿಯಾಮಕತ್ವಂ ದಹಿಸುವಿಕೆಯು
ಯಥಾ, ರಜೋ8 -ಹಗ್ಗಕ್ಕೆ ಆರೋಪಿತವಸ್ತು ಸಂಗಃ ಆರೋಪಿಸಲ್ಪಟ್ಟ ವಸ್ತು
ವಿನ ಸಂಬಂಧವು ಯಥಾ, ತಥಾ ಏವ ಹಾಗೆಯೇ ಕೂಟಸ್ಥ.ಚಿದಾತ್ಮನಃ -
ಕೂಟಸ್ಥ-ಚಿತ್ರರೂಪನಾದ ನನಗೆ [ಸಾಕ್ಷಿಭಾವವು].
 
॥ ೫೦೫ ।