This page has not been fully proofread.

೪೯೮]
 
ವಿವೇಕಚೂಡಾಮಣಿ
 
ನಾರ್ದಿಕರೋಷರ-ಭೂಮಿಭಾಗಂ
ಮರೀಚಿಕಾ-ವಾರಿ-ಮಹಾಪ್ರವಾಹಃ
 
೨೪೯
 
॥ ೪೯೭ ॥
 
ಮತಿ- ದೋಷದೂಷಿತೈಃ = ಬುದ್ಧಿಯ ದೋಷದಿಂದ ಕಲುಷಿತರಾಗಿರುವ
ಮೂಥೈಃ - ಮೂಢರಿಂದ ಆರೋಪಿತಂ - ಆರೋಪಿತವಾದದ್ದು ಕದಾ ಅಪಿ
ಎಂದಿಗೂ ಆಶ್ರಯ ದೂಷಕಂ ನ ಭವೇತ್ - ಅಧಿಷ್ಠಾನವಾದುದಕ್ಕೆ ದೋಷ
ವನ್ನುಂಟುಮಾಡುವುದಿಲ್ಲ; ಮರೀಚಿಕಾವಾರಿ-ಮಹಾಪ್ರವಾಹಃ - ಬಿಸಿಲುದುರೆಯ
ನೀರಿನ ಪ್ರವಾಹವು ಊಷರ ಭೂಮಿ. ಭಾಗ - ಮರುಭೂಮಿಯನ್ನು ನ ಆರ್ದಿ
 
ಕರೋತಿ - ನೆನೆಯಿಸಲಾರದು.
 
೪೯೭, ಬುದ್ಧಿಯ ದೋಷದಿಂದ ಕಲುಷಿತರಾಗಿರುವ ಮೂಢರಿಂದ
ಆರೋಪಿತವಾದದ್ದು ಅಧಿಷ್ಠಾನವಾದ ವಸ್ತುವಿಗೆ ಎಂದಿಗೂ ದೋಷವ
ನ್ನುಂಟುಮಾಡುವುದಿಲ್ಲ; ಬಿಸಿಲು ದುರೆಯ ನೀರಿನ ಪ್ರವಾಹವು ಮರುಭೂಮಿ
ಯನ್ನು ಎಂದಿಗೂ ನೆನೆಯಿಸಲಾರದು.
 
[ ಹೀಗಿರುವಾಗ ಯಾವುದರಲ್ಲಿ ಯಾವುದನ್ನು ಅಭ್ಯಾಸಮಾಡಿದೆಯೊ ಅದರಿಂದ
ಉಂಟಾದ ಗುಣವಾಗಲಿ ದೋಷವಾಗಲಿ ಅದಕ್ಕೆ (ಎಂದರೆ ಆಶ್ರಯಕ್ಕೆ ಸ್ವಲ್ಪವೂ
ಸಂಬಂಧಿಸಿರುವುದಿಲ್ಲ
 
ತತ್ರ ಏವಂ ಸತಿ ಯತ್ರ ಯದಧ್ಯಾಸಃ ತತ್ತೇನ
ಗುಣೇನ ದೋಷೇಣ ವಾ ಅಣುಮಾತ್ರೇಣಾಪಿ ಸ ನ ಸಂಬಧ್ಯತೇ ।
ಭಾಷ್ಯ)
 
(ಅಧ್ಯಾಸ
 
ಆಕಾಶವಲ್ಲೇಪ-ವಿದೂರಗೋsಹಮ್
ಆದಿತ್ಯವಾಸ್ಯ-ವಿಲಕ್ಷಣೋಽಹಮ್ ।
ಅಹಾರ್ಯವನ್ನಿತ್ಯ ವಿನಿಶ್ಚಲೋsಹಮ್
ಅಂಭೋಧಿವತ್ಸಾರ-ವಿವರ್ಜಿತೋಽಹಮ್
 
॥ ೪೯೮ ॥
 
ಅಹ೦ - ನಾನು ಆಕಾಶವತ್ = ಆಕಾಶದಂತೆ ಲೇಪ. ವಿದೂರಗಃ = ನಿರ್ಲಿ
ಪೆನು; ಅಹಮ್ ಆದಿತ್ಯವತ್ - ಸೂರ್ಯನಂತೆ ಭಾಸ್ಯ ವಿಲಕ್ಷಣಃ = ಬೆಳಗಲ್ಪ
ಡುವ ವಸ್ತುಗಳಿಗಿಂತ ಭಿನ್ನನು;
 
ಅಹ ಅಹಾರ್ಯವತ್- ಪರ್ವತದಂತೆ
ನಿತ್ಯ ವಿನಿಶ್ಚಲಃ= ಯಾವಾಗಲೂ ಅಚಲನಾದವನು; ಅಹಮ್ ಅಂಭೋಧಿವತ್
ಸಮುದ್ರದಂತೆ ಪಾರ. ವಿವರ್ಜಿತಃ = ಪಾರವಿಲ್ಲದವನು.
 
೪೯೮. ನಾನು ಆಕಾಶದಂತೆ ನಿರ್ಲಿಪ್ತನು. ನಾನು ಸೂರ್ಯನಂತೆ
ಬೆಳಗಲ್ಪಡುವ ವಸ್ತುಗಳಿಗಿಂತ ಅತ್ಯಂತ ಭಿನ್ನನು. ನಾನು ಪರ್ವತದಂತೆ
ಯಾವಾಗಲೂ ಅಚಲನಾದವನು. ನಾನು ಸಮುದ್ರದಂತೆ ಪಾರವಿಲ್ಲದವನು.